ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಂತರರಾಷ್ಟ್ರೀಯ

ದಕ್ಷಿಣ ಕೊರಿಯಾ: ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ಬೆಂಕಿ: ಮೃತರ ಸಂಖ್ಯೆ 179ಕ್ಕೆ ಏರಿಕೆ

Published

on

ಸಿಯೋಲ್: ದಕ್ಷಿಣ ಕೊರಿಯಾದ ದಕ್ಷಿಣದಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿ ಉರಿದ ಪರಿಣಾಮ 179 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಲ್ಲಿನ ಅಗ್ನಿಶಾಮಕ ಸಂಸ್ಥೆ ತಿಳಿಸಿದೆ.

181 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಲ್ಯಾಂಡಿಂಗ್ ನಂತರ ರನ್‌ವೇಯಿಂದ ಸ್ಕಿಡ್ ಆಗಿ ಕಾಂಕ್ರಿಟ್ ತಡೆಗೋಡೆಗೆ ಅಪ್ಪಳಿಸಿದಾಗ ಬೆಂಕಿ ಆವರಿಸಿದೆ. ಅದರ ಲ್ಯಾಂಡಿಂಗ್ ಗೇರ್ ಅನ್ನು ನಿಯೋಜಿಸಲು ವಿಫಲವಾದಾಗ ಈ ದುರ್ಘಟನೆ ನಡೆದಿದೆ ಎಂದು ದೇಶದ ತುರ್ತು ಕಚೇರಿ ಹೇಳಿದೆ.

ಘಟನೆಯ ಪರಿಣಾಮವಾಗಿ ವಿಮಾನದಲ್ಲಿದ್ದ ಒಟ್ಟು 179 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇದು ದೇಶದಲ್ಲಿ ಇದುವರೆಗೆ ನಡೆದ ವಿಪತ್ತುಗಳಲ್ಲಿ ಅತ್ಯಂತ ಕೆಟ್ಟ ದುರ್ಘಟನೆಯಾಗಿದೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ಹೇಳಿದೆ.

 

ವಿಪತ್ತು ನಿರ್ವಹಣಾ ಕಾರ್ಯಕರ್ತರು ಇಬ್ಬರನ್ನು ಹೊರತೆಗೆದಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲು 32 ಅಗ್ನಿಶಾಮಕ ವಾಹನಗಳು ಮತ್ತು ಹಲವಾರು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತ್ತು ಎಂದು ಅದು ಹೇಳಿದೆ.

 

YTN ಟೆಲಿವಿಷನ್ ಪ್ರಸಾರ ಮಾಡಿದ ದುರ್ಘಟನೆಯ ದೃಶ್ಯಾವಳಿಗಳಲ್ಲಿ ಜೆಜು ಏರ್ ವಿಮಾನವು ಜಾರಿಬೀಳುವುದನ್ನು ತೋರಿಸಿದೆ. ಸ್ಪಷ್ಟವಾಗಿ ಅದರ ಲ್ಯಾಂಡಿಂಗ್ ಗೇರ್ ಇನ್ನೂ ಮುಚ್ಚಲ್ಪಟ್ಟಿದೆ ಮತ್ತು ಕಾಂಕ್ರೀಟ್ ಗೋಡೆಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 9:03ಕ್ಕೆ ಈ ಘಟನೆ ನಡೆದಿದೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.

ಸ್ಥಳೀಯ ಟಿವಿ ಚಾನೆಲ್ ಗಳು ಬೆಂಕಿ ಜ್ವಾಲೆಯಿಂದ ಸುತ್ತುವರಿದಿರುವ ವಿಮಾನದಿಂದ ದಟ್ಟ ಹೊಗೆಯ ದೃಶ್ಯಗಳನ್ನು ಪ್ರಸಾರ ಮಾಡಿವೆ. ಮುವಾನ್‌ನಲ್ಲಿನ ತುರ್ತು ನಿಗಾ ಘಟಕದ ಅಧಿಕಾರಿಗಳು ಬೆಂಕಿಗೆ ಕಾರಣವನ್ನು ಪರಿಶೀಲಿಸುತ್ತಿದ್ದಾರೆ. ವಿಮಾನವು ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿತ್ತು ಮತ್ತು ಅದರ ಪ್ರಯಾಣಿಕರಲ್ಲಿ ಇಬ್ಬರು ಥಾಯ್ ಪ್ರಜೆಗಳು ಸೇರಿದ್ದಾರೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.

ಥಾಯ್ಲೆಂಡ್‌ನ ಪ್ರಧಾನಿ ಪೇಟೊಂಗ್ಟಾರ್ನ್ ಶಿನವತ್ರಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ನೆರವು ನೀಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಆದೇಶ ನೀಡಿರುವುದಾಗಿ ವರದಿಯಾಗಿದೆ.

ದಕ್ಷಿಣ ಕೊರಿಯಾದ ವಿಮಾನಯಾನ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ. 1997ರಲ್ಲಿ ಕೊರಿಯನ್ ಏರ್‌ಲೈನ್ ವಿಮಾನವು ಗುವಾಮ್‌ನಲ್ಲಿ ಪತನಗೊಂಡು 228 ಜನರು ಸಾವನ್ನಪ್ಪಿದ್ದು ದಕ್ಷಿಣ ಕೊರಿಯಾದ ದೊಡ್ಡ ಪ್ರಮಾಣದ ವಾಯು ದುರಂತವನ್ನು ಈ ಹಿಂದೆ ಕಂಡಿತ್ತು.

 

 

ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ದೊಡ್ಡ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿರುವ ವೇಳೆ ಈ ಘಟನೆ ಸಂಭವಿಸಿದೆ. ಕಳೆದ ಶುಕ್ರವಾರ ದಕ್ಷಿಣ ಕೊರಿಯಾದ ಶಾಸಕರು ಹಂಗಾಮಿ ಅಧ್ಯಕ್ಷ ಹಾನ್ ಡಕ್-ಸೂ ಅವರನ್ನು ದೋಷಾರೋಪಣೆ ಮಾಡಿ ಅಮಾನತುಗೊಳಿಸಿದ್ದರು. ನಂತರ ಉಪಪ್ರಧಾನ ಮಂತ್ರಿ ಚೋಯ್ ಸಾಂಗ್-ಮೋಕ್ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಚೋಯ್ ಅವರು ಮುವಾನ್‌ಗೆ ಹೋಗುವ ಮೊದಲು ಪ್ರಯಾಣಿಕರು ಮತ್ತು ಸಿಬ್ಬಂದಿ ರಕ್ಷಣೆಗೆ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಅಪಘಾತದ ಕುರಿತು ಚರ್ಚಿಸಲು ಹಿರಿಯ ಅಧ್ಯಕ್ಷೀಯ ಸಿಬ್ಬಂದಿ ನಡುವೆ ನಡೆಯುವ ತುರ್ತುಸಭೆಗೆ ಅಧ್ಯಕ್ಷರ ಮುಖ್ಯ ಕಾರ್ಯದರ್ಶಿ ಚುಂಗ್ ಜಿನ್-ಸುಕ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಯೂನ್ ಅವರ ಕಚೇರಿ ತಿಳಿಸಿದೆ.

ಈ ದುರ್ಘಟನೆಯಲ್ಲಿ  ಇಬ್ಬರು ವಿಮಾನಯಾನ ಸಿಬ್ಬಂದಿ ಮಾತ್ರ ಬದುಕುಳಿದಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿ ಒಟ್ಟು 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು.  173 ಪ್ರಯಾಣಿಕರು ದಕ್ಷಿಣ ಕೊರಿಯನ್ನರು ಮತ್ತು ಇಬ್ಬರು ಥಾಯ್ ಪ್ರಜೆಗಳು ಇದ್ದರು ಎಂದು ಯೋನ್ಹಾಪ್ ವರದಿ ಮಾಡಿದೆ.

176 ಪ್ರಯಾಣಿಕರಲ್ಲಿ  84 ಮಹಿಳೆಯರು, 82 ಪುರುಷರು ಮತ್ತು ಉಳಿದ ಇತರರನ್ನು ಈ  ತಕ್ಷಣವೇ ಗುರುತಿಸಲಾಗಿಲ್ಲ. ಪ್ರಾಣಾಪಾಯವಿಲ್ಲದ ಸ್ಥಿತಿಯಲ್ಲಿದ್ದ ಇಬ್ಬರನ್ನು ತುರ್ತು ಕಾರ್ಯಕರ್ತರು ರಕ್ಷಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement