Connect with us

ಸ್ಥಳೀಯ

ಪುತ್ತೂರು: ಪುತ್ತೂರು ಮೆಡಿಕಲ್‌ ಕಾಲೇಜು: ರಾಜ್ಯ ಬಜೆಟ್ ಮೇಲೆ ಹೆಚ್ಚಿದ ನಿರೀಕ್ಷೆ, ಕರ್ನಾಟಕ Budget 2025

Published

on

ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪಿಸಬೇಕೆಂಬ ನಿಟ್ಟಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ನಡೆಯುತ್ತಿರುವ ಹೋರಾಟ ಇದೀಗ ತಾರ್ಕಿಕ ಅಂತ್ಯ ಕಾಣುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಾರಿ ರಾಜ್ಯ ಸರಕಾರದ ಬಜೆಟ್‌ನಲ್ಲಿ ಪುತ್ತೂರು ಸರಕಾರಿ ಮೆಡಿಕಲ್‌ ಕಾಲೇಜು ಘೋಷಣೆ ಮಾಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದ್ದು, ಇದನ್ನು ಸಾಕಾರಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಅಶೋಕ್‌ ರೈ ತಿಳಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ಈಗಾಗಲೇ 8 ಮೆಡಿಕಲ್‌ ಕಾಲೇಜುಗಳಿರುವ ಕಾರಣ ಇನ್ನೊಂದು ಮೆಡಿಕಲ್‌ ಕಾಲೇಜು ಮಂಜೂರು ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.



ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಗೆ ಸರಕಾರಿ ಮೆಡಿಕಲ್‌ ಕಾಲೇಜು ಮಂಜೂರು ಮಾಡಬೇಕು ಮತ್ತು ಅದನ್ನು ಪುತ್ತೂರಿನಲ್ಲಿ ಸ್ಥಾಪಿಸಬೇಕೆಂಬ ನಿಟ್ಟಿನಲ್ಲಿ ಕಳೆದ ಏಳೆಂಟು ವರ್ಷಗಳಿಂದ ನಡೆಯುತ್ತಿರುವ ಹೋರಾಟ ಇದೀಗ ತಾರ್ಕಿಕ ಅಂತ್ಯ ಕಾಣುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಾರಿ ರಾಜ್ಯ ಸರಕಾರದ ಬಜೆಟ್‌ನಲ್ಲಿ ಪುತ್ತೂರು ಸರಕಾರಿ ಮೆಡಿಕಲ್‌ ಕಾಲೇಜು ಘೋಷಣೆ ಮಾಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದ್ದು, ಇದನ್ನು ಸಾಕಾರಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಅಶೋಕ್‌ ರೈ ತಿಳಿಸಿದ್ದಾರೆ.

 

ಅನುಕೂಲ- ಅನನುಕೂಲ
ದಕ್ಷಿಣ ಕನ್ನಡದಲ್ಲಿ ಈಗಾಗಲೇ 8 ಮೆಡಿಕಲ್‌ ಕಾಲೇಜುಗಳಿರುವ ಕಾರಣ ಇನ್ನೊಂದು ಮೆಡಿಕಲ್‌ ಕಾಲೇಜು ಮಂಜೂರು ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಸದ್ಯದ ಮಟ್ಟಿಗೆ ಪುತ್ತೂರು ಮೆಡಿಕಲ್‌ ಕಾಲೇಜು ಕನಸಿಗೆ ಅಡ್ಡಿಯಾಗಿದೆ. ಒಂದೇ ಒಂದು ಮೆಡಿಕಲ್‌ ಕಾಲೇಜು ಇಲ್ಲದ ಜಿಲ್ಲೆಗಳಿಗೆ ಮೊದಲ ಆದ್ಯತೆ ನೀಡಲು ಸರಕಾರ ನಿರ್ಧರಿಸಿದರೂ ಪುತ್ತೂರು ಕನಸು ಭಗ್ನವಾಗಲಿದೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಹಬ್‌ ಆಗಿ ಬೆಳೆದಿರುವ ದ.ಕ.ದಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ಇಲ್ಲ. ಎಲ್ಲವೂ ಖಾಸಗಿ ಒಡೆತನದಲ್ಲಿದೆ. ಹೀಗಾಗಿ ಜಿಲ್ಲೆಗೆ ಸರಕಾರಿ ಮೆಡಿಕಲ್‌ ಕಾಲೇಜು ನೀಡಬೇಕೆಂದು ಸರಕಾರಿ ಮೆಡಿಕಲ್‌ ಕಾಲೇಜು ಹೋರಾಟ ಸಮಿತಿ ಪ್ರತಿಪಾದಿಸುತ್ತಲೇ ಬಂದಿದೆ. ಇದಕ್ಕೆ ಬಲ ನೀಡುವಂತೆ ಪುತ್ತೂರಿನಲ್ಲಿ 40 ಎಕರೆ ಜಾಗವನ್ನು ಸರಕಾರಿ ಮೆಡಿಕಲ್‌ ಕಾಲೇಜಿಗಾಗಿಯೇ ಮೀಸಲಿಟ್ಟಿರುವುದು ಪ್ಲಸ್‌ ಪಾಯಿಂಟ್‌.

ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪಿಸಬೇಕೆಂಬ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣುವ ಅನಿವಾರ್ಯತೆ ಸೃಷ್ಟಿ
ರಾಜ್ಯ ಸರಕಾರದ ಬಜೆಟ್‌ನಲ್ಲಿ ಪುತ್ತೂರು ಸರಕಾರಿ ಮೆಡಿಕಲ್‌ ಕಾಲೇಜು ಘೋಷಣೆ ಮಾಡಲಾಗುತ್ತದೆಯೇ ಎಂಬ ಬಗ್ಗೆ ಹೆಚ್ಚಿದ ಕುತೂಹಲ
ದಕ್ಷಿಣ ಕನ್ನಡದಲ್ಲಿ ಈಗಾಗಲೇ 8 ಮೆಡಿಕಲ್‌ ಕಾಲೇಜುಗಳಿರುವ ಕಾರಣ ಇನ್ನೊಂದು ಮೆಡಿಕಲ್‌ ಕಾಲೇಜು ಮಂಜೂರು ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಸೃಷ್ಟಿ!

 

ಬಜೆಟ್‌ ಮೇಲೆ ಒತ್ತಡ ಕಳೆದ ವರ್ಷದ ಬಜೆಟ್‌ನಲ್ಲಿ ಮೆಡಿಕಲ್‌ ಕಾಲೇಜು ಘೋಷಣೆಗೆ ಒತ್ತಡ ಹಾಕಿದ್ದ ಶಾಸಕರು, ಅದು ಈಡೇರದಿದ್ದಾಗ 20205ರ ಬಜೆಟ್‌ಗಾಗಿ ಒತ್ತಡ ಹಾಕಿದ್ದರು. ಅನೇಕ ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇತ್ತೀಚೆಗೆ ಮಂಗಳೂರಿಗೆ ಸಿಎಂ ಬಂದಿದ್ದಾಗ ಅವರ ಜತೆ ಖಾಸಗಿಯಾಗಿ 10 ನಿಮಿಷ ಕಳೆದು ಮನವಿ ಮಾಡಿದ್ದರು. ‘ನೋಡೋಣ’ ಎಂಬ ಉತ್ತರ ಸಿಎಂ ಬಾಯಿಂದ ಬಂದಿರುವುದು ಈ ನಿಟ್ಟಿನಲ್ಲಾದ ದೊಡ್ಡ ಪ್ರಗತಿ ಎಂದೇ ಬಿಂಬಿಸಲಾಗಿದೆ. ಇದೀಗ ಶಾಸಕರೂ ಸೇರಿದಂತೆ ಎಲ್ಲರ ಚಿತ್ತ ಸಿದ್ಧರಾಮಯ್ಯ ಅವರ ಈ ಬಾರಿಯ ಬಜೆಟ್‌ ಮೇಲೆ ನೆಟ್ಟಿದೆ.

2025ರ ಬಜೆಟ್‌ನಲ್ಲಿಪುತ್ತೂರು ಮೆಡಿಕಲ್‌ ಕಾಲೇಜು ಘೋಷಣೆ ಮಾಡದಿದ್ದಲ್ಲಿಪುತ್ತೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ಕಳೆದ ವರ್ಷ ಎಚ್ಚರಿಕೆ ನೀಡಿದ್ದೆ. ಆದರೆ ಇತ್ತೀಚೆಗೆ ಸಿಎಂ ಅವರನ್ನು ಭೇಟಿ ಮಾಡಿದಾಗ ನನಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ. ಹಾಗಾಗಿ ನನಗೆ ವಿಶ್ವಾಸವಿದೆ.
ಅಶೋಕ್‌ ರೈ, ಶಾಸಕರು, ಪುತ್ತೂರು

 

 

ಪ್ರಸ್ತಾವನೆ ಹೇಗಿದೆ?
ಪುತ್ತೂರಿನಲ್ಲಿ ಪ್ರಸ್ತುತ 100 ಹಾಸಿಗೆಗಳ ತಾಲೂಕು ಸರಕಾರಿ ಆಸ್ಪತ್ರೆಯಿದೆ. 300 ಹಾಸಿಗೆಗಳ ಆಸ್ಪತ್ರೆಗೆ ಬೇಡಿಕೆ ಸಲ್ಲಿಕೆಯಾಗಿದೆ. ಮಂಜೂರಾದಲ್ಲಿ ಅದನ್ನು ಮೆಡಿಕಲ್‌ ಕಾಲೇಜಿಗೆ ಮಂಜೂರಾದ ಸೇಡಿಯಾಪು ಜಾಗದಲ್ಲೇ ನಿರ್ಮಿಸುವುದು ಮುಖ್ಯ ಅಂಶ. 300 ಹಾಸಿಗೆಗಳ ಆಸ್ಪತ್ರೆ ಬಂದರೆ ಮೆಡಿಕಲ್‌ ಕಾಲೇಜು ತರುವ ಹಾದಿಯಲ್ಲಿ ಅರ್ಧ ಯಶಸ್ಸು ಸಿಕ್ಕಂತೆ.
ರಾಜೀವ್‌ ಗಾಂಧಿ ಆರೋಗ್ಯ ವಿವಿಯಲ್ಲಿರುವ ನಿಧಿಯಿಂದ ಸರಕಾರ ವರ್ಷಕ್ಕೆ 200 ಕೋಟಿಯಂತೆ ಪುತ್ತೂರು ಸರಕಾರಿ ಮೆಡಿಕಲ್‌ ಕಾಲೇಜಿಗೆ ನಿರಂತರ 4 ವರ್ಷ ಕೊಟ್ಟರೆ ಸುಸಜ್ಜಿತ ಮೆಡಿಕಲ್‌ ಕಾಲೇಜು ತಲೆ ಎತ್ತಲಿದೆ ಎಂಬ ಅಂಶವನ್ನು ಸರಕಾರದ ಗಮನಕ್ಕೆ ತರಲಾಗಿದೆ.
ಸಾಗಿ ಬಂದ ಹೆಜ್ಜೆಗುರುತು
ಮಂಗಳೂರನ್ನು ಹೊರತುಪಡಿಸಿದರೆ ಜಿಲ್ಲೆಯ ಇತರ ಭಾಗಕ್ಕೆ ಪುತ್ತೂರು ಪ್ರಮುಖ ಕೇಂದ್ರವಾದ ಕಾರಣ ಇಲ್ಲಿಸರಕಾರಿ ಮೆಡಿಕಲ್‌ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ 10 ವರ್ಷಗಳ ಹಿಂದೆ ಹುಟ್ಟಿತು.
ಶಕುಂತಳಾ ಶೆಟ್ಟಿ ಶಾಸಕರಾಗಿದ್ದಾಗ 40 ಎಕರೆ ಸರಕಾರಿ ಜಾಗವನ್ನು ಸರಕಾರಿ ಮೆಡಿಕಲ್‌ ಕಾಲೇಜು ಹೆಸರಿಗೆ ಮೀಸಲಿಡಲಾಯಿತು. ಸದ್ಯಕ್ಕೆ ರಾಜ್ಯದ ಯಾವ ಜಿಲ್ಲೆಯಲ್ಲೂ ಇಷ್ಟೊಂದು ಪ್ರಮಾಣದ ಜಾಗ ಸರಕಾರಿ ಮೆಡಿಕಲ್‌ ಕಾಲೇಜಿಗೆ ಮೀಸಲಿಟ್ಟಿಲ್ಲ ಎನ್ನುತ್ತಾರೆ ಹೋರಾಟಗಾರರು.
ಸರಕಾರಿ ಮೆಡಿಕಲ್‌ ಕಾಲೇಜು ಹೋರಾಟ ಸಮಿತಿ ಅನೇಕ ಹಂತದ ಅಭಿಯಾನ ನಡೆಸಿದೆ. ವಿಚಾರ ಸಂಕಿರಣ, ಸಭೆ, ಸಹಿ ಸಂಗ್ರಹ, ಕರಪತ್ರ ಹಂಚಿಕೆ, ಮೆರವಣಿಗೆ ಇತ್ಯಾದಿ ನಡೆಸಲಾಗಿದೆ.
ಅಶೋಕ್‌ ರೈ ಶಾಸಕರಾದ ಮೇಲೆ ಈ ನಿಟ್ಟಿನಲ್ಲಿ ಅನೇಕ ಬಾರಿ ಸಿಎಂ, ಡಿಸಿಎಂ ಮತ್ತು ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹೋರಾಟ ಸಮಿತಿಯ ನಿಯೋಗವೂ ಸಿಎಂ ಭೇಟಿ ಮಾಡಿ ಚರ್ಚಿಸಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement