Connect with us

ಸಿನಿಮಾ

ಜ.31ರಂದು ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾ ತೆರೆಗೆ

Published

on

ಉಡುಪಿ: ರೋಹನ್ ಕಾರ್ಪೊರೇ ಷನ್’ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಸೆಂಟ್ ಪ್ರೊಡಕ್ಷನ್, ಎಚ್.ಪಿ. ಆರ್ ಫಿಲ್ಡ್- ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಎನ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ತಯಾರಾದ ‘ಮಿಡ್ಸ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಜನವರಿ 31 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.

 

 

 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಯೋಜಕರು ಮಂಗಳೂರಿನ ರೂಪವಾಣಿ, ಭಾರತ್ ಮಾಲ್’ನ ಬಿಗ್ ಸಿನಿಮಾಸ್, ಪಿವಿಆರ್,ಸಿನಿಪೊಲಿಸ್, ಭಾರತ್ ಸಿನಿಮಾಸ್ ದೇರಳಕಟ್ಟೆ, ಪುತ್ತೂರು, ಪಡುಬಿದ್ರೆ, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ ಮೊದಲಾದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ.

 

 

ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತಂಡದ ಬಹುತೇಕ ತಂತ್ರಜ್ಞರು, ಕಲಾವಿದರು ಇಲ್ಲಿ ದುಡಿದಿದ್ದಾರೆ. ಮುಖ್ಯವಾಗಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಇಲ್ಲೂ ನಿರ್ದೇಶಕರಾಗಿದ್ದಾರೆ. ವಿನೀತ್ ಕುಮಾರ್ ನಾಯಕ ನಟನಾಗಿ ಸಮತಾ ಅಮೀನ್ ನಾಯಕಿಯಾಗಿ ಹಾಗೂ ತುಳು ಚಿತ್ರರಂಗದ ಮೇರು ಕಲಾವಿದರಾದ ನವೀನ್ ಡಿ.ಪಡೀಲ್,ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಚೈತ್ರಾ ಶೆಟ್ಟಿ(ಚಿ೦ಪು), ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಮೈಮ್ ರಾಮದಾಸ್, ರೂಪ ವರ್ಕಾಡಿ, ರವಿ ರಾಮಕುಂಜ, ಶೋಭಾ ರೈ, ಶರಣ್ ಚಿಲಿಂಬಿ, ಸಾಹಿಲ್ ರೈ ಹಾಗೂ ಗೌರವ ಪಾತ್ರದಲ್ಲಿ ನವನೀತ್ ಶೆಟ್ಟಿ ಕದ್ರಿಯವರು ಅಭಿನಯಿಸಿ ದ್ದಾರೆ. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ಛಾಯಾಗ್ರಾಹಕರಾಗಿ ವಿಷ್ಣು ಪ್ರಸಾದ್. ಪಿ, ಸಂಕಲನ ವಿಶಾಲ್ ದೇವಾಡಿಗ, ಡಿ.ಐ ಮತ್ತು ವರ್ಣ ಪ್ರಜ್ವಲ್ ಸುವರ್ಣ, ವಸ್ತ್ರ ವಿನ್ಯಾಸ ವರ್ಷ ಆಚಾರ್ಯ, ಡಿಜಿಟಲ್ ಮಾರ್ಕೆಟಿಂಗ್ ಆಯುಷ್ಮಾನ್ ಹಾಗೂ ನವೀನ್ ಕುಮಾರ್ ಶೆಟ್ಟಿ ಮತ್ತು ವಿನಾಯಕ ಆಚಾರ್ಯ ನೃತ್ಯ ಸಂಯೋಜಿಸಿದ್ದಾರೆ.ಪವನ್ ಕುಮಾರ್,ನಿತಿನ್ ರಾಜ್ ಶೆಟ್ಟಿ, ಸುಹಾನ್ ಪ್ರಸಾದ್, ಭರತ್ ಕುಮಾರ್ ಗಟ್ಟಿ, ಗಣೇಶ್ ಕೊಲ್ಯ, ಅಶ್ವಿನಿ ರಕ್ಷಿತ್, ಕ್ಷಿತಿಂದ್ರ ಕೋಟೆಕಾರ್, ಮಿತ್ರಂಪಾಡಿ ಜಯರಾಮ್ ರೈ, ಕಿರಣ್ ಶೆಟ್ಟಿ, ಸ್ವಸ್ತಿಕ್ ಆಚಾರ್ಯ ಸಹ ನಿರ್ಮಾಪಕರಾಗಿದ್ದಾರೆ. ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ, ನಿತಿನ್ ಶೇರಿಗಾರ್ ಮತ್ತು ಜೀತೇಶ್ ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement