Published
1 month agoon
By
Akkare Newsರಾಜ್ಯದಲ್ಲಿ ರಂಜಾನ್ ರಜೆ ವಿಚಾರ ಭಾರಿ ಚರ್ಚೆಯಾಗುತ್ತಿದೆ. ರಂಜಾನ್ ತಿಂಗಳು ಮುಸ್ಲಿಂ ಸರ್ಕಾರಿ ನೌಕರರಿಗೆ ಒಂದು ಗಂಟೆ ಮುಂಚಿತವಾಗಿ ಕೆಲಸದಿಂದ ಬಿಡುಗಡೆಗೊಳಿಸಬೇಕೆಂಬ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಶಿವರಾತ್ರಿ ಮರುದಿನ ಹಿಂದೂ ಸರ್ಕಾರಿ ನೌಕರರಿಗೆ ರಜೆ ನೀಡಬೇಕೆಂದು ಮನವಿ ಮಾಡಲಾಗಿದೆ.
ಯಸ್, ರಾಜ್ಯದಲ್ಲಿ ತಣ್ಣಗಾಗಿದ್ದ ಧರ್ಮ ದಂಗಲ್ ಇದೀಗ ರಜೆ ವಿಚಾರವಾಗಿ ಮತ್ತೆ ಮುನ್ನಲೆಗೆ ಬಂದಿದೆ. ಮುಸ್ಲಿಂ ಸರ್ಕಾರಿ ನೌಕರರು ರಂಜಾನ್ ತಿಂಗಳಲ್ಲಿ ತಮಗೆ ಒಂದು ಗಂಟೆ ಕೆಲಸದ ಅವಧಿಯನ್ನು ಕಡಿತಗೊಳಿಸಿ ಎಂದು ಬೇಡಿಕೆ ಸಲ್ಲಿಸಿದ ಬೆನ್ನಲ್ಲೇ ಹಿಂದೂ ಸರ್ಕಾರ ನೌಕರರು ಕೂಡ ವಿನೂತನವಾದ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ಅದೇನೆಂದರೆ ಶಿವರಾತ್ರಿ ದಿನ ಹಿಂದುಗಳು ಜಾಗರಣೆ ಮಾಡುತ್ತಾರೆ. ರಾತ್ರಿ ವೇಳೆ ನಿದ್ದೆ ಮಾಡಿರುವುದಿಲ್ಲ. ಹೀಗಾಗಿ ಜಾಗರಣೆ ಮಾಡಿದ ಕಾರಣಕ್ಕೆ ಶಿವರಾತ್ರಿ ಮರುದಿನ ಇಂದು ಸರ್ಕಾರಿ ನೌಕರರಿಗೆ ರಜೆಯನ್ನು ಘೋಷಿಸಿ ಎಂದು ಮನವಿ ಸಲ್ಲಿಸಲಾಗಿದೆ
ಶಿವರಾತ್ರಿ ಮರುದಿನ ಹಿಂದೂ ಸರ್ಕಾರಿ ನೌಕರರಿಗೆ ರಜೆ?
ರಾಜ್ಯದಲ್ಲಿ ರಂಜಾನ್ ರಜೆ ವಿಚಾರ ಭಾರಿ ಚರ್ಚೆಯಾಗುತ್ತಿದೆ. ರಂಜಾನ್ ತಿಂಗಳು ಮುಸ್ಲಿಂ ಸರ್ಕಾರಿ ನೌಕರರಿಗೆ ಒಂದು ಗಂಟೆ ಮುಂಚಿತವಾಗಿ ಕೆಲಸದಿಂದ ಬಿಡುಗಡೆಗೊಳಿಸಬೇಕೆಂಬ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಶಿವರಾತ್ರಿ ಮರುದಿನ ಹಿಂದೂ ಸರ್ಕಾರಿ ನೌಕರರಿಗೆ ರಜೆ ನೀಡಬೇಕೆಂದು ಮನವಿ ಮಾಡಲಾಗಿದೆ.
ಯಸ್, ರಾಜ್ಯದಲ್ಲಿ ತಣ್ಣಗಾಗಿದ್ದ ಧರ್ಮ ದಂಗಲ್ ಇದೀಗ ರಜೆ ವಿಚಾರವಾಗಿ ಮತ್ತೆ ಮುನ್ನಲೆಗೆ ಬಂದಿದೆ. ಮುಸ್ಲಿಂ ಸರ್ಕಾರಿ ನೌಕರರು ರಂಜಾನ್ ತಿಂಗಳಲ್ಲಿ ತಮಗೆ ಒಂದು ಗಂಟೆ ಕೆಲಸದ ಅವಧಿಯನ್ನು ಕಡಿತಗೊಳಿಸಿ ಎಂದು ಬೇಡಿಕೆ ಸಲ್ಲಿಸಿದ ಬೆನ್ನಲ್ಲೇ ಹಿಂದೂ ಸರ್ಕಾರ ನೌಕರರು ಕೂಡ ವಿನೂತನವಾದ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ಅದೇನೆಂದರೆ ಶಿವರಾತ್ರಿ ದಿನ ಹಿಂದುಗಳು ಜಾಗರಣೆ ಮಾಡುತ್ತಾರೆ. ರಾತ್ರಿ ವೇಳೆ ನಿದ್ದೆ ಮಾಡಿರುವುದಿಲ್ಲ. ಹೀಗಾಗಿ ಜಾಗರಣೆ ಮಾಡಿದ ಕಾರಣಕ್ಕೆ ಶಿವರಾತ್ರಿ ಮರುದಿನ ಇಂದು ಸರ್ಕಾರಿ ನೌಕರರಿಗೆ ರಜೆಯನ್ನು ಘೋಷಿಸಿ ಎಂದು ಮನವಿ ಸಲ್ಲಿಸಲಾಗಿದೆ.
ತೆಲಂಗಾಣ, ಆಂಧ್ರದಲ್ಲಿ ಸರ್ಕಾರ ಸ್ವಯಂಪ್ರೇರಿತವಾಗಿ ಮುಸ್ಲಿಂ ಸಮುದಾಯದ ಉದ್ಯೋಗಿಗಳಿಗೆ ರಂಜನ್ ಸಮಯದಲ್ಲಿ ನಿತ್ಯ ಒಂದು ಗಂಟೆ ವಿನಾಯಿತಿ ಕೊಟ್ಟಿದೆ. ಅದರಂತೆ ರಾಜ್ಯದಲ್ಲೂ ಈ ರೀತಿಯ ಅವಕಾಶ ಮಾಡಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಎಆರ್‌ಎಂ ಹುಸೇನ್ ಹಾಗೂ ಸೈಯದ್ ಅಹಮ್ಮದ್, ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಸಂಬಂಧ ಆರಂಭದಲ್ಲಿ ಕಿಡಿಕಾರಿದ್ದ ಹಿಂದೂ ಸಂಘಟನೆಗಳು, ಬಳಿಕ ಅವರದ್ದೇ ದಾರಿಯಲ್ಲಿ ಹೋಗಿ ಮತ್ತೆ ಸರ್ಕಾರದ ಮುಂದೆ ಹಿಂದೂಗಳಿಗೆ ಹಬ್ಬದ ಸಂದರ್ಭಗಳಲ್ಲಿ ಹೆಚ್ಚುವರಿ ರಜೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಮತ್ತು ಸಿಎಂಗೆ ಮನವಿ ಮಾಡಿರುವ ಸಂಘಟನೆಗಳು, ಈ ಬಗ್ಗೆ ಶೀಘ್ರ ಆದೇಶ ಮಾಡಬೇಕು. ಪ್ರತಿವರ್ಷ ಕೂಡ ಇದು ಜಾರಿಯಲ್ಲಿರುವಂತೆ ಆದೇಶ ಹೊರಡಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.