Published
2 months agoon
By
Akkare News
ಕಾಣಿಯೂರು ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಆಚಾರ್ಯ, ಪುರೋಹಿತರಾದ ಬಾಲಕೃಷ್ಣ ಅಸ್ರಣ್ಣ ಹಾಗೂ, ಕೂಡುಕಟ್ಟಿನವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಫೆ. 28ರಂದು ಸಂಜೆ ಕಾಣಿಯೂರು ಮಠದಲ್ಲಿ ರಂಗಪೂಜೆ, ರಾತ್ರಿ ಭಂಡಾರ ತೆಗೆದು ಧ್ವಜಾರೋಹಣ, ಮಾ. 3ರಂದು ಬೆಳಿಗ್ಗೆ ಶ್ರೀ ಅಮ್ಮನವರು ದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪೂಜೆ, ನವಕ ಕಲಶಾಭಿಷೇಕ, ಗಣಪತಿ ಹೋಮ, ಮಹಾಪೂಜೆ, ಉಳ್ಳಾಕುಲು ದೈವದ ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ, ಗಣ ಹೋದು, ಮಹಾಪೂಜೆ, ರಾತ್ರಿ ತುಳುಸಾಮಾಜಿಕ ಹಾಸ್ಯಮಯ ನಾಟಕ ನಿರೆಲ್ ನಡೆಯಲಿದೆ.
ಮಾ.3ರಂದು ಬೆಳಿಗ್ಗೆ ಮಲ್ಲಾರ ದೈವದ ನೇಮ ಹಾಗೂ ದೈಯರ ನೇಮ, ರಾತ್ರಿ ಬಯ್ಯದ ಬಲಿ ನಡೆಯಲಿದೆ. ಮಾ. 3ರಂದು ಮಧ್ಯಾಹ್ನ ಎಲ್ಯಾರ ದೈವದ ನೇಮ, ಮಧ್ಯಾಹ್ನ ಸಂಜೆ ಮಾಣಿ ದೈವದ ನೇಮ, ಸಂಜೆ ನಾಯರ್ ದೈವದ ನೇಮ, ಧ್ವಜಾವರೋಹಣ ನಡೆದು, ಮಾ. 3, 4ರಂದು ಬೆಳಿಗ್ಗೆ ಕಾಣಿಯೂರು ಶ್ರೀ ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಧ್ಯಾಹ್ನ ಅಮ್ಮನವರ ಪೂಜೆ, ಶಿರಾಡಿ ದೈವದ ನೇಮ ನಡೆಯಲಿದೆ.