Published
2 months agoon
By
Akkare Newsಪುತ್ತೂರು : ತೀವ್ರ ಅನಾರೋಗ್ಯ ಪೀಡಿತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಸಹಾಯ ದೊರೆಯುತ್ತಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ನೂರಾರು ಅರ್ಜಿಗಳು ಈಗಾಗಲೇ ಬಂದಿದ್ದು ಆದ್ಯತೆ ಮೇರೆಗೆ ಪರಿಹಾರ ನೀಡಲಾಗುತ್ತಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ತನ್ನ ಕಚೇರಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಈರ್ವರಿಗೆ ಪರಿಹಾರ ಚೆಕ್ ವಿತರಣೆ ಮಾಡಿದರು.
ಈಗಾಗಲೇ ಕಳೆದ ಎರಡು ವರ್ಷದಲ್ಲಿ ನೂರಕ್ಕೂ ಮಿಕ್ಕಿ ಮಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯ ಸಿಕ್ಕಿದೆ ಇದಕ್ಕಾಗಿ ಸೀಎಂ ಅವರಿಗೆ ಒತ್ತಡವನ್ನು ತರುತ್ತಿದ್ದೇನೆ, ಕಷ್ಟದಲ್ಲಿರುವವರಿಗೆ ನೆರವು ನೀಡುವುದು ಪುಣ್ಯದ ಕೆಲಸ ಅದಕ್ಕಾಗಿ ನನ್ನಿಂದಾದ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು. ಪುತ್ತೂರು ತಾಲೂಕು ಸರ್ವೆ ಗ್ರಾಮದ ಮರಿಯಾ ಮನೆ ರಾಜೀವಿ ಅವರಿಗೆ ೧೫ ಸಾವಿರ ಹಾಗೂ ಒಳಮೊಗ್ರು ಗ್ರಾಮದ ನೀರ್ಪಾಡಿ ನಿವಾಸಿ ಸಾಯಿನಿಧಿ ಅವರಿಗೆ ೨೦, ಸಾವಿರ ಪರಿಹಾರ ಧನ ನೀಡಲಾಯಿತು.