Published
15 hours agoon
By
Akkare Newsಪುತ್ತೂರು : ಸವಣೂರಿನ ಅಖಿಲ ಪೂಜಾರಿ ಅವರು ಪೊಲೀಸ್ ಇಲಾಖೆಯ ಎಸ್.ಐ. ಹುದ್ದೆಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಎಸ್.ಐ.ಹುದ್ದೆಗೆ ಆಯ್ಕೆಯಾಗಿದ್ದಾರೆ. ಇನ್ನೇನು ಸಧ್ಯದಲ್ಲೇ ಕೆಲಸಕ್ಕೆ ನೇಮಕಾತಿಯಾಗಬೇಕಾಗಿದೆ.
ಅಖಿಲ ಪೂಜಾರಿಯವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರು ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಕುಲಶೇಖರದ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಪ್ರೌಢ ಹಂತದ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ.
ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ಸಂತ ಆಗ್ನನ್ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಪದವಿ ಶಿಕ್ಷಣ ವನ್ನು ಮುಗಿಸಿದ್ದಾರೆ.
ಅಖಿಲ ಪೂಜಾರಿ ಮಂಗಳೂರು ಸಿಸಿಬಿಯಲ್ಲಿ ಸಹಾಯಕ ಪೊಲೀಸ್ ಉಪನಿರೀಶ್ವರಕರಾದ ದೇವಸ್ಯದ ಶೀನಪ್ಪ ಪೂಜಾರಿ ಮತ್ತು ಹೇಮಾವತಿ ಬಂಬಿಲ ದೋಳ ಅವರ ಪುತ್ರಿ.