Published
2 months agoon
By
Akkare News ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟು ಗ್ರಾಮದ ಕೊಳಂಬೆಗುರಿ ನಿವಾಸಿ ಶ್ರೀಮತಿ ವಸಂತಿ ಇವರ ಮನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ‘ಅಡಿಯಲ್ಲಿ ಶ್ರೀ ಧರ್ಮಸ್ಥಳ’ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪುಂಜಾಲಕಟ್ಟೆಯ ಸ್ವಯಂಸೇವಕರು ಮೂಲಕ ರಿಪೇರಿ ಮಾಡಿ ಹಸ್ತಾಂತರ.ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಯ ಜ್ಞಾನ ವಿಕಾಸ ವಾತ್ಸಲ್ಯ ಕಾರ್ಯಕ್ರಮ ಅಡಿಯಲ್ಲಿ ಮನೆ ರಿಪೇರಿಗೆ ರೂಪಾಯಿ 40,000 ಮಂಜೂರಾತಿಯಾಗಿದ್ದು, ಇದರ ಜೊತೆಗೆ ಶೌರ್ಯ ತಂದದ ಶ್ರಮದಾನದ ಮೂಲಕ ಮನೆ ರಿಪೇರಿಗೆ ಮಾಡಲಾಗಿದೆ.
ಮನೆಯ ಮೇಲ್ಚಾವಣಿ ಹಾಳಾಗಿದ್ದು ಬೀಳುವ ಸ್ಥಿತಿ ಇದ್ದು ಮಳೆಗಾಲದಲ್ಲಿ ಸೋರುತ್ತಿದ್ದವು. ಮನೆಯಲ್ಲಿ ತಾಯಿ ಮತ್ತು ಮಗಳು, ಹಾಗೂ ಐದನೇ ತರಗತಿಯ ಬಾಲಕ ಕೀರ್ತನ್ ಇದ್ದು ವಸಂತಿ ಇವರಿಗೆ 75 ವರ್ಷವಾಗಿದ್ದು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಗಳು ಉಮಾವತಿ ಇವರು ಸಹ ಅನಾರೋಗ್ಯ ದಿಂದ ಇದ್ದು ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ.
ಇವರ ಮನೆಯ ಸಮಸ್ಯೆಯನ್ನು ಗಮನಿಸಿದ ಧರ್ಮಸ್ಥಳ ಸಂಸ್ಥೆಯು ಕಳೆದ ವರ್ಷ ಶೌಚಾಲಯ ರಚನೆ ಮಾಡಿಕೊಟ್ಟಿತ್ತು. ಅಲ್ಲದೇ ನಡೆದಾಡಲು ಕಷ್ಟಪಡುತ್ತಿದ್ದ ಉಮಾವತಿ ಇವರಿಗೆ ವೀಲ್ ಚೇರ್ ನೀಡಿ ಅನುಕೂಲ ಮಾಡಿಕೊಟ್ಟಿತ್ತು.
ಮನೆಯ ಇಬ್ಬರೂ ದುಡಿಯಲು ಸಾದ್ಯವಾಗದೇ ಜೀವನ ನಡೆಸಲು ಕಷ್ಟ ಪಡುತ್ತಿರುವುದನ್ನು ಗಮನಿಸಿದ ಸಂಸ್ಥೆ ಕಳೆದ 5 ವರ್ಷಗಳಿಂದ ಮಾಸಿಕ ರೂ. 1000 ರಂತೆ ಮಾಶಾಸನ ನೀಡುತ್ತಿದೆ. ತಾಯಿ ಮತ್ತು ಮಗಳು ಇಬ್ಬರೂ ಸಹ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣದಿಂದ ಮಾತೃಶ್ರೀ ಅಮ್ಮನವರ ಆಶಯದಂತೆ ಪೌಷ್ಟಿಕ ಆಹಾರವನ್ನು ಯೋಜನೆ ವತಿಯಿಂದ ನೀಡಲಾಗುತ್ತಿದೆ.
ಮನೆ ತೀರಾ ಹಾಳಾಗಿದ್ದು ರಿಪೇರಿ ಮಾಡುವ ಅಗತ್ಯ ಇರುವುದನ್ನು ಗಮನಿಸಿ ಸಂಸ್ಥೆಯು ವಾತ್ಸಲ್ಯ ಕಾರ್ಯಕ್ರಮ ಅಡಿಯಲ್ಲಿ ಅನುದಾನ ಮಂಜೂರಾತಿ ಮಾಡಿದ್ದು ಮನೆ ರಿಪೇರಿ ಶ್ರಮದಾನವನ್ನು ‘ಶೌರ್ಯ’ ವಿಪತ್ತು ನಿರ್ವಹಣಾ ಸ್ವಯಂಸೇವಕರು ನಡೆಸಿದರು. 6 ದಿನಗಳ ಕಾಲ ಶ್ರಮದಾನ ನಡೆಸಿ ಮೇಲ್ಚಾವಣಿ ಸರಿಪಡಿಸಿ, ಬಾಗಿಲು, ಕಿಟಕಿ ಹಂಚು ಅಳವಡಿಕೆಯನ್ನು ಮಾಡಿರುತ್ತಾರೆ. ಮನೆಯ ಸುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿ ಶುಚಿಗೊಳಿಸಿರುತ್ತಾರೆ.
ವಲಯದ ಮೇಲ್ವಿಚಾರಕರಾದ ಶ್ರೀಮತಿ ಸವಿತಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಶೃತಿ ಇವರು ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದ್ದು ಶ್ರಮದಾನದಲ್ಲಿ ಸ್ವಯಂಸೇವಕರಾದ
ಶಶಿಧರ, ಸುಂದರ, ರಮೇಶ, ಮೋಹನ್ ಕುಶಾನಂದ , ರಘುವೀರ್ , ಭೂಮಿಕಾ
ಆಶಾಲತಾ, ಜಯಲಕ್ಷ್ಮಿ, ಪ್ರಮೋದ್ ಪೂಜಾರಿ, ಶೋಭಾ ಭಾಗವಹಿಸಿದ್ದರು.
ಸ್ಥಳೀಯರಾದ ನಾಗೇಶ್, ರಾಜೇಶ್,ಯಶೋಧರ್, ವಸಂತ ಇವರು ಶ್ರಮದಾನದಲ್ಲಿ ತೊಡಗಿಕೊಂಡಿದ್ದರು.
ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ, ಪಿಲಾತಬೆಟ್ಟು ಗ್ರಾಮದ ಸೇವಾ ಪ್ರತಿನಿಧಿ ಅಮೃತ ಎಸ್ ಇವರು ಶೌರ್ಯ ತಂಡದ ಸದಸ್ಯರಿಗೆ ಪ್ರೇರಣೆ ನೀಡಿರುತ್ತಾರೆ.
ಮನೆಯ ರಿಪೇರಿ ನಂತರ ವಿಧಿ ವಿಧಾನದ ಪ್ರಕಾರ ಶ್ರೀ ಮಹಾಗಣ ಹೋಮ ನಡೆಸಿ, ಹಾಲು ಉಕ್ಕಿಸಿ, ಶ್ರೀ ಮಂಜುನಾಥ ಸ್ವಾಮಿಯ ಫೋಟೋ ಜೊತೆ ವಾಸ್ತಲ್ಯ ಕಿಟ್ ನೀಡಿ ವಾಸ್ತಲ್ಯ ಮನೆಯನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ್, ಬಂಟ್ವಾಳ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಪ್ರಕಾಶ್, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಿ ನಾರಾಯಣ ಹೆಗ್ಡೆ, ನೆಲ್ವಿಸ್ಟರ್ ಪಿಂಟೋ, ಪೂಂಜಾಲಕಟ್ಟೆ ವಲಯ ಮೇಲ್ವಿಚಾರಕಿ ಸವಿತಾ ಎ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶೃತಿ, ಪಿಲಾತಬೆಟ್ಟು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಅಮೃತಾ, ಶೌರ್ಯ ಘಟಕದ ಪ್ರತಿನಿಧಿ ಮೋಹನ್ ಸಾಲಿಯನ್, ಶೌರ್ಯ ಘಟಕ ಸಂಯೋಜಕ ಗೋವಿಂದ, ಶೌರ್ಯ ಘಟಕದ ಸದಸ್ಯರುಗಳು,ಒಕ್ಕೂಟದ ಅಧ್ಯಕ್ಷರುಗಳಾದ ಗಂಗಾಧರ ಮತ್ತು ಜಯಲಕ್ಷ್ಮಿ, ಒಕ್ಕೂಟ ಪದಾಧಿಕಾರಿಗಳಾದ ವಿಜಯ, ಆಶಾ ಶೆಟ್ಟಿ, ರವಿ,ಮೊದಲಾದವರು ಉಪಸ್ಥಿತರಿದ್ದರು.