Published
9 hours agoon
By
Akkare Newsಪುತ್ತೂರು :ಜನವರಿ 9: ಪುತ್ತೂರು ತಾಲೂಕು ಚೆಲ್ಲಡ್ಕ ಸೇತುವೆ ಕಾಮಗಾರಿಯನ್ನು ಹೊಸದಾಗಿ ಪ್ರಾರಂಭಿಸಬೇಕಾಗಿರುವುದರಿಂದ ಇರ್ದೆ ಗ್ರಾಮದ ಒಳತ್ತಡ್ಕ ದೇವಸ್ಯದಿಂದ ಬೆಟ್ಟಂಪಾಡಿಯಿಂದ ಪಾಣಾಜೆ ಕಡೆಗೆ ಹೋಗುವ ವಾಹನಗಳಿಗೆ ಈ ರಸ್ತೆಯಲ್ಲಿ ಜನವರಿ 6 ರಿಂದ ಮೇ 9 ರವರೆಗೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಆದೇಶಿಸಿದ್ದಾರೆ.
ಪುತ್ತೂರು ತಾಲೂಕಿನ ಶಿಥಿಲಗೊಂಡ ಚೆಲ್ಯಡ್ಕ ಮುಳುಗು ಸೇತುವೆಯನ್ನು ಕೆಡವಿ ಹೊಸ ಸೇತುವೆ ಕಾಮಗಾರಿಯನ್ನು ಪ್ರಾರಂಭಿಸ ಬೇಕಾಗಿರುವುದರಿಂದ ಬದಲಿ ರಸ್ತೆಯಾದ ದೇವಸ್ಯ- ಬೈರೋಡಿ- ಕಾಪಿಕಾಡು- ಕೈಕಾರು ಮಾರ್ಗದ ಮೂಲಕ ಸಂಚರಿಸುವಂತೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.