Connect with us

ಇತರ

ರಾಜೀವ ಗಾಂಧಿ ವಸತಿ ನಿಗಮ ಪಾಣಾಜೆ ಗ್ರಾಮದ ಒಂಬತ್ತು ಮಂದಿಗೆ ನಿವೇಶನ ಪತ್ರ ನಿವೇಶನ ಇಲ್ಲದವರು ಕೂಡಲೇ ಅರ್ಜಿ ಸಲ್ಲಿಸಿ : ಶಾಸಕ ಅಶೋಕ್ ಕುಮಾರ್ ರೈ

Published

on

ಪುತ್ತೂರು: ಪುತ್ತೂರು ವಿದಾನಸಭಾ ಕ್ಷೇತ್ರ ವ್ಯಾಪ್ತಿಯ 9 ಗ್ರಾಮಗಳಲ್ಲಿ ಒಟ್ಟು 85 ಎಕ್ರೆ ಜಾಗವನ್ನು ನಿವೇಶನಕ್ಕೆ ಕಾಯ್ದಿರಿಸಲಾಗಿದ್ದು ನಿವೇಶನವಿಲ್ಲದ ಎಲ್ಲಾ ಬಡವರಿಗೂ ಜಾಗವನ್ನು ಹಂತ ಹಂತವಾಗಿ ಹಂಚುವ ಕೆಲಸ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

 



 

ಅವರು ಪಾಣಾಜೆ ಗ್ರಾಮದ 9 ಮಂದಿಗೆ ರಾಜೀವ ಗಾಂಧಿ ವಸತಿ ನಿಗಮದಲ್ಲಿ ನಿವೇಶನವನ್ನು ಮಂಜೂರು ಮಾಡಿರುವ ಬಗ್ಗೆ ದಾಖಲೆ ಪತ್ರವನ್ನು ವಿತರಿಸಿ ಮಾತನಾಡಿದರು. ಚುನಾವಣೆಗೆ ಮುನ್ನ ನಾನು ನನ್ನ ಕ್ಷೇತ್ರದ ಜನತೆಗೆ ಮಾತು ಕೊಟ್ಟಿದ್ದೇನೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಾಗಿದ್ದು ಶಾಸಕನಾದ ನನ್ನ ಧರ್ಮವಾಗಿದೆ. ಮನೆ ಇಲ್ಲದ, ನಿವೇಶನ ರಹಿತ ಕ್ಷೇತ್ರದ ಎಲ್ಲಾ ಕುಟುಂಬಗಳಿಗೆ ನಿವೇಶನ ಮತ್ತು ಮನೆಯನ್ನು ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದೆ. ಆ ಭರವಸೆಯನ್ನು ಖಂಡಿತವಾಗಿಯೂ ಈಡೇರಿಸುತ್ತೇನೆ ಎಂದು ಶಾಸಕರು ಹೇಳಿದರು.

ನನ್ನ ಕ್ಷೇತ್ರದಲ್ಲಿ ಯಾವುದೇ ಕುಟುಂಬ ಮನೆ ಇಲ್ಲದೆ, ಕರೆಂಟ್ ಇಲ್ಲದೆ, ನೀರು ಇಲ್ಲದೆ ಇರಬಾರದು. ಮೂಲಭೂತ ಸೌಕರ್ಯದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ನಾನು ಈ ಮೂರು ವಿಚಾರಗಳಿಗೆ ಆಧ್ಯತೆಯನ್ನು ನೀಡುತ್ತಿದ್ದೇನೆ. ಆರಂಭಿಕ ಹಂತವಾಗಿ ಪಾಣಾಜೆ ಗ್ರಾಮದ 9 ಮಂದಿಗೆ ತಲಾ 2.75 ಸೆಂಟ್ಸ್ ಜಾಗವನ್ನು ನೀಡಲಾಗಿದೆ. ನಿವೇಶನ ಪಡೆದವರಿಗೆ ಮನೆ ನಿರ್ಮಾಣಕ್ಕೆ ಗ್ರಾಪಂ ಮೂಲಕ ಅನುದಾನವನ್ನು ಒದಗಿಸಲಾಗುವುದು ಎಂದು ಹೇಳಿದರು.

 

ನಿವೇಶನ ಇಲ್ಲದವರು ಅರ್ಜಿ ಸಲ್ಲಿಸಿ
ತಮ್ಮ ಹಸರಿನಲ್ಲಿ ನಿವೇಶನವೇ ಇಲ್ಲದವರು ಮತ್ತು ಬಾಡಿಗೆ ಮನೆಯಲ್ಲಿರುವ ಕುಟುಂಬಗಳು ನಿವೇಶನಕ್ಕಾಗಿ ಗ್ರಾಪಂಗಳಲ್ಲಿ ಅರ್ಜಿ ಸಲ್ಲಿಸಬೇಕು. ಶೀಘ್ರದಲ್ಲೇ ಪ್ರತೀ ಗ್ರಾಮದಲ್ಲಿ ನಿವೇಶನ ಹಂಚುವ ಕೆಲಸ ನಡೆಯಲಿದೆ. ಈ ಅವಕಾಶವನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕರಾದ ಅಶೋಕ್ ರೈ ಅವರು ಮನವಿ ಮಾಡಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement