Published
2 months agoon
By
Akkare Newsಪುತ್ತೂರು: ಹಲವು ಸಮಾಜಮುಖಿ ಕೆಲಸಗಳಿಂದ ಹೆಸರುವಾಸಿಯಾಗಿರುವ ತ್ರಿಶೂಲ್ ಫ್ರೆಂಡ್ಸ್ (ರಿ.) ಪುತ್ತೂರು ತಂಡದಿಂದ ಈ ಬಾರಿ ಅದ್ದೂರಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಫೆ.22 ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು ಪುತ್ತೂರು ತಾಲೂಕಿನ 8 ತಂಡಗಳು ಹಾಗು ಹೊರಗಿನ 8 ತಂಡಗಳು ಈ ಅದ್ದೂರಿ ಪಂದ್ಯಾಕೂಟದಲ್ಲಿ ಭಾಗಿಯಾಗಲಿದೆ.
ಪ್ರಥಮ ಬಹುಮಾನ 50,000 ಮತ್ತು ತ್ರಿಶೂಲ್ ಟ್ರೋಫಿ ದ್ವಿತೀಯ 25,000 ಮತ್ತು ತ್ರಿಶೂಲ್ ಟ್ರೋಫಿ ಮತ್ತು ಇತರೆ ವೈಯಕ್ತಿಕ ಬಹುಮಾನಗಳು ವಿಜೇತರ ಪಾಲಾಗಲಿದೆ.
ತ್ರಿಶೂಲ್ ಫ್ರೆಂಡ್ಸ್ (ರಿ.) ಪುತ್ತೂರು ಒಂದಲ್ಲ ಒಂದು ರೀತಿ ವಿಭಿನ್ನ ಕಾರ್ಯಕ್ರಮಗಳನ್ನು ಪುತ್ತೂರಿನ ಜನತೆಗೆ ನೀಡುತ್ತಿದ್ದು ಕಬಡ್ಡಿ, ಕ್ರಿಕೆಟ್, ಚೆಂಡೆ ಹೀಗೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮನೆಮಾತಾಗಿದೆ.