Published
2 months agoon
By
Akkare News
ಮೊದಲು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಅನ್ನಛತ್ರದಲ್ಲಿ ತಾಂಬೂಲ ಪ್ರಶ್ನೆ ಪ್ರಾರಂಭವಾಗಿದೆ.
ದೇವಳದ ಮನೆ ತೆರವುಗೊಳಿಸಿ ಅವರಿಗೆ ಪರಿಹಾರ ವಿತರಿಸಿದ ಬಗ್ಗೆ ಪ್ರಶ್ನೆಯಲ್ಲಿ ಕಂಡು ಬಂತು.
ದೇವಳದ ಆಸ್ತಿಯಲ್ಲಿದ್ದವರು ಬಿಟ್ಟು ಹೋಗುವಾಗ ಅವರೇ ಪರಿಹಾರ ನೀಡಬೇಕಿತ್ತು. ದೇವಳದಿಂದ ಪರಿಹಾರ ತೆಗೆದುಕೊಂಡವರು ದೇವಳಕ್ಕೆ ಋಣಿಯಾಗಿರಾಬೇಕು ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂತು.
ಯಾರಿಗಾದರೂ ದುಪ್ಪಟ್ಟು ದುಡ್ಡು ಕೊಟ್ಟು ದೇವಳದ ಆಸ್ತಿಯಲ್ಲಿದ್ದವರನ್ನು ಬಿಡಿಸುವುದು ದೇವರಿಗೆ ಕೋಪ ಇದೆ ಎಂದು ಪ್ರಶ್ನೆಯಲ್ಲಿ ಕಂಡು ಬಂತು.
ದೇವಳದ ಜಾಗ ಬಿಟ್ಟು ಕೊಡದವರಿಗೆ ಅನಿಷ್ಠವಿದೆ ಹಾಗೂ ಕೆಲಸ ಕಾರ್ಯಕ್ಕೆ ಹೊರಡುವಾಗ ಅನಿಷ್ಠ ಎದುರಾಗುತ್ತದೆ ಇದಕ್ಕಾಗಿ ಮೃತ್ಯುಂಜಯ ಶಾಂತಿ ಹೋಮ ಮಾಡಬೇಕೆಂದು ಕಂಡು ಬಂತು. ಮಧ್ಯಾಹ್ನ ನಂತರವೂ ಪ್ರಶ್ನಾ ಚಿಂತನೆ ಮುಂದುವರಿದಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಈಶ್ವರ ಭಟ್ ಪಂಜಿಗುಡ್ಡೆ, ಶಾಸಕ ಅಶೋಕ್ ಕುಮಾರ್ ರೈ, ಕಾರ್ಯನಿರ್ವಹಣಾಧಿಕಾರಿ ಶ್ರೀ ಕೆ.ವಿ ಶ್ರೀನಿವಾಸ, ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಮುಳಿಯ ಕೇಶವ ಪ್ರಸಾದ್ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.