Published
2 months agoon
By
Akkare Newsಬಡತನ, ನಿರುದ್ಯೋಗದ ಕಾರಣ ಗ್ರಾಮೀಣ ಪ್ರದೇಶಗಳಿಂದ ದೆಹಲಿ, ಮುಂಬೈ, ಬೆಂಗಳೂರಿನಂತಹ ಮೆಟ್ರೋ ನಗರಗಳಿಗೆ ಬಹಳಷ್ಟು ಜನರು ವಲಸೆ ಹೋಗುತ್ತಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ (ಫೆ.4) ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದ ಕಾರಣ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದಿದ್ದಾರೆ.
“ನಿರುದ್ಯೋಗ, ಬಡತನದಿಂದಾಗಿ ಗ್ರಾಮೀಣ ಭಾರತದಿಂದ ನಗರ ಭಾರತಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ಕಾರಣದಿಂದಲೇ ಇಂದು ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ನಾವು ಬಹಳಷ್ಟು ಸಮಸ್ಯೆಗಳನ್ನು ನೋಡುತ್ತಿದ್ದೇವೆ” ಎಂದು ಗಡ್ಕರಿ ಹೇಳಿದ್ದಾರೆ.
ಭಾರತದಲ್ಲಿ ಫ್ಲೆಕ್ಸ್ ಎಂಜಿನ್ ವಾಹನಗಳು ಬರುತ್ತಿವೆ. ದೇಶದ ಎಲ್ಲೆಡೆ ಎಥೆನಾಲ್ ಪಂಪ್‌ಗಳನ್ನು ತೆರೆಯಲಾಗುತ್ತಿದೆ. ಇದು ರೈತರ ಆದಾಯವನ್ನು ಹೆಚ್ಚಿಸಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ತಿಳಿಸಿದ್ದಾರೆ.
“ಇದು ನಾವು ಕೃಷಿಯನ್ನು ಬೆಂಬಲಿಸಬಹುದಾದ ವಲಯ. ಮೊದಲು ನಾವು ರೈತರನ್ನು ‘ಅನ್ನ ದಾತ’ ಎಂದು ಕರೆಯುತ್ತಿದ್ದೆವು. ಆದರೆ, ನಮ್ಮ ಸರ್ಕಾರ ರೈತರನ್ನು ‘ಊರ್ಜಾ ದಾತ’ ಎಂದು ಕೂಡ ಮಾಡಿದೆ” ಎಂದು ಹೇಳಿದ್ದಾರೆ.
ಹೈಡ್ರೋಜನ್ ಭವಿಷ್ಯದ ಇಂಧನ ಎಂದು ಹೇಳಿದ ಗಡ್ಕರಿ, “ಹೈಡ್ರೋಜನ್ ಇಂಧನದ ರಫ್ತುದಾರರಾಗುವುದು ನಮ್ಮ ಕನಸು” ಎಂದಿದ್ದಾರೆ.