Published
23 hours agoon
By
Akkare Newsಮಂಗಳೂರು: ಜ.7: ಕೇರಳ ವಿಧಾನಸಭೆ ಸಚಿವಾಲಯವು ತಿರುವನಂತಪುರದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಪುಸ್ತಕ ಮೇಳ-3ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ಪೀಕರ್ ಯು.ಟಿ. ಖಾದರ್ ಮಂಗಳವಾರ ಭಾಗವಹಿಸಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುಸ್ತಕ ಮೇಳವನ್ನು ಉದ್ಘಾಟಿಸಿದರು.
ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್. ಶಮೀರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇರಳ ವಿಧಾನ ಸಭೆಯ ವಿಪಕ್ಷ ನಾಯಕ ವಿ.ಡಿ. ಸತೀಶನ್, ಕೇರಳದ ಸಚಿವರಾದ ವಿ.ಶಿವನ ಕುಟ್ಟಿ, ಸಾಜಿ ಚೆರಿಯನ್, ಜಿ.ಆರ್. ಅನಿಲ್ ಭಾಗವಹಿಸಿದ್ದರು.
ಈ ಸಂದರ್ಭ ಲೇಖಕ ಎಂ.ಮುಕುಂದನ್‌ರನ್ನು ಸನ್ಮಾನಿಸಲಾಯಿತು. ಲೇಖಕ ದೇವದತ್ ಪಟ್ಟನಾಯಕ್ ಉಪಸ್ಥಿತರಿದ್ದರು.