Published
7 hours agoon
By
Akkare Newsದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಡಹಗಲೇ ಐದು ಮಂದಿ ಆಗಂತುಕರ ತಂಡವೊಂದು ಫಿಯೆಟ್ ಕಾರಿನಲ್ಲಿ ಬಂದು ಬಂದೂಕು ತೋರಿಸಿ ಬ್ಯಾಂಕ್ ದರೋಡೆ ಮಾಡಿರುವ ಘಟನೆಯೊಂದು ನಡೆದಿದೆ. ಉಳ್ಳಾಲ ತಾಲೂಕಿನ ಕೆ.ಸಿ.ರೋಡ್ ಶಾಖೆಯ ಕೋಟೆಕಾರು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಈ ದರೋಡೆ ಘಟನೆ ನಡೆದಿದೆ.
ಮಾರಕಾಸ್ತ್ರಗಳನ್ನು ತೋರಿಸಿ, ಚಿನ್ನಾಭರಣ, ನಗದುಗಳನ್ನೆಲ್ಲ ದೋಚಿ ಬರೋಬ್ಬರಿ 10-12 ಕೋಟಿ ಹಣ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಪ್ಲ್ಯಾನ್ ಹೇಗಿತ್ತು?
ಇಂದು ಶುಕ್ರವಾರ ಆಗಿರುವ ಕಾರಣ ಮುಸ್ಲಿಮರು ನಮಾಜ್‌ಗೆ ಮಧ್ಯಾಹ್ನ ಮಸೀದಿಗೆ ತೆರಳಿದ್ದು, ಸಿಎಂ ಕಾರ್ಯಕ್ರಮ ಕೂಡಾ ಇದ್ದುದ್ದರಿಂದ ಹೆಚ್ಚಿನ ಪೊಲೀಸರು ಅಲ್ಲಿದ್ದರು. ಹಾಗೂ ಬ್ಯಾಂಕಿನ ಸಿಸಿ ಕ್ಯಾಮೆರಾ ಕೂಡಾ ಇಂದೇ ರಿಪೇರಿಗೆ ನೀಡಲಾಗಿತ್ತು. ಹಾಗಾಗಿ ಇಡೀ ರಸ್ತೆಯ ಉದ್ದಕ್ಕೂ ಸಿಸಿಟಿವಿಯ ಪತ್ತೆ ಇಲ್ಲ. ಇದನ್ನೆಲ್ಲ ಗಮನಿಸಿಯೇ ದರೋಡೆ ಮಾಡಲಾಗಿದೆ. ಹಾಗೆನೇ ಇನ್ನೊಂದು ವಿಷಯವೇನೆಂದರೆ ಒಬ್ಬ ಸೆಕ್ಯೂರಿಟಿ ಕೂಡಾ ಇಲ್ಲ. ಆಗಂತುಕರು ತಾವು ದರೋಡೆ ಮಾಡಿದ ಹಣವನ್ನು ನಾಲ್ಕೈದು ಚೀಲದಲ್ಲಿ ತುಂಬಿ ಎಸ್ಕೇಪ್ ಆಗಿದ್ದಾರೆ. ಇದೊಂದು ಪಕ್ಕಾ ಪ್ಲ್ಯಾನ್ ಮಾಡಿ ದರೋಡೆ ಮಾಡಿರುವ ಘಟನೆಯೆಂದು ಹೇಳಲಾಗುತ್ತಿದೆ.
ಇದೇ ಬ್ಯಾಂಕ್‌ನಲ್ಲಿ ಐದು ವರ್ಷಗಳ ಹಿಂದೆಯೇ ಕಳ್ಳತನ ಘಟನೆಯೊಂದು ನಡೆದಿತ್ತು. ಗನ್, ತಲ್ವಾರ್, ಚಾಕು ತೋರಿಸಿ ದರೋಡೆ ನಡೆದಿತ್ತು. ಇದೀಗ ಅದೇ ಮಾದರಿಯಲ್ಲಿ ಮತ್ತೊಮ್ಮೆ ದರೋಡೆ ಮಾಡಲಾಗಿದೆ. ದರೋಡೆಕೋರರ ಪತ್ತೆಗೆ ಪೊಲೀಸರ ಎರಡು ತಂಡ ರಚನೆಯಾಗಿದೆ.
ಮಂಗಳೂರು ಜಿಲ್ಲಾ ಪ್ರವಾಸದಲ್ಲಿ ಇರುವ ಸಿಎಂ ಸಿದ್ದರಾಮಯ್ಯ ಅವರು ಇರುವಾಗಲೇ ಈ ದರೋಡೆ ನಡೆದಿದೆ. ಈ ಕುರಿತು ಸಿಎಂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆಯನ್ನು ಮಾಡಿದ್ದು, ಪೊಲೀಸ್ ಹಿರಿಯ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ. ಟೋಲ್, ಕೇರಳ ಗಡಿಯಲ್ಲಿನ ಸಿಸಿ ಕ್ಯಾಮರಾಗಳನ್ನೆಲ್ಲ ಪರಿಶೀಲನೆ ಮಾಡಲು ಸಿಎಂ ಖಡಕ್ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ.