Published
7 hours agoon
By
Akkare Newsಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ. ಟ್ರಸ್ಟ್ ರಿ. ಬಂಟ್ವಾಳ ಯೋಜನಾ ವ್ಯಾಪ್ತಿಯಲ್ಲಿ ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಅಭಿವೃಧ್ಧಿಗಾಗಿ ಸ್ವ-ಸಹಾಯ ಸಂಘಗಳ ಮುಖಾಂತರ ಅನುಷ್ಠಾನ ಮಾಡಲಾಗುತ್ತಿರುವ ಕಾರ್ಯಕ್ರಮಗಳ ಹಾಗೂ ಸಿಡ್ಬಿ ಸಾಲ ಪಡಕೊಂಡು ಸ್ವ ಉದ್ಯೋಗ ಮಾಡಿಕೊಂಡಿರುವ ಸದಸ್ಯರ ಅಧ್ಯಯನ ಮಾಡಲು ವರ್ಲ್ಡ್ ಬ್ಯಾಂಕ್ ನ ಅಮಿತ್ ಅರೋರ ಜಿ ,ಗೇಟ್ಸ್ ಫೌಂಡೇಷನ್ ನ ಅಂಜಿನಿ ಕುಮಾರ್ ಜಿ , ಮತ್ತು ಸಾಧನ್ ನ ನೀರಜ್ ಪೋಕ್ರಿಯಲ್ ರವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರದೇಶಕರಾದ ಮಹಾಬಲ ಕುಲಾಲ್, ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ಜಿಲ್ಲಾ ಎಂ.ಐ.ಎಸ್. ಯೋಜನಾಧಿಕಾರಿ ಪ್ರಾಮನಾಥ್.ಹೆಚ್, ಕರಾವಳಿ ಪ್ರಾದೇಶಿಕ ವಿಬಾಗದ ಬಿ.ಸಿ. ಯೋಜನಾಧಿಕಾರಿ ಸುಪ್ರೀತ್ ಕುಮಾರ್ ಜೈನ್. ಸಂವಹಣಾ ಯೋಜನಾಧಿಕಾರಿ ಅಜಿತ್ ಹೆಗ್ಡೆ ವಲಯ ಮೇಲ್ವಿಚಾರಕರಾಕಿ ವೇದಾವತಿ, ಸೇವಾಪ್ರತಿನಿಧಿಗಳು ಮತ್ತು ಸಂಘದ ಸದಸ್ಯರು ಹಾಜರಿದ್ದು ಮಾಹಿತಿ ನೀಡಿದರು. ಗುಂಪಿನ ಹಾಗೂ ಸದಸ್ಯರ ಧಾಖಲಾತಿಗಳ ನಿರ್ವಹಣೆ, ಸಂಘದ ಆರ್ಥಿಕ ವ್ಯವಹಾರ ಹಾಗೂ ಆರ್ಥಿಕ ವ್ಯವಹಾರದಲ್ಲಿನ ಬದ್ದತೆ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.