Published
2 months agoon
By
Akkare Newsಪುತ್ತೂರು: ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಎನ್. ಪುರಂದರ ರೈ ಕೋರಿಕಾರು ಪುನರ್ ನೇಮಕಗೊಂಡಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈಯವರ ಸೂಚನೆಯಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ನೇಮಕಗೊಳಿಸಿ ಆದೇಶಿಸಿದ್ದಾರೆ.ಪ್ರಗತಿಪರ ಕೃಷಿಕರಾಗಿರುವ ಪುರಂದರ್ ರೈಯವರು ಕುಂಬ್ರದ ನಿಶ್ಮಿತ ಕಾಂಪ್ಲೆಕ್ಸ್ ಮಾಲಕರು. ಕೆದಂಬಾಡಿ ಗ್ರಾಮದ ಎರಡನೇ ವಾರ್ಡಿನ ಮಾಜಿ ಅಧ್ಯಕ್ಷರು, ಆಲಡ್ಕ ಸದಾಶಿವ ದೇವಸ್ಥಾನ ಜಾತ್ರೋತ್ಸವ ಸಮಿತಿಯ ಉಪಾಧ್ಯಕ್ಷರು ಹಾಗೂ ಕುಂಬ್ರ ವರ್ತಕರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುತ್ತಾರೆ.