Connect with us

ಸ್ಥಳೀಯ

ವಿಟ್ಲ : ದಲಿತ ಮುಖಂಡನೆಂದು ಹೇಳಿ ದೈವ ನರ್ತಕರಿಗೆ ಬೆದರಿಸಿ ಹಣ ವಸೂಲಿ. ಠಾಣೆಯಲ್ಲಿ ದೂರು ನೀಡಿದರೂ ಪ್ರಕರಣ ದಾಖಲಿಸದ ಪೊಲೀಸರು… ನ್ಯಾಯಾಲಯದ ಆದೇಶದ ಮೇರೆಗೆ ಎಫ್ ಐ ಆರ್ ದಾಖಲು

Published

on

ಸೇಸಪ್ಪ ಬೆದ್ರಕಾಡು ಹಾಗೂ ಕಮಲ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ನ್ಯಾಯಾಲಯ ಆದೇಶ



ವಿಟ್ಲ: ದೈವನರ್ತಕಗೆ ಬೆದರಿಸಿ, ಹಣಸುಲಿಗೆ ಮತ್ತು ಚೆಕ್‌ ವಸೂಲಿ ಮಾಡಿದ ಆರೋಪದಲ್ಲಿ ದಲಿತ ಸಂಘದ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಮತ್ತು ವಿಟ್ಲದ ನೆಕ್ಕರೆಕಾಡು ಎಂಬಲ್ಲಿರುವ ಕಮಲ ಎಂಬವರ ಮೇಲೆ ಎಫ್‌ಐಆರ್‌ ದಾಖಲಿಸುವಂತೆ ಬಂಟ್ವಾಳ ಎಡಿಷನಲ್‌ ಸಿವಿಲ್‌ ಜಡ್ಜ್‌ ಮತ್ತು JMFC ಕೋರ್ಟ್‌ ಆದೇಶ ನೀಡಿದೆ. ಆನಂದ ಸುರುಳಿಮೂಲೆ ಎಂಬವರು ಬಂಟ್ವಾಳ ಎಡಿಷನಲ್‌ ಸಿವಿಲ್‌ ಜಡ್ಜ್‌ ಮತ್ತು JMFC ಕೋರ್ಟ್‌‌ನಲ್ಲಿ ನ್ಯಾಯವಾದಿ ಶಿವಾನಂದ ವಿಟ್ಲರವರ ಮೂಲಕ ಪ್ರೈವೇಟ್‌ ಕೇಸ್‌ ದಾಖಲಿಸಿದ್ದರು.

ಪ್ರಕರಣದ ವಾದ ವಿವಾದಗಳನ್ನು ಪರಿಶೀಲಿಸಿದ ಮಾನ್ಯ ನಾಯಾಲಯವು ಬಿಎನ್‌ಎಸ್‌ಎಸ್‌ನ ಸೆಕ್ಷನ್ 175(3) ಅಡಿಯಲ್ಲಿ ಸೇಸಪ್ಪ ಬೆದ್ರಕಾಡು ಮತ್ತು ಕಮಲ ನೆಕ್ಕೆರೆಕಾಡು ಎಂಬವರ ವಿರುದ್ಧ ಕೂಡಲೇ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸ್‌ ಇಲಾಖೆಗೆ ಆದೇಶ ನೀಡಿದೆ. ದೈವನರ್ತಕ ಆನಂದರವರು ದೂರು ನೀಡಿದ್ದರೂ ತನಿಖೆಗೆ ನಿರ್ದೇಶನವನ್ನು ದಾಖಲಿಸಲು ನಿರಾಕರಿಸಿದ ಬಗ್ಗೆ ತಮ್ಮ ಹೇಳಿಕೆಯನ್ನು ಸಲ್ಲಿಸಲು ವಿಟ್ಲ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಗೆ ಸೂಚನೆಯನ್ನು ನೀಡಲು ಆದೇಶಿಸಿದೆ.

ಏನಿದು ಪ್ರಕರಣ..?
ಬಂಟ್ವಾಳ ತಾಲೂಕು ವಿಟ್ಲ ಕಸಬಾ, ಮಂಗಳಪದವು ಸುರುಳಿಮೂಲೆ ನಿವಾಸಿ ಆನಂದ. ಎಸ್‌ ನಲಿಕೆ- ಹಿಂದೂ ಸಮಾಜಕ್ಕೆ ಸೇರಿದವರಾಗಿರುತ್ತಾರೆ. ಜೀವನೋಪಾಯಕ್ಕಾಗಿ ಹಾಗೂ ಹಿರಿಯರ ಕಾಲದಿಂದಲೂ ಬಳುವಳಿಯಾಗಿ ಬಂದ ನೇಮ ಕಟ್ಟುವ (ದೈವ ನರ್ತನೆ) ಸೇವೆಯನ್ನು ಜೀವನೋಪಾಯಕ್ಕಾಗಿ ಮಾಡಿಕೊಂಡ ಬರುತ್ತಿದ್ದು ಹಾಗೂ ನಾಟಿ ವೈದ್ಯ, ಜ್ಯೋತಿಷಿ ಕೆಲಸವನ್ನು ಸುಮಾರು 20 ವರ್ಷಗಳಿಂದ ಮಾಡಿಕೊಂಡು ಬಂದಿರುತ್ತಾರೆ.

 

ವಿಟ್ಲ ಪರಿಸರದ ನೆಕ್ಕರೆಕಾಡು ಎಂಬಲ್ಲಿನ ಕಮಲ ಎಂಬ ವಿವಾಹಿತೆ ಮಹಿಳೆಯು ಕೆಲವೊಂದು ಸಮಸ್ಯೆಗಳ ಕಾರಣದಿಂದ ಬಂದಿದ್ದು, ಇದರ ಪರಿಹಾರಕ್ಕಾಗಿ ಆ ಮಹಿಳೆಯ ಮನೆಯಲ್ಲಿ ಕೆಲವೊಂದು ವಿಧಿ- ವಿಧಾನಗಳನ್ನು ಮಾಡಿ ಭಾದೆಯನ್ನು ತೆಗೆಯಬೇಕು ಎಂದು ಹೇಳಿರುತ್ತಾರೆ. ಅದಕ್ಕೆ ಒಟ್ಟು ರೂ. 15.000/- ಖರ್ಚು ಆಗುತ್ತದೆ ಎಂದು ಹೇಳಿದಾಗ ಅದಕ್ಕೆ ಆ ಮಹಿಳೆ ಒಪ್ಪಿಕೊಂಡಿದ್ದು ಆ ಪೂಜೆಯನ್ನು ಅವರ ಮನೆಯಲ್ಲಿ ಮಾಡಿರುತ್ತಾರೆ. ಪೂಜೆ ಮಾಡಿದ ನಂತರ ಆ ಮಹಿಳೆ ಮತ್ತು ಅವಳ ಗಂಡ ಬಾಲಕೃಷ್ಣ ಎಂಬವರು ನಾವು ಪೂಜೆಯ ಹಣವನ್ನು ಒಂದು ತಿಂಗಳಲ್ಲಿ ಪಾವತಿಸುತ್ತೇವೆ ಎಂದು ಹೇಳಿ ಕಳೆದ ಸುಮಾರು 10 ತಿಂಗಳಿನಿಂದ ಕೊಟ್ಟಿರುವುದಿಲ್ಲ.

ಹೀಗಿರುವಾಗ ಆನಂದರವರಿಗೆ ಒಂದು ದಿನ ಮಹಿಳೆ ದಾರಿಯಲ್ಲಿ ಸಿಕ್ಕಿದಂತಹ ಸಂದರ್ಭ ಅವರಿಗೆ ನೀಡಬೇಕಾಗಿದ್ದ ಹಣವನ್ನು ಕೇಳಿದಾಗ ಆ ಮಹಿಳೆ ಆ ಸಂದರ್ಭವನ್ನು ಬಳಸಿಕೊಂಡು ಇನ್ನೂ ನನ್ನಲ್ಲಿ ಹಣ ಕೇಳಿದರೆ ನಿನ್ನ ಮೇಲೆ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರದ ಕೇಸು ದಾಖಲಿಸುತ್ತೇನೆ ಎಂದು ಬೆದರಿಸಿರುತ್ತಾರೆ.

ಬಳಿಕ ಆನಂದರವರ ಮೇಲೆ ವಿಟ್ಲ ಠಾಣೆಯಲ್ಲಿ ಸುಳ್ಳು ದೂರನ್ನು ನೀಡಿ 25/10/2024 ರಂದು ಠಾಣೆಗೆ ಬರುವಂತೆ ಮಾಡಿ ಪೊಲೀಸರ ಮೇಲೆ ಅವರ ಅನುಚಿತ ಪ್ರಭಾವವನ್ನು ಬೀರಿ ದಲಿತ ಸಂಘದ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಎಂಬ ವ್ಯಕ್ತಿಯೊಂದಿಗೆ ಸೇರಿ ಠಾಣೆಯಲ್ಲಿ ಬಲತ್ಕಾರವಾಗಿ ಸುಳ್ಳು ಹೇಳಿಕೆಯನ್ನು ಬರೆಸಿಕೊಂಡು ಅವರ ಸಹಿಯನ್ನು ಪಡೆದು ಇನ್ನು ಅವರಿಗೆ ಬರಬೇಕಾಗಿದ್ದ ಹಣವನ್ನು ಕೇಳದಂತೆ ಬೆದರಿಸಿರುತ್ತಾರೆ. ಬಳಿಕ ಠಾಣೆಯಿಂದ ಅದೇ ದಿನ ಹೊರಗಡೆ ಬಂದಾಗ ಕಮಲ ಮತ್ತು ಸೇಸಪ್ಪ ಬೆದ್ರಕಾಡು ಎಂಬ ವ್ಯಕ್ತಿಯು ಬಂದು ಠಾಣೆಯ ಹೊರಗಡೆ ನೀನು ನಮಗೆ ರೂ.1,25,000/- ಹಣವನ್ನು ನೀಡಬೇಕು. ಇಲ್ಲದೆ ಹೊದರೆ ನಿನನ್ನ ಮೇಲೆ ಅತ್ಯಾಚಾರದತಂಹ ದೂರನ್ನು ದಾಖಲು ಮಾಡಿ, ಜೈಲಿಗೆ ಅಟ್ಟಿ ಭವಿಷ್ಯದಲ್ಲಿ ನೀನು ದೈವ ನರ್ತನೆ ಸೇವೆಯನ್ನು ಮಾಡದಂತೆ ಹಾಗೂ ಊರಿನಲ್ಲಿ ನಿನ್ನ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡುತ್ತೇವೆ ಎಂದು ಬೆದರಿಸಿದಾಗ ಆನಂದರವರು ಮಾನಸಿಕವಾಗಿ ಕುಗ್ಗಿ ಹೋಗಿ ಮನೆಯವರಿಗೆ ಕರೆ ಮಾಡಿ ಹೆಂಡತಿ ಮತ್ತು ಸಹೋದರರ ಮುಖಾಂತರ ಅವರ ಕೆನರಾ ಬ್ಯಾಂಕ್‌ ವಿಟ್ಲ ಶಾಖೆಯ ತಲಾ ರೂ. 25,000/-ದಂತೆ 5 ಚೆಕ್‌ಗಳನ್ನು ಸೇಸಪ್ಪ ಬೆದ್ರಕಾಡು ಎಂಬವರು ಪಡೆದುಕೊಂಡಿರುತ್ತಾನೆ. ಆ ಚೆಕ್‌ಗಳಲ್ಲಿ ಪ್ರತಿ ತಿಂಗಳ 20ನೇ ತಾರೀಕಿನ ದಿನಾಂಕವನ್ನು ನಮೂದಿಸಿ ನೀನು ರೂ. 25,000/- ಹಣವನ್ನು ಕೊಡಬೇಕು ಎಂದು ಬೆದರಿಸಿದಾಗ ಮಾನ- ಮರ್ಯಾದೆ ಮತ್ತು ಕುಟುಂಬದ ಹಿತ ದೃಷ್ಟಿಯಿಂದ ಒಪ್ಪಿಕೊಂಡಿರುತ್ತಾರೆ.

 

2024 ನವೆಂಬರ್‌ 20ರಂದು ವಿಟ್ಲದ ಬಸ್ಸು ನಿಲ್ದಾಣದಲ್ಲಿ ಸೇಸಪ್ಪ ಬೆದ್ರಕಾಡುರವರು ನೀನು ಹಣವನ್ನು ನೀಡಬೇಕು ಇಲ್ಲದಿದ್ದರೆ ನಿನ್ನ ಮೇಲೆ ಕಮಲನ ಮುಖಾಂತರ ಅತ್ಯಚಾರದ ದೂರು ದಾಖಲು ಮಾಡುತ್ತೇನೆ ಎಂದು ಬೆದರಿಸಿದ್ದು, ಏನಾದರೂ ಮಾಡಿ 2 ದಿನದಲ್ಲಿ ದುಡ್ಡು ಹೊಂದಿಸಿ ಕೋಡುತ್ತೇನೆ ಎಂದು ಹೇಳಿದ್ದು 2024 ನವೆಂಬರ್‌ 23 ರಂದು ಸೇಸಪ್ಪರವರಿಗೆ ಕರೆ ಮಾಡಿ ಹಣವನ್ನು ಎಲ್ಲಿ ಕೊಡಬೇಕು ಎಂದು ಕೇಳಿದಾಗ ನೀನು ನನ್ನ ಹೆಂಡತಿಯ ನಂಬರ್‌ಗೆ ಫೋನ್‌ ಪೇ(phone pay) ಮುಖಾಂತರ ಹಾಕು ಎಂದು ಹೇಳಿ ಅವರ ಹೆಂಡತಿ ಪ್ರೇಮ ಎಂಬವರ ಮೊಬೈಲ್‌ ಸಂಖ್ಯೆಗೆ 2024 ನವೆಂಬರ್‌ 23 ರಂದು ರೂ. 25,000/- ಹಣವನ್ನು ಹಾಕಿರುತ್ತಾರೆ. ನಂತರ ಅವರ ಚೆಕ್‌ಗಳನ್ನು ಹಿಂದಿರುಗಿಸಿ ಎಂದು ಕೇಳಿಕೊಂಡಾಗ 5 ಚೆಕ್‌ಗಳಲ್ಲಿ 1 ಚೆಕ್‌ನ್ನು ಅವರಿಗೆ ಹಿಂದಿರುಗಿಸಿರುತ್ತಾರೆ. ಆ ಹಣವನ್ನು ಪಡೆಯುದಕ್ಕಿಂತ ಮೊದಲು ಸುಮಾರು ಒಂದು ತಿಂಗಳಿನಿಂದ ಪದೆ-ಪದೇ ಹಣವನ್ನು ನೀಡುವಂತೆ ಅವನ ಮೊಬೈಲ್‌ ಸಂಖ್ಯೆಯಿಂದ ಕರೆ ಮಾಡಿ ಬ್ಲಾಕ್‌ಮೇಲ್‌ ಮಾಡಿರುತ್ತಾರೆ. ಉಳಿದ 4 ಚೆಕ್‌ಗಳನ್ನು ಈಗಲೂ ಅವನಲ್ಲಿಯೇ ಇದ್ದು ಪ್ರತಿ ತಿಂಗಳು ನಾನು ಹೇಳಿದ ನಂಬರಿಗೆ ರೂ. 25,000/-ರಂತೆ ಇನ್ನೂ ರೂ.1, 00,000/-ವನ್ನು ಕೊಡಬೇಕು ಎಂದು ಬೆದರಿಸಿರುತ್ತಾನೆ. ಇದರಿಂದ ಆನಂದರವರು ಮಾನಸಿಕವಾಗಿ ಕುಗ್ಗಿ ಹೋಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿರುತ್ತದೆ.

2024 ಡಿಸೆಂಬರ್‌ 18ರಂದು ಸೇಸಪ್ಪರವರು ಈ ತಿಂಗಳ ಹಣವನ್ನು ನೀನು ನೀಡಬೇಕು ಎಂದು ಹೇಳಿ ಅವನು ಆ ಹಣದಲ್ಲಿ ಕಮಲರವರಿಗೆ ಅರ್ಧ ಭಾಗದಷ್ಟು ಕಮಲಾರಿಗೆ ನೀಡಲು ಇದೆ ನೀನು ಪಾವತಿಸದೇ ಇದ್ದರೆ ನಿನ್ನ ಮೇಲೆ ಅತ್ಯಾಚಾರದ ಕೇಸು ದಾಖಲು ಮಾಡುತ್ತೇನೆ ಎಂದು ಹೇಳಿದ್ದಾಳೆ ಎಂದು ಬೆದರಿಸಿರುತ್ತಾರೆ. ಹಾಗಾಗಿ ಮಾನಸಿಕವಾಗಿ ನೊಂದಿದ್ದ ಈ ವಿಚಾರವನ್ನು ಅವರ ಹೆಂಡತಿ ಮಕ್ಕಳೊಂದಿಗೆ ತಿಳಿಸಿದಾಗ ದೃಢ ನಿರ್ಧಾರವನ್ನು ತೆಗೆದುಕೊಂಡು ಆ ಇಬ್ಬರು ವ್ಯಕ್ತಿಗಳ ಮೇಳೆ ದೂರು ನೀಡಲು ನಿರ್ಧಾರವನ್ನು ಕೈಗೊಂಡಿರುತ್ತಾರೆ. 2024 ಡಿಸೆಂಬರ್‌ 27ರಂದು ಈ ದೂರನ್ನು ವಿಟ್ಲ ಠಾಣೆಗೆ ನೀಡಲು ಹೋದಾಗ ಯಾವುದೇ ದೂರನ್ನು ಸ್ವೀಕರಿಸುವುದಿಲ್ಲ.

ಆದರಿಂದ ಸುಳ್ಳು ವಿವಾದಗಳನ್ನು ಸೃಷ್ಟಿಸಿ ಹಣಕ್ಕಾಗಿ ನನ್ನನ್ನು ಬ್ಲಾಕ್‌ಮೇಲ್‌ ಮಾಡಿ ನನಗೆ ವಂಚಿಸಿ ಬೆದರಿಕೆಯೊಡ್ಡು, ಪರಿಶಿಷ್ಟ ಜಾತಿಗೆ ಸೇರಿವನಾಗಿದ್ದರು ನನ್ನ ಮೇಲೆ ಸುಳ್ಳು ಅಪಾದನೆ ಮಾಡಿ ನನ್ನಿಂದ 5 ಚೆಕ್‌ಗಳನ್ನು ಪಡೆದು 2024 ನವೆಂಬರ್‌ 23 ರಂದು ರೂ. 25,000/- ಹಣವನ್ನು ಸೇಸಪ್ಪನ ಹೆಂಡತಿಯ ಖಾತೆಗೆ ಫೋನ್‌ ಪೇ ಮುಖಾಂತರ ಹಾಕಿಸಿಕೊಂಡು ಹೆಚ್ಚಿನ ಹಣಕ್ಕಾಗಿ ಬೆದರಿಕೆಯೊಡ್ಡುತ್ತಿರುವರವರ ಮೇಲೆ ತಿಳಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್‌ ವರಿಷ್ಠಾಧಿಕಾರಿಯವರಿಗೆ ಆನಂದ. ಎಸ್‌ ರವರು ದೂರು ನೀಡಿದ್ದರು.

 

ಪೊಲೀಸ್‌ ಇಲಾಖೆ ಇದಕ್ಕೆ ಸ್ಪಂದಿಸದೇ ಇದ್ದ ಕಾರಣ ಆನಂದರವರು ಬಂಟ್ವಾಳ ಎಡಿಷನಲ್‌ ಸಿವಿಲ್‌ ಜಡ್ಜ್‌ ಮತ್ತು JMFC ಕೋರ್ಟ್‌‌ನಲ್ಲಿ ನ್ಯಾಯವಾದಿ ಶಿವಾನಂದ ವಿಟ್ಲ ಇವರ ಮೂಲಕ ಪ್ರೈವೇಟ್‌ ಕೇಸ್‌ ದಾಖಲಿಸಿದ್ದರು.

 

ಇದೀಗ ಪ್ರಕರಣದ ವಾದ ವಿವಾದಗಳನ್ನು ಪರಿಶೀಲಿಸಿ ಮಾನ್ಯ ನಾಯಾಲಯವು ಬಿಎನ್‌ಎಸ್‌ಎಸ್‌ನ ಸೆಕ್ಷನ್ 175(3) ಅಡಿಯಲ್ಲಿ ಸೇಸಪ್ಪ ಬೆದ್ರಕಾಡು ಮತ್ತು ಕಮಲ ನೆಕ್ಕೆರೆಕಾಡು ಎಂಬವರ ವಿರುದ್ಧ ಕೂಡಲೇ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸ್‌ ಇಲಾಖೆಗೆ ಆದೇಶ ನೀಡಿದೆ. ದೈವನರ್ತಕ ಆನಂದರವರು ದೂರು ನೀಡಿದ್ದರೂ ತನಿಖೆಗೆ ನಿರ್ದೇಶನವನ್ನು ದಾಖಲಿಸಲು ನಿರಾಕರಿಸಿದ ಬಗ್ಗೆ ತಮ್ಮ ಹೇಳಿಕೆಯನ್ನು ಸಲ್ಲಿಸಲು ವಿಟ್ಲ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಗೆ ಸೂಚನೆಯನ್ನು ನೀಡಲು ಆದೇಶಿಸಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement