ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕಾರ್ಯಕ್ರಮಗಳು

ಬೆಳ್ಳಿಪ್ಪಾಡಿ ಸ.ಉ ಹಿ ಪ್ರಾ ಶಾಲಾ ವಾರ್ಷಿಕೋತ್ಸವ ಕನ್ನಡದ ಜೊತೆ ಇಂಗ್ಲೀಷ್ ಶಿಕ್ಷಣ ಅತೀ ಅಗತ್ಯವಾಗಿದೆ: ಅಶೋಕ್ ರೈ

Published

on

ಪುತ್ತೂರು: ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಅಂಗ್ಲ ಮಾಧ್ಯಮ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಗುತ್ತಿದ್ದು ಕನ್ನಡದ ಜೊತೆ ಇಂಗ್ಲೀಷ್ ಶಿಕ್ಷಣ ಅತೀ ಅಗತ್ಯವಾಗಿದ್ದು ಅದು ಕಾಲದ ಬೇಡಿಕೆಯಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಬೆಳ್ಳಿಪ್ಪಾಡಿ ಸರಕಾರಿ ಉನ್ನತ ಹಿ ಪ್ರಾ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲ. ಸರಕಾರ ಅಧಿಕಾರಕ್ಕೆ ಬಂದ ತಕ್ಷಣದಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲಾಗಿದೆ. ರಾಜ್ಯ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವನ್ನು ನೀಡುತ್ತಿದೆ. ಸರಕಾರಿ ಶಾಲೆಯಲ್ಲಿ ಯಾವುದೇ ಸೌಲಭ್ಯಗಳ ಕೊರತೆಯೂ ಇಲ್ಲ, ಮಕ್ಕಳ ಸಂಖ್ಯೆ ಕಡಿಮೆ ಇದ್ದು ಅದನ್ನು ಹೆಚ್ಚಿಸುವಲ್ಲಿ ಪೋಷಕರು ಮುತುವರ್ಜಿವಹಿಸಬೇಕು ಎಂದು ಹೇಳಿದರು. ವಿದ್ಯಾರ್ತಿಗಳ ಕೊರತೆಯ ಕಾರಣಕ್ಕೆ ಯಾವುದೇ ಸರಕಾರಿ ಶಾಲೆ ಮುಚ್ಚಬಾರದು, ಸರಕಾರಿ ಶಾಲೆಗಳು ಮುಚ್ಚಿದರೆ ಅದರಿಂದ ಮುಂದೆ ದೊಡ್ಡ ಮಟ್ಟ ಪರಿಣಾಮವನ್ನು ಎದುರಿಸಬೇಕಾಗಿ ಬರಬಹುದು ಎಂದು ಹೇಳಿದ ಶಾಸಕರು ಸರಕಾರಿ ಶಾಲೆಗಳಲ್ಲಿ ಮಾತ್ರ ತರಬೇತಿ ಪಡೆದ ಶಿಕ್ಷಕರನ್ನು ಸರಕಾರ ನೇಮಕ ಮಾಡುತ್ತದೆ ಎಂದು ಹೇಳಿದರು. ಪ್ರತೀ ಎರಡು ಗ್ರಾಮಕ್ಕೆ ಒಂದು ಕೆಪಿಎಸ್ ಮಾದರಿಯ ಶಾಲೆಯನ್ನು ಪ್ರಾರಂಭಿಸುವ ಬಗ್ಗೆ ಸರಕಾರ ಈಗಾಗಲೇ ಚಿಂತನೆ ನಡೆಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹಲವು ಗ್ರಾಮಗಳಲ್ಲಿ ಕೆಪಿಎಸ್ ಶಾಲೆಗಳು ಪ್ರಾರಂಭವಾಗಲಿದೆ ಎಂದು ಶಾಸಕರು ತಿಳಿಸಿದರು.

 

ಶಿಕ್ಷಕರ ಜೊತೆ ಪೋಷಕರು ಸಂಬಂಧಿರಿಸಕೊಂಡಲಿ ಮಕ್ಕಳ ಶೈಕ್ಷನಿಕ ಬೆಳವಣಿಗೆಗೆ ಪೂರಕವಾಗುತ್ತದೆ, ಪೋಷಕರು ಶಾಲೆಯಿಂದ ದೂರವಾಗದೆ ಹತ್ತಿರವಾಗಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಪಿ ಆಳ್ವ, ರಾಮಣ್ಣ ಗೌಡ ಮುಂಡೋಳೆ, ಉಷಾ ಲಕ್ಷ್ಮಣಪೂಜಾರಿ, ರಾಮಚಂದ್ರ ಪೂಜಾರಿ, ಪ್ರಭಾರ ಶಿಕ್ಷಕಿ ಸುಮಿತ್ರ, ಪದ್ಮನಾಭ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ವಾಸುದೇವ ಆಚಾರ್ಯ, ಉ ಪಾಧ್ಯಕ್ಷೆ ಪ್ರೇಮಲತಾ ಕುಂಟಾಪು, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ನೀಲಪ್ಪ ಗೌಡ ಬೆಳ್ಳಿಪ್ಪಾಡಿ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಸುಂದರ ಸಾಲಿಯಾನ್, ಶಾಂತಿನಗ ಶಾಲೆಯ ಮುಖ್ಯ ಶಿಕ್ಷಕ ವಿಷ್ಣುಪ್ರಸಾದ್, ನಿವೃತ್ತ ಶಿಕ್ಷಕಿ ಜಯಂತಿ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಯಶೋದ ಸ್ವಾಗತಿಸಿ ವಂದಿಸಿದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement