Published
2 months agoon
By
Akkare News
ನೊಂದವರ ಸೇವೆ ಮಾಡುವ ಪೃವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಗ್ರಾಮದ ಮೂಲೆ ಮೂಲೆಗೆ ತೆರಳಿ ಜನರ ಕಷ್ಟ ಸುಖವನ್ನು ತಿಳಿದು ಕಷ್ಟದಲ್ಲಿರುವವರಿಗೆ ನೆರವಾಗಬೇಕು. ಗ್ರಾಮದಲ್ಲಿ ನಿವೇಶನ ಇಲ್ಲದ, ಮನೆಗೆ ಕರೆಂಟ್ ಇಲ್ಲದವರು, ಕುಡಿಯುವ ನೀರು ಇಲ್ಲದೇ ಇದ್ದವರನ್ನು ನಾವು ಸಂಪರ್ಕಿಸಿ ಅವರಿಗೆ ನೆರವು ನೀಡಬೇಕು. ನೊಂದವರ ಸೇವೆ ಮಾಡಿದರೆ ಅದು ನಮಗೆ ಪುಣ್ಯದ ಜೊತೆಗೆ ಪಕ್ಷದ ಬೆಳವಣಿಗೆಗೂ ಕಾರಣವಾಗುತ್ತದೆ ಎಂದು ಹೇಳಿದರು.
ನಿವೇಶನವಿಲ್ಲದವರು ಈ ಗ್ರಾಮದಲ್ಲಿ ಅರ್ಜಿ ಸಲ್ಲಿಸಿ:
ಪುತ್ತೂರು ವಿಧಾನಸಭಾ ಕ್ಣೇತ್ರದಲ್ಲಿ ನಿವೇಶನ ಇಲ್ಲದೆ , ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಯಾವುದೇ ಕುಟುಂಬ ಬಡಗನ್ನೂರು, ಕೊಳ್ತಿಗೆ,ಅರಿಯಡ್ಕ ಬನ್ನೂರು, ಆರ್ಯಾಪು,ಕೆಯ್ಯೂರು,ಬೆಟ್ಟಂಪಾಡಿ ,ಕೆದಂಬಾಡಿ,ನಿಡ್ಪಳ್ಳಿ, ನರಿಮೊಗರು ಗ್ರಾಮಗಳಲ್ಲಿ ಅರ್ಜಿ ಹಾಕಬಹುದು ಎಂದು ಶಾಸಕರು ತಿಳಿಸಿದರು.
ಪಿಡಿಒಗಳು ಅರ್ಜಿ ಸ್ವೀಕರಿಸಬೇಕು
ಈ ಎಲ್ಲಾ ಗ್ರಾಪಂ ಗಳ ಪಿಡಿಒಗಳು ನಿವೇಶನಕ್ಕೆ ಯಾರೇ ಅರ್ಜಿ ಸಲ್ಲಿಸಿದರೂ ಅದನ್ನು ಸ್ವೀಕರಿಸಬೇಕು. ಬೇರೆ ಗ್ರಾಮದವರು ಅರ್ಜಿ ಸಲ್ಲಿಸಿದರೂ ಅದನ್ನು ಸ್ವೀಕರಿಸಲೇಬೇಕು,ಸ್ವೀಕರಿಸದೇ ಇದ್ದಲ್ಲಿ ಅರ್ಜಿದಾರರು ನನ್ನ ಗಮನಕ್ಕೆ ತರಬೇಕು ಎಂದುಶಾಸಕರು ಸಭೆಯಲ್ಲಿ ತಿಳಿಸಿದರು.
ನಿವೇಶನಇಲ್ಲದವರು ಯಾರೂ ಇರಬಾರದು:
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಕುಟುಂಬಗಳಿಗೂ ಸ್ವಂತ ನಿವೇಶನ ಬೇಕು ಮತ್ತು ಒಂದುಚಿಕ್ಕ ಮನೆಯಾದರೂ ಇರಬೇಕು ಎಂಬುದು ನನ್ನ ಕನಸು. ಚುನಾವಣೆಯ ಸಮಯದಲ್ಲಿ ನಾನು ಕೊಟ್ಟ ಮಾತನ್ನು ಪಾಲನೆ ಮಾಡಿಯೇ ಸಿದ್ದ ಇದಕ್ಕಾಗಿ ಪ್ರತೀ ಗ್ರಾಮದಲ್ಲಿರುವ ಸರಕಾರಿ ಜಾಗವನ್ನು ಗುರುತಿಸಿ ಅದನ್ನು ಸೈಟ್ ಮಾಡಿ ವಿತರಣೆ ಮಾಡಲಿದ್ದೇನೆ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.
ನಿಮ್ಮ ಭೂಮಿ ಸಕ್ರಮವಾಗಿದ್ದಲ್ಲಿ ಅಕ್ರಮ ಸಕ್ರಮದಲ್ಲಿ ಸಕ್ರಮ :
ನಿಮ್ಮಸ್ವಾಧೀನದಲ್ಲಿರುವ ಸರಕಾರಿ ಜಾಗ ನಿಮ್ಮದೇ ಸ್ವಾಧೀನದಲ್ಲಿ ಸಕ್ರಮವಾಗಿಯೇ ಇದ್ದಲ್ಲಿ ಅದನ್ನು ಅಕ್ರಮ ಸಕ್ರಮದಲ್ಲಿ ಸಕ್ರಮ ಮಾಡಿಕೊಡಲಾಗುವುದು ಎಂದು ಶಾಸಕರು ತಿಳಿಸಿದರು. ನಿಮ್ಮ ಭೂಮಿ ನಿಮಗೇ ಕೊಡಿಸ್ತೇನೆ, ಯಾರಿಗೂ ದುಡ್ಡು ಕೊಟ್ಟು ಅಕ್ರಮ ಸಕ್ರಮ ಮಾಡಿಸಿಕೊಳ್ಳಬೇಡಿ ,ಲಂಚಕ್ಕೆ ನಾನು ಬದ್ದ ವಿರೋಧಿಯಾಗಿದ್ದೇನೆ. ಎಲ್ಲರ 94 ಸಿ ,ಅಕ್ರಮ ಸಕ್ರಮವನ್ನು ಮಾಡಿಯೇ ಮಾಡುತ್ತೇನೆ ಯಾರೂ ಗಡಿಬಿಡಿಮಾಡುವುದು ಬೇಡ ಇನ್ನೂ ಕಾಲಮಿತಿ ಇದೆ. ಮುಂದಿನ ಚುನಾವಣೆಗೆ ಮೊದಲುನಿಮ್ಮ ಕೆಲಸ ಮಾಡಿಯೇ ಮಾಡುತ್ತೇನೆ ಎಂದು ಶಾಸಕರು ಹೇಳಿದರು.
ವೇದಿಕೆಯಲ್ಲಿ ಕೆಪಿಸಿಸಿಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ,
ಮುಂಡೂರು ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ,ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಬ್ಲಾಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಎಸ್ ಟಿ ಬ್ಲಾಕ್ ಅಧ್ಯಕ್ಷ ಮಹಾಲಿಂಗ ನಾಯ್ಕ್,ಬ್ಲಾಕ್ ವಕ್ತಾರ ರವೀಂದ್ರ ನೆಕ್ಕಿಲು,ಬ್ಲಾಕ್ ಪ್ರ.ಕಾರ್ಯದರ್ಶಿ ಶರೂನ್ ಸಿಕ್ವೆರಾ ಸಾಮೆತ್ತಡ್ಕ ಉಪಸ್ಥಿತರಿದ್ದರು.
ಬ್ಲಾಕ್ ಪ್ರ.ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಸ್ವಾಗತಿಸಿ ವಂದಿಸಿದರು.