Published
2 months agoon
By
Akkare News ಎನ್ ಎಸ್ ಎಸ್ ಶಿಬಿರದಲ್ಲಿ ಶ್ರಮದಾನದ ಜೊತೆ ಜೊತೆಗೆ ಸಮಾಜದ ಸಮಸ್ಯೆಗಳನ್ನು ಅರಿತು ಪರಿಹಾರಗಳನ್ನು ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ವೃತ್ತಿ ಬದುಕಿಗೆ ಅವಶ್ಯಕತೆ ಇರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀ ಅಶೋಕ್ ಕುಮಾರ್ ರೈ ಹೇಳಿದರು. ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಇಲ್ಲಿಯ ಎನ್ಎಸ್ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ್ ಎಸ್ ಇವರು ಎನ್ ಎಸ್ ಎಸ್ ಶಿಬಿರ ಒಂದು ತರಬೇತಿ ಕೇಂದ್ರವಾಗಿದ್ದು ಶಿಬಿರಾರ್ಥಿಗಳಲ್ಲಿ ಕೌಶಲ್ಯಗಳನ್ನು ಗುರುತಿಸಿ ಬೆಳೆಸುವ ಕೆಲಸವನ್ನು ಮಾಡುತ್ತದೆ ಎಂದರು.
ವೇದಿಕೆಯಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ, ಉಪಾಧ್ಯಕ್ಷರಾದ ಶ್ರೀ ಜಯಪ್ರಕಾಶ್ ಬದಿನಾರು, ಉಪ್ಪಿನಂಗಡಿ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಶ್ರೀ ಚಂದ್ರಹಾಸ ಶೆಟ್ಟಿ, ಶ್ರೀ ಅರ್ತಿಲ ಕೃಷ್ಣರಾವ್, ಜಗನಾಥ್ ಶೆಟ್ಟಿ ನಡುಮನೆ, ಮೋನಪ್ಪ ಗೌಡ ಪಮ್ಮನಮಜಲು, ಕೋಡಿಂಬಾಡಿ ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಸ್ಪೂರ್ತಿ ರೈ, ಮುಖ್ಯಗುರುಗಳಾದ ಶ್ರೀ ಬಾಲಕೃಷ್ಣ ಎಂ, ಉದ್ಯಮಿಗಳಾದ ಶ್ರೀ ವಿಕ್ರಂ ಶೆಟ್ಟಿ ಇವರುಗಳು ಉಪಸ್ಥಿತರಿದ್ದರು.
ಶಿಬಿರ ಅಧಿಕಾರಿ ಡಾ. ಹರಿಪ್ರಸಾದ್ ಎಸ್ ಸ್ವಾಗತಿಸಿದರು. ಇನ್ನೋರ್ವ ಶಿಬಿರ ಅಧಿಕಾರಿ ಶ್ರೀ ಕೇಶವ ಕುಮಾರ ಬಿ ವಂದಿಸಿದರು. ಎನ್ಎಸ್ಎಸ್ ಘಟಕ ನಾಯಕಿ ಅಶ್ವಿನಿ ಎಂ ಕಾರ್ಯಕ್ರಮ ನಿರೂಪಿಸಿದರು.