Published
2 months agoon
By
Akkare Newsಉಡುಪಿ: ರಿಕ್ಷಾಗಳಿಗೆ ಈಗಾಗಲೇ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ ಮಾರ್ಪಡು ಆಗಿರುವುದರಿಂದ ಆಯಾಯ ತಾಲೂಕಿಗೆ ಸಂಬಂಧಪಟ್ಟ ಕಲರ್ ಕೋಡ್‌ನ್ನು ನಿಗದಿಪಡಿಸಬೇಕೆಂದು ಉಡುಪಿ ಜಿಲ್ಲಾ ಆಶ್ರಯದಾಟ ಅಟೋ ಯೂನಿಯನ್ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕೆಲವೊಂದು ರಿಕ್ಷಾ ನಿಲ್ದಾಣದಲ್ಲಿ ಉಡುಪಿ ತಾಲೂಕಿಗೆ ಸೇರದ ಹೊಸ ಸದಸ್ಯರನ್ನು ಬೇರೆ ತಾಲೂಕಿಗೆ ಸೇರಿರುವ ಆಟೋ ಚಾಲಕರನ್ನು ಉಡುಪಿ ರಿಕ್ಷಾ ನಿಲ್ದಾಣಕ್ಕೆ ಹೊಸ ಸದಸ್ಯರಾಗಿ ಸೇರಿಸಿಕೊಳ್ಳಲು 10000 ರೂ.ನಿಂದ 40ಸಾವಿರ ರೂ. ಪಡೆದು ಹೊಸ ಸದಸ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಉಡುಪಿ ತಾಲೂಕಿನ ರಿಕ್ಷಾ ಚಾಲಕ ವಲಯ, ಪರ್ಮಿಟ್ ಪಡೆದವರಿಗೆ ಆ ನಿಲ್ದಾಣದಲ್ಲಿ ದುಡಿಯಲು ಆ ನಿಲ್ದಾಣದ ಸದಸ್ಯರು ಅಡ್ಡಿ ಪಡಿಸುತ್ತಿದ್ದಾರೆ.
ಉಡುಪಿ, ಬ್ರಹ್ಮಾವರ, ಕಾಪು ತಾಲೂಕು ವಿಂಗಡನೆಯ ನಿಲ್ದಾಣದಿಂದ ಈ ಮೂರು ತಾಲೂಕಿಗೆ ಸೇರಿರುವ ಕಲರ್ ಕೋಡ್‌ನ್ನು ಹಾಕಿಸಬೇಕು ಮತ್ತು ಕೆಲವೊಂದು ಆಟೋ ನಿಲ್ದಾಣದಲ್ಲಿ ಸದಸ್ಯರನ್ನು ಸೇರಿಸಲು ಹಣ ವಸೂಲಿ ಮಾಡುವ ದಂಧೆಯನ್ನು ಕೂಡಲೇ ನಿಲ್ಲಿಸಬೇಕೆಂದು ಯೂನಿಯನ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು ಮನವಿಯಲ್ಲಿ ಆಗ್ರಹಿಸಿದ್ದಾರೆ.