Published
2 months agoon
By
Akkare Newsಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಬಗೆಗಿನ ಅರಿವು ಮೂಡಿಸುವ ಕಾರ್ಯ ಎನ್ ಎಸ್ ಎಸ್ ಸ್ವಯಂಸೇವಕರುಗಳಿಂದ ಆಗಬೇಕು ಎಂದು ಪುತ್ತೂರು ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುಪ್ರೀತ್ ಕೆ ಸಿ ಹೇಳಿದರು. ಇವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಂಬಾಡಿ ಇಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಎನ್ಎಸ್ಎಸ್ ಶಿಬಿರದ ಮೊದಲನೇ ದಿನದ ಸಾರ್ವಜನಿಕ ಸಭಾ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ಕೋಡಿಂಬಾಡಿ ಗ್ರಾಮ ಪಂಚಾಯತ್ ನ ಸದಸ್ಯರೂ ಹಾಗೂ ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ಅಧ್ಯಕ್ಷರಾಗಿರುವ ಶ್ರೀ ಜಗನ್ನಾಥ ಶೆಟ್ಟಿ ನಡುಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್ ಎಸ್ ಎಸ್ ವಿದ್ಯಾರ್ಥಿಗಳನ್ನು ಸರ್ವತೋಮುಖವಾಗಿ ಬೆಳೆಸುವಂತಹ ಕೆಲಸವನ್ನು ಮಾಡುತ್ತಿದ್ದು ಸ್ವಯಂಸೇವಕರು ಮನಪೂರ್ವಕವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸರ್ಕಾರಿ ಪ್ರೌಢಶಾಲೆ ಶಾಂತಿನಗರದ ಮುಖ್ಯ ಗುರುಗಳಾದ ಶ್ರೀ ವಿಷ್ಣುಪ್ರಸಾದ್ ಸಿ ಮಾತನಾಡುತ್ತಾ ಶಿಬಿರವು ಆಧುನಿಕ ಜಗತ್ತಿನ ಸೌಲಭ್ಯಗಳ ಹೊರತಾಗಿ ಗ್ರಾಮೀಣ ಬದುಕಿನ ಸರಳ ಜೀವನದ ಪರಿಚಯವನ್ನು ಮಾಡುತ್ತಿದ್ದು ವಿದ್ಯಾರ್ಥಿಗಳು ಪರಸ್ಪರ ಸಹಕಾರ, ಸೌಹಾರ್ದತೆಯಿಂದ ಜೀವನ ಮಾಡುವುದನ್ನು ಕಲಿಸುತ್ತದೆ ಎಂದರು. ಶಿವರಾಧಿಕಾರಿಗಳಾದ ಡಾ. ಹರಿಪ್ರಸಾದ್ ಎಸ್, ಶ್ರೀ ಕೇಶವಕುಮಾರ್ ಬಿ, ಸೀಮಾ ಮತ್ತು ಶ್ರೇಯ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಅನನ್ಯ ಸ್ವಾಗತಿಸಿದರು, ತನುಶ್ರೀ ವಂದಿಸಿದರು. ಜಾಹ್ನವಿ ಕಾರ್ಯಕ್ರಮ ನಿರೂಪಿಸಿದರು.