Published
3 days agoon
By
Akkare Newsಪುತ್ತೂರು ಡಿಸೆಂಬರ್ 31: ಅಕ್ರಮ-ಸಕ್ರಮ ಕಡತಗಳ ವಿಲೇವಾರಿಗೆ ಮಾಡದೇ ಐದು ವರ್ಷ ಮಾಜಿ ಶಾಸಕರು ಸುಮ್ಮನೆ ಇದ್ದು, ಅವರು ಟ್ಯಾಕ್ಸ್ ಕೊಡದ ಹಿನ್ನಲೆಯಲ್ಲಿ ಅವರ ಅವಧಿಯಲ್ಲಿ ಒಂದೇ ಒಂದು ಅಕ್ರಮ-ಸಕ್ರಮ ಕಡತ ವಿಲೇವಾರಿ ಮಾಡಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆರೋಪಿಸಿದ್ದಾರೆ.
ಹಿರೇಬಂಡಾಡಿ, ಬಜತ್ತೂರಿನ ಹಲವರು ನನ್ನ ಬಳಿಗೆ ಅಕ್ರಮ-ಸಕ್ರಮ ಕಡತ ವಿಲೇವಾರಿಗೆ ಬರುತ್ತಿದ್ದಾರೆ. ನಾನು ಅವರಲ್ಲಿ ಪ್ರಶ್ನೆ ಮಾಡಿದ್ದೆ ನಿಮ್ಮ ಊರಿನವರೇ ಶಾಸಕರಾಗಿದ್ದರು, ಅವರ ಬಳಿಗೆ ಹೋಗಿ ಕೆಲಸ ಮಾಡಿಸಬಹುದಿತ್ತಲ್ಲವೇ ಎಂದು, ಅದಕ್ಕೆ ಆ ಊರಿನ ಜನ ಮಾಜಿ ಶಾಸಕರ ಬಳಿ ಹಲವು ಬಾರಿ ಹೋಗಿದ್ದೇವೆ. ಪ್ರತಿ ಬಾರಿಯೂ ಮಾಡಿಕೊಡುತ್ತೇವೆ ಎಂದು ದಿನ ದೂಡುತ್ತಿದ್ದರು, ಇನ್ನು ಕೆಲವರಲ್ಲಿ ಟ್ಯಾಕ್ಸ್ ಕಲೆಕ್ಷನ್ ನೀಡುವಂತೆ ಹೇಳುತ್ತಿದ್ದರು, ಟ್ಯಾಕ್ಸ್ ಎನ್ನುತ್ತಿದ್ದೇನೆ, ಟ್ಯಾಕ್ಸ್ ಅಂದರೆ ಏನು ಅನ್ನೋದನ್ನು ಸಾರ್ವಜನಿಕವಾಗಿ ಹೇಳುವಂತಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಸದ್ಯ ಹಾಲಿ ಶಾಸಕರ ಟ್ಯಾಕ್ಸ್ ಮಾತಿನ ಅರ್ಥವೇನು ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.