Published
3 hours agoon
By
Akkare Newsಪುತ್ತೂರು : ನರಿಮೊಗರು ಶಾಲೆಯಲ್ಲಿಎಲ್.ಕೆ.ಜಿ. ಮಕ್ಕಳ ಗ್ರೀನ್ ಡೇ ಕಾರ್ಯಕ್ರಮದ ಅಂಗವಾಗಿ ದಾನಿಗಳ ಸಹಕಾರದೊಂದಿಗೆ ಅಡಿಕೆ ಗಿಡವನ್ನು ನೆಟ್ಟು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಅಡಿಕೆ ಗಿಡದ ಬುಡವನ್ನು ಸ್ವಚ್ಚ ಗೊಳಿಸಿದರು ಸಾಮಾಜಿಕ ಕಾರ್ಯಕರ್ತ ಎಸ್.ಡಿ.ಎಂ.ಸಿ ಸದಸ್ಯ ಪ್ರವೀಣ್ ಆಚಾರ್ಯ ನರಿಮೊಗರು ತನ್ನ ಮನೆಯಲ್ಲಿ. ಮಾಡಿರುವ ಸಾವಯವ ಗೊಬ್ಬರವನ್ನು ಶಾಲೆಗೆ ಉಚಿತವಾಗಿ ನೀಡಿ ಮತ್ತು ಶಾಲೆಯಿಂದ ನೀಡಿದ ಪೈಪ್ ಲೈನ್ ದುರಸ್ತಿಗೆ ಸಹಕರಿಸಿದ ಪ್ರವೀಣ್ ಪೂಜಾರಿ ಮತ್ತು ಸಲೀಂ ಮಾಯಂಗಲ ಇವರಿಗೆ ಹೃತ್ಪೂರ್ವಕ ಧನ್ಯವಾದಗಳು .
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಲತಾ ರೈ ಮೇಗಿನ ಗುತ್ತು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಸೌಮ್ಯ ಹಾಗೂ ಸದಸ್ಯರಾದ ಅಶ್ವಿನಿ, ಗಾಯತ್ರಿ, ರಮ್ಯಾ, ನಸೀಮಾಬಾನು, ಸರಸ್ವತಿ, ಶೋಭಾ, ಪ್ರವೀಣ್ ಪೂಜಾರಿ, ಪ್ರವೀಣ್ ಆಚಾರ್ಯ ಮತ್ತು ಸಲೀಂ ಮಾಯಂಗಲ ಇವರಿಗೆ ಶಾಲೆಯ ಶಿಕ್ಷಕರು ಧನ್ಯವಾದ ಸಲ್ಲಿಸಿದರು.