Published
5 hours agoon
By
Akkare Newsಶ್ರೀ ಒಟೆಚರಾಯ – ಕಲ್ಕುಡ ದೈವಗಳ ದೊಂಪದಬಲಿ ಕ್ಷೇತ್ರ, ಸಂಪಿಗೆಕೋಡಿ, ಕಳೆಂಜ, ಪೆರ್ನೆ, ವರ್ಷಾವಧಿ ನೇಮೊತ್ಸವವು ನಡೆಯಲಿದೆ.
ಆ ಪ್ರಯುಕ್ತ ಕಳೆಂಜ ಗ್ರಾಮದ ಧರ್ಮದೈವಗಳ ದೊಂಪದ ಬಲಿ ನೇಮೋತ್ಸವದ ಪೂರ್ವಭಾವಿ ಸಭೆಯನ್ನು ಕಳೆಂಜ ಗುತ್ತಿನ ಮನೆಯಲ್ಲಿ ನಡೆಸಲಾಯಿತು.
ಗ್ರಾಮ ದೈವವಾದ ಶ್ರೀ ಒಟೆಚರಾಯ ಮತ್ತು ರಾಜನ್ ದೈವ ಕಲ್ಕುಡ ದೈವಗಳ ವರ್ಷಾವಧಿ ದೊಂಪದಬಲಿ ನೇಮತ್ಸೊವವನ್ನು ಫೆಬ್ರವರಿ 14-2-2025 ಶುಕ್ರವಾರ ರಂದು ದೊಂಪದಬಲಿ ಹಾಗೂ ಫೆಬ್ರವರಿ 15-2-2025 ಶನಿವಾರ ರಂದು ಗುಳಿಗ ದೈವದ ಮಾರಿಸೇವೆಯನ್ನು ನಡೆಸಲಾಗುವುದು. ಎಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇನ್ನೂ ಈ ಸಭೆಯಲ್ಲಿ ಪೂರ್ವ ತಯಾರಿಯ ಬಗ್ಗೆ
ಗೋಪಾಲ್ ಶೆಟ್ಟಿ ಸಂಪಿಗೆಕೊಡಿ, ಮಾಹಿತಿ ನೀಡಿದರು ಹಾಗೂ ಕಳೆಂಜ ಗುತ್ತಿನ ಮನೆಯ ಶ್ರೀನಿರ್ಮಲ್ ಕುಮಾರ್ ಜೈನ್ ನ್ಯಾಯವಾದಿ ಪುತ್ತೂರು, ಶ್ರೀಮತಿ ಪದ್ಮಾಸಿನಿ ಜೈನ್, ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಊರ ಗ್ರಾಮಸ್ಥರು ‘ಟೀಮ್ ಕಳೆಂಜ ಗ್ರಾಮಸ್ಥರು’ ಗ್ರೂಪಿನ ಸರ್ವ ಸದಸ್ಯರು ಉಪಸ್ಥಿತರಿದ್ದರು.