Published
19 hours agoon
By
Akkare Newsಪುತ್ತೂರು: ಪಂಚ ಗ್ಯಾರಂಟಿ ಯೋಜನೆಯ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ಜನರಿಗೆ ನೆಮ್ಮದಿಯ ಜೀವನ ನೀಡಿದ್ದು ಇದೀಗ ಜನರ ಆರೋಗ್ಯ ನೀಡುವ ಉದ್ದೇಶದಿಂದ ಪ್ರತೀ ಗ್ರಾಮದಲ್ಲೂ ಮಲತ್ಯಾಜ್ಯ ಘಟಕ ನಿರ್ಮಾಣವನ್ನು ಮಾಡುತ್ತಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಕೊರ್ಳತಿಗೆ ಗ್ರಾಮದಲ್ಲಿ ಸುಮಾರು ೯೩ ಲಕ್ಷ ರೂ ವೆಚ್ಚದ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಮನುಷ್ಯರ ಮಲವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಘಟಕ ಇಲ್ಲಿ ನಿರ್ಮಾಣವಾಗಲಿದೆ. ಗ್ರಾಮೀಣಂ ಭಾಗದಲ್ಲಿ ಶೌಚ ಗುಂಡಿ ತುಂಬಿದಾಗ ಅದನ್ನು ಶುಚಿಗೊಳಿಸುವ ಕೆಲಸ ಇನ್ನು ಗ್ರಾಮ ಮಟ್ಟದಲ್ಲೇ ನಡೆಯಲಿದೆ. ವಿದೇಶಗಳಲ್ಲಿ ತಂತ್ರಜ್ಞಾನವನ್ನು ಬಳಸಿ ಇದೇ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಬಳಸುತ್ತಿದ್ದು ಅದೇ ತಂತ್ರಜ್ಞಾನ ನಮ್ಮ ದೇಶದಲ್ಲಿಯೂ ನಡೆಯಲಿದೆ ಇದರಿಂದ ಸ್ವಚ್ಚತೆಯೂ ಸಾಧ್ಯವಾಗುತ್ತದೆ ಎಂದು ಹೇಳಿದರು.
ವಲಯ ಕಾಂಗ್ರೆಸ್ ಅಧ್ಯಕ್ಷ ಕೆ ಎಸ್ ವೆಂಕಟ್ರಮಣ ಗೌಡ ಮಾತನಾಡಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ಪುತ್ತೂರಿನ ಶಾಸಕರು ಕೊಳ್ತಿಗೆ ಗ್ರಾಮದ ಅಭಿವೃದ್ದಿಗೆ ಸಾಕಷ್ಟು ಅನುದಾನವನ್ನು ನೀಡಿದ್ದಾರೆ. ಗ್ರಾಮದ ಜತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ತ್ಯಾಜ್ಯ ಘಟಕಕ್ಕೆ ೯೩ ಲಕ್ಷ ಮಂಜೂರು ಮಾಡಿಸಿದ್ದಾರೆ. ಅಭಿವೃದ್ದಿಯಲ್ಲಿ ರಾಜಕೀಯ ಮಾಡದ ಶಾಸಕರು ಗ್ರಾಮದ ಜತೆಯ ಅಕ್ರಮ ಸಕ್ರಮ ಮತ್ತು ೯೪ ಸಿ ಹಕ್ಕು ಪತ್ರವನ್ನು ಬೇದಭಾವವಿಲ್ಲದೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕೆಪಿಸಿಸ ವಕ್ತಾರ ಅಮಲ ರಾಮಚಂದ್ರ ರವರು ಮಾತನಡಿ ಹೊಸ ಯೋಜನೆಗಳು ಏನೆಲ್ಲಾ ಸೃಷ್ಟಿಯಾಗುತ್ತದೆಯೋ ಅದೆಲ್ಲವನ್ನು ಕ್ಷೇತ್ರಕ್ಕೆ ತರುವ ಮೂಲಕ ಶಾಸಕರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂದಿನ ಮೂರು ವರ್ಷದಲ್ಲಿ ಪುತ್ತೂರು ಸಾಕಷ್ಟು ಅಭಿವೃದ್ದಿ ಹೊಂದಲಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಉಪಾಧ್ಯಕ್ಷ ಪ್ರಮೋದ್ ಕೆ ಎಸ್ ಸದಸ್ಯರಾದ ವಸಂತಕುಮಾರ್ ರೈ, ಕೆಪಿಸಿಸಿ ವಕ್ತಾರ ಅಮಲರಾಮಚಂದ್ರ, ಯತೀಂದ್ರ ಕೊಚ್ಚಿ, ವಲಯ ಅಧ್ಯಕ್ಷರಾದ ಕೆ ಎಸ್ ವೆಂಕಟ್ರಮಣ, ಮಾಜಿ ತಾಲೂಕು ಪಂಚಾಯತ್ ಸದಸ್ಯ ರಾಮಪಂಬಾರ್,ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಯಶೋಧರ ಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಶ್ಯಾಂಸುಂದರ್ ರೈ, ಬೂತ್ ಅಧ್ಯಕ್ಷ ಲಿಂಗಪ್ಪ ಪೂಜಾರಿ, ವಿಷ್ಣುಭಟ್ ಎಕ್ಕಡ್ಕ, ಪಿಡಿಒ ಸುನಿಲ್, ಸತ್ತಾರ್ ಅಮಲ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಪವನ್ ಡಿ ಜಿ, ಚಂದ್ರಹಾಸ ರೈ ಬೋಳೋಡಿ, ಮತ್ತಿತರರು ಉಪಸ್ಥಿತರಿದ್ದರು.