Published
4 hours agoon
By
Akkare Newsಪುತ್ತೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವಜನ ಒಕ್ಕೂಟ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ತಾಲೂಕು ಯುವ ಪ್ರಶಸ್ತಿ ಪ್ರದಾನ ೨೦೨೫ ಜ.೧೫ರಂದು ಬೆಳಗ್ಗೆ ೧೧ಕ್ಕೆ ಆಸ್ಮಿ ಕಂಫರ್ಟ್ ಸಭಾಭವನದಲ್ಲಿ ನಡೆಯಲಿದೆ ಎಂದು ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಹೇಳಿದರು.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಗರ ಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಶಸ್ತಿ ಪ್ರಧಾನವನ್ನು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ನಡೆಸಲಿದ್ದಾರೆ. ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಪ್ರಾಂಶುಪಾಲ್ ಬಿ.ವಿ.ಸೂರ್ಯನಾರಾಯಣ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಯುವಪ್ರಶಸ್ತಿ ಪ್ರದಾನ
ವೈಯಕ್ತಿಕ ವಿಭಾಗದಲ್ಲಿ ಕಾರ್ಯಕ್ರಮ ನಿರೂಪಕ ಶಿಕ್ಷಕ ಬಾಲಕೃಷ್ಣ ಪೊರ್ದಾಳ್, ನಾಟಕ ಕಲಾವಿದ ಕೃಷ್ಣಪ್ಪ, ಸಾಮಾಜಿಕ ಸೇವೆಯ ಪ್ರಣವ ಭಟ್, ಕಾಮಿಡಿ ಕಿಲಾಡಿಯ ಭವ್ಯಾ ಪುತ್ತೂರು ಹಾಗೂ ಸಮಾಜಸೇವೆಯಲ್ಲಿ ನವೀನ್ ರೈ ಬನ್ನೂರು ಆಯ್ಕೆಯಾಗಿದ್ದಾರೆ. ಆನಡ್ಕ ವಿಷ್ಣು ಯುವಕ ಮಂಡಲ, ಸಿಟಿಗುಡ್ಡೆ ಶ್ರೀಕೃಷ್ಣ ಯುವಕ ಮಂಡಲ, ಬಲ್ನಾಡು ವಿನಾಯಕ ಸ್ಪೋರ್ಟ್್ಸ ಕ್ಲಬ್, ಓಜಾಲ ವಾಸುಕಿ ಸ್ಪೋರ್ಟ್್ಸ ಕ್ಲಬ್, ಅಡ್ಯಾಲು ಮೊಸರು ಕುಡಿಕೆ ಸಮಿತಿ, ಸರ್ವೆ ಗೌರಿ ಮಹಿಳಾ ಮಂಡಲ, ಬನ್ನೂರು ಸ್ಪೂರ್ತಿ ಬಾಲಸಭಾ, ಶಿವನಗರ ಶಿವಮಣಿ ಬಾಲ ಸಮಿತಿ ಆಯ್ಕೆ ಗೊಂಡಿದೆ. ಅತ್ಯುತ್ತಮ ಎನ್‌ಎಸ್‌ಎಸ್ ಘಟಕವಾಗಿ ಸಂತ ಫಿಲೋಮಿನಾ ಪದವಿ ಕಾಲೇಜು ಘಟಕ ಆಯ್ಕೆಯಾಗಿದೆ ಎಂದು ತಿಳಿಸಿದರು.ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಪಿ. ಎಂ. ಅಶ್ರಫ್, ಕಾರ್ಯದರ್ಶಿ ವಸಂತ್ ಶಂಕರ್ ಉಪಸ್ಥಿತರಿದ್ದರು.