ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

SDPI ಮಂಗಳೂರು ನಗರ ಮತ್ತು ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ ನಗರ ಜಿಲ್ಲಾದ್ಯಕ್ಷರಾಗಿ ಜಲೀಲ್ ಕೆ ಮತ್ತು ಗ್ರಾಮಾಂತರ ಜಿಲ್ಲಾದ್ಯಕ್ಷರಾಗಿ ಅನ್ವರ್ ಸಾದತ್ ಆಯ್ಕೆ

Published

on

ಮಂಗಳೂರು : ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳನ್ನು ತಲಾ ನಾಲ್ಕರಂತೆ ವಿಭಜಿಸಿ ಪಕ್ಷದ ಮಂಗಳೂರು ಗ್ರಾಮಾಂತರ ಮತ್ತು ಮಂಗಳೂರು ನಗರ ಜಿಲ್ಲಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ . ನೂತನ ಮಂಗಳೂರು ನಗರ ಜಿಲ್ಲಾದ್ಯಕ್ಷರಾಗಿ ಅಬ್ದುಲ್ ಜಲೀಲ್ ಕೆ ಹಾಗೂ ಮಂಗಳೂರು ಗ್ರಾಮಾಂತರ ಜಿಲ್ಲಾದ್ಯಕ್ಷರಾಗಿ ಅನ್ವರ್ ಸಾದತ್ ಆಯ್ಕೆಯಾಗಿದ್ದಾರೆ.


 

ಮಂಗಳೂರಿನ ಪುರಭವನದಲ್ಲಿ ಇಂದು ನಡೆದ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ
ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಆರಂಭವಾದ ಪ್ರತಿನಿಧಿ ಸಭೆಯಲ್ಲಿ 2021-24 ರ ಅವಧಿಯ ವರದಿಯನ್ನು ಮಂಡಿಸಲಾಯಿತು,

 

ಹಾಗೂ ಜಿಲ್ಲೆ, ರಾಜ್ಯದ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು, ಪಕ್ಷವನ್ನು ಜಿಲ್ಲೆಯಲ್ಲಿ ಆಡಳಿತಾತ್ಮಕವಾಗಿ ಸಂಘಟಿಸುವ ನಿಟ್ಟಿನಲ್ಲಿ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ವಿಧಾನಸಭಾ ಕ್ಷೆತ್ರಗಳನ್ನು ಒಳಗೊಂಡ ಮಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಡಬಿದ್ರೆ ಕ್ಷೇತ್ರಗಳನ್ನು ಒಳಗೊಂಡ ಮಂಗಳೂರು ನಗರ ಜಿಲ್ಲೆಯನ್ನ ಅಸ್ತಿತ್ವಕ್ಕೆ ತರಲಾಯಿತು ಬಳಿಕ ನಡೆದ ಆಂತರಿಕ ಚುನಾವಣೆಯಲ್ಲಿ ಪಕ್ಷದ ಎರಡೂ ಜಿಲ್ಲೆಗಳ ನಾಯಕತ್ವನ್ನು ಆರಿಸಲಾಯಿತು, ಮಂಗಳೂರು ಗ್ರಾಮಾಂತರ ಜಿಲ್ಲೆಯ ಉಪಾಧ್ಯಕ್ಷರುಗಳಾಗಿ , ಇನಾಸ್ ರೊಡ್ರಿಗಸ್, ಮೂನಿಷ್ ಅಲಿ ಬಂಟ್ವಾಳ, ಪ್ರಧಾನ ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಸಿದ್ದೀಕ್ ಪುತ್ತೂರು, ಹಾಗೂ ಸಿದ್ದೀಕ್ ಅಲೆಕ್ಕಾಡಿ, ಕಾರ್ಯದರ್ಶಿಗಳಾಗಿ ಅಶ್ರಫ್ ತಲಪಾಡಿ, ಶಾಕಿರ್ ಅಳಕೆ ಮಜಲು, ನವಾಝ್ ಕಟ್ಟೆ, ಕೋಶಾಧಿಕಾರಿಯಾಗಿ ರಹೀಮ್ ಇಂಜಿನಿಯರ್ ಮತ್ತು ಸಮಿತಿ ಸದಸ್ಯರಾಗಿ, ಆನಂದ ಮಿತ್ತಬೈಲ್, ಅಬೂಬಕ್ಕರ್ ಮದ್ದ, ಅಬ್ದುಲ್ ಕಲಾಂ ಸುಳ್ಯ, ಅಡ್ವೋಕೇಟ್ ಮುಹಮ್ಮದ್ ಕಬೀರ್ ಕೆಮ್ಮಾರ, ಹನೀಫ್ ಪುಂಜಾಲಕಟ್ಟೆ, ಝೀನತ್ ಗೂಡಿನಬಳಿ ಯವರು ಆಯ್ಕೆಯಾಗಿದ್ದಾರೆ, ಮಂಗಳೂರು ನಗರ ಜಿಲ್ಲೆಯ ಉಪಾಧ್ಯಕ್ಷರಾಗಿ, ಅಶ್ರಫ್ ಅಡ್ಡೂರು, ಆಯಿಷಾ ಬಜ್ಪೆ, ಪ್ರಧಾನ ಕಾರ್ಯದರ್ಶಿಗಳಾಗಿ ಜಮಾಲ್ ಜೋಕಟ್ಟೆ, ಶಮೀರ್ ಜೋಕಟ್ಟೆ, ಕಾರ್ಯದರ್ಶಿಗಳಾಗಿ ಸುಹೈಲ್ ಖಾನ್, ಇಕ್ಬಾಲ್ ಕೆತ್ತಿಕಲ್, ನಿಸಾರ್ ಮರವೂರು ಕೋಶಾಧಿಕಾರಿ ಮೂಸಬ್ಬ ತುಂಬೆ ಸಮಿತಿ ಸದಸ್ಯರುಗಳಾಗಿ ನೂರುಲ್ಲಾ ಕುಳಾಯಿ, ಶಾಹುಲ್ ಹಮೀದ್ ಕಾಶಿಪಟ್ನ, ಅಕ್ಬರ್ ರಾಝ, ಶಂಶಾದ್ ಅಬೂಬಕ್ಕರ್, ಯಾಸಿನ್ ಅರ್ಕುಳ ಆಯ್ಕೆ ಯಾಗಿದ್ದಾರೆ.

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement