Published
2 days agoon
By
Akkare Newsಭಾರತೀಯ ಕೋಸ್ಟ್ ಗಾರ್ಡ್‌ಗೆ ಸೇರಿದ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಧ್ರುವ್ ಭಾನುವಾರ ಅಪಘಾತಕ್ಕೀಡಾಗಿದೆ. ಗುಜರಾತ್‌ನ ಪೋರಬಂದರ್‌ನಲ್ಲಿ ತರಬೇತಿ ಸಮಯದಲ್ಲಿ ಈ ಹೆಲಿಕಾಪ್ಟರ್ ಪತನಗೊಂಡಿದ್ದು, ಹಲಿಕಾಪ್ಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಮೂವರು ಯೋಧರ ಸಹಿತ ಐವರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಹೆಲಿಕಾಪ್ಟರ್ ಪತನದ ಬಗ್ಗೆ ANI ವರದಿ ಮಾಡಿದ್ದು, ಪೋರಬಂದರ್‌ನ ಕೋಸ್ಟ್ ಗಾರ್ಡ್ ಏರ್ ಎನ್‌ಕ್ಲೇವ್‌ನಲ್ಲಿ ಈ ಘಟನೆ ನಡೆದಿ ಎಂದು ಹೇಳಿದೆ. ಅಧಿಕಾರಿಗಳ ಪ್ರಕಾರ ಹೆಲಿಕಾಪ್ಟರ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನವಾಗಿದೆ.
ಇಬ್ಬರು ಪೈಲಟ್‌ಗಳು ಸಹಿತ ಮೂವರು ಯೋಧರು ಹೆಲಿಕಾಪ್ಟರ್ ನಲ್ಲಿ ಇದ್ದಿದ್ದಾಗಿ ಮಾಹಿತಿ ಲಭ್ಯವಾಗಿದ್ದು, ಸಾವು ನೋವಿನ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಭಾರತೀಯ ಕೋಸ್ಟ್ ಗಾರ್ಡ್ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಈ ಹಿಂದೆ ಕೂಡ ಸೆಪ್ಟೆಂಬರ್‌ನಲ್ಲಿ ಇದೇ ಮಾದರಿಯ ಹೆಲಿಕಾಫ್ಟರ್ ಒಂದು ಕೋರಬಂದರ್‌ನ ಸಮುದ್ರಕ್ಕೆ ಬಿದ್ದಿತ್ತು. ಇದು ಬೆಂಗಳೂರಿನ ಹೆಚ್‌ಎಲ್‌ಎ ಅಲ್ಲಿ ವಿನ್ಯಾಸಗೊಳಿಸಿದ ಹೆಲಿಕಾಫ್ಟರ್ ಆಗಿದೆ.