Published
2 months agoon
By
Akkare NewsBJP: ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆಯ ಕಸರತ್ತು ನಡೆಯುತ್ತಿದೆ. ಇದರ ನಡುವೆಯೇ ಜಿಲ್ಲಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯು ನಡೆದಿದ್ದು ಮೇಜರ್ ಸರ್ಜರಿ ನಡೆದಿದೆ.
ಹೌದು, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕಸರತ್ತಿನ ನಡುವೆಯೇ ಸುಮಾರು 23 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. 23 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಲಾಗಿದ್ದು, ಈ ಮೂಲಕ ಮುಂಬರುವಂತ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ.
ಕರ್ನಾಟಕ ರಾಜ್ಯ ಚುನಾವಣಾಧಿಕಾರಿ ಕ್ಯಾ.ಗಣೇಶ್ ಕಾರ್ಮಿಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಮೊದಲ ಹಂತದಲ್ಲಿ 23 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಿ, ಇಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಥಳೀಯವಾಗಿ ಘೋಷಣೆ ಮಾಡಿರುತ್ತಾರೆ. ರಾಜ್ಯ ಚುನಾವಣಾಧಿಕಾರಿಯಾದ ನಾನು ಈ ಕೆಳಕಂಡ ಜಿಲ್ಲಾ ಅಧ್ಯಕ್ಷರನ್ನು ಅಭಿನಂದಿಸುತ್ತಾ, ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ, ಮುಂಬರುವ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸುವಿರೆಂದು ಆಶಿಸುತ್ತೇನೆ ಎಂದಿದ್ದಾರೆ.
23 ಜಿಲ್ಲೆಯ ಬಿಜೆಪಿ ಅಧ್ಯಕ್ಷರು!!
ಮೈಸೂರು ನಗರ – ಎಲ್. ನಾಗೇಂದ್ರ
ಚಾಮರಾಜನಗರ – ಸಿ.ಎಸ್. ನಿರಂಜನಕುಮಾರ್
ದಕ್ಷಿಣಕನ್ನಡ – ಸತೀಶ್ ಕುಂಪಲ
ಚಿಕ್ಕಮಗಳೂರು – ದೇವರಾಜ ಶೆಟ್ಟಿ
ಶಿವಮೊಗ್ಗ – ಎನ್.ಕೆ. ಜಗದೀಶ್
ಉತ್ತರಕನ್ನಡ – ನಾರಾಯಣ್ ಶ್ರೀನಿವಾಸ್ ಹೆಗಡೆ
ಹುಬ್ಬಳ್ಳಿ-ಧಾರವಾಡ – ತಿಪ್ಪಣ್ಣ ಮಜ್ಜಗಿ
ಧಾರವಾಡ ಗ್ರಾಮಾಂತರ – ನಿಂಗಪ್ಪ ಡಿ. ಸುತಗಟ್ಟಿ
ಬೆಳಗಾವಿ ನಗರ – ಗೀತಾ ಸುತಾ
ಬೆಳಗಾವಿ ಗ್ರಾಮಾಂತರ -ಸುಭಾಷ್ ದುಂಡಪ್ಪ ಪಾಟೀಲ್
ಚಿಕ್ಕೋಡಿ – ಸತೀಶ್ ಅಪ್ಪಾಜಿಗೋಳ್
ಬೀದರ್ – ಸೋಮನಾಥ್ ಪಾಟೀಲ್
ಕಲಬುರಗಿ ನಗರ – ಚಂದ್ರಕಾಂತ್ ಬಿ. ಪಾಟೀಲ್
ಕಲಬುರಗಿ ಗ್ರಾಮಾಂತರ – ಅಶೋಕ್ ಬಗಲಿ
ಯಾದಗಿರಿ – ಬಸವರಾಜಪ್ಪಗೌಡ ವಿ.
ಕೊಪ್ಪಳ – ದಡೇಸಗೂರು ಬಸವರಾಜ್
ಬಳ್ಳಾರಿ – ಅನಿಲ್ ಕುಮಾರ್ ಮೋಕಾ
ವಿಜಯನಗರ – ಸಂಜೀವ್ ರೆಡ್ಡಿ
ಚಿಕ್ಕಬಳ್ಳಾಪುರ – ಬಿ.ಸಂದೀಪ್
ಕೋಲಾರ – ಓಂ ಶಕ್ತಿ ಛಲಪತಿ
ಬೆಂಗಳೂರು ಉತ್ತರ – ಎಸ್ ಹರೀಶ್
ಬೆಂಗಳೂರು ಕೇಂದ್ರ – ಎ ಆರ್ ಸಪ್ತಗಿರಿ ಗೌಡ
ಬೆಂಗಳೂರು ದಕ್ಷಿಣ – ಸಿ.ಕೆ ರಾಮಮೂರ್ತಿ