Published
2 months agoon
By
Akkare Newsಪುತ್ತೂರು :ಶಾಸಕ ಅಶೋಕ್ ಕುಮಾರ್ ರೈ ಸೂಚನೆ ಮೇರೆಗೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಶರೂನ್ ವಿಗ್ರೇಡ್ ಸಿಕ್ಕೇರ ನೇಮಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಆಳ್ವ ಆದೇಶ ಹೊರಡಿಸಿದ್ದಾರೆ.
ಶರೂನ್ ವಿಗ್ರೇಡ್ ಸಿಕ್ವೆರ ರವರು ಪುತ್ತೂರು ಚರ್ಚ್ ಪಾಲನ ಸಮಿತಿಯ ಸದಸ್ಯರಾಗಿ 9 ವರ್ಷ ಸೇವೆ ಸಲ್ಲಿಸಿದ್ದು,ಒಂದು ಬಾರಿ ಪುತ್ತೂರು ಚರ್ಚ್ ಪಾಲನ ಸಮಿತಿಯ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಲಾಗಿದೆ. ಪುತ್ತೂರು ಡಾನ್ ಬಾಕ್ಸ ಕ್ಲಬ್ ನ 3 ಬಾರಿ ಅಧ್ಯಕ್ಷರಾಗಿದ್ದರು.ಕ್ರಿಸ್ಟೋಫರ್ ಅಸೋಸಿಯೇಷನ್ 2 ಬಾರಿ ಅಧ್ಯಕ್ಷರಾಗಿ, ಪುತ್ತೂರು ಕ್ಯಾಥೋಲಿಕ್ ಸಭಾ ಇದರ ಸದಸ್ಯರಾಗಿ ಮತ್ತು ಸಹ ಕಾರ್ಯದರ್ಶಿಯಾಗಿ ಹಾಗೂ ಕ್ಯಾಥೋಲಿಕ್ ಸಭಾ ಇದರ ಕೇಂದ್ರಿಯ ಸದಸ್ಯನಾಗಿ ಸೇವೆ ಸಲ್ಲಿಸಿದ್ದಾರೆ.
ಸಾಮೆತಡ್ಕ ಯುವಕ ಮಂಡಲದ ಸದಸ್ಯರಾಗಿ ಮತ್ತು ಹಲವು ಸಂಘ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಪುತ್ತೂರು ಗ್ಲೋರಿಯಾ ಕೊ- ಆಪರೇಟಿವ್ ಸೊಸೈಟಿಯ ನಿರ್ದೇಶಕನಾಗಿ ಸೇವೆ ಸಲ್ಲಿಸಿದ್ದಾರೆ.
ಪುತ್ತೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಸಾಮೆತಡ್ಕ ವಾರ್ಡ್ ನ ಬೂತ್ ಅಧ್ಯಕ್ಷರಾಗಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.