Connect with us

ಇತ್ತೀಚಿನ ಸುದ್ದಿಗಳು

ಮಂಗಳೂರು : ಜಾಗ್ವಾರ್‌ ಸಮರ ವಿಮಾನಕ್ಕೆ ಕುಡ್ಲದ ಹುಡುಗಿ ಸಾರಥಿ!

Published

on

ಮಂಗಳೂರು ::ಭಾರತೀಯ ವಾಯುಪಡೆಯ ಹೆಮ್ಮೆ ಹಾಗೂ ಯಶಸ್ವಿ ಯುದ್ಧವಿಮಾನಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಜಾಗ್ವಾರ್‌ ವಿಮಾನವನ್ನು ಮುನ್ನಡೆಸುವ ಅವಕಾಶವನ್ನು ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪಡೆದಿದ್ದಾರೆ. ಅಂಥ ಅವಕಾಶ ಸಿಕ್ಕಿರುವುದು ಮಂಗಳೂರು ಮೂಲದ ಫ್ಲೆಯಿಂಗ್‌ ಆಫೀಸರ್‌ ತನುಷ್ಕಾ ಸಿಂಗ್‌ ಅವರಿಗೆ.
ಇವರು ಜಾಗ್ವಾರ್‌ ಯುದ್ಧ ವಿಮಾನ ಸ್ಕ್ವಾಡ್ರನ್‌ನಲ್ಲಿ ಪೈಲಟ್‌ ಆಗಿ ಆಯ್ಕೆಯಾಗಿದ್ದಾರೆ.

 

ಜಾಗ್ವಾರ್‌ ಯುದ್ಧ ವಿಮಾನವನ್ನು ಇದುವರೆಗೆ ಮಹಿಳಾ ಪೈಲಟ್‌ಗಳು ಶಾಶ್ವತ ನೆಲೆಯಲ್ಲಿ ಮುನ್ನಡೆಸಿಲ್ಲ. ತನುಷ್ಕಾ ಮಿಲಿಟರಿ ಹಿನ್ನೆಲೆಯ ಕುಟುಂಬದವರು. ಅವರ ತಂದೆ, ಅಜ್ಜ ಎಲ್ಲರೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮೂಲತಃ ಉ.ಪ್ರದೇಶದವರಾದರೂ 2007ರಿಂದ ತನುಷ್ಕಾ ಮಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಹಾಗಾಗಿ “ನಾನು ಕುಡ್ಲದವಳು’ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ತಂದೆ ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌ ಅಜಯ್‌ ಪ್ರತಾಪ್‌ ಸಿಂಗ್‌ ಅವರು ಪ್ರಸ್ತುತ ಎಂಆರ್‌ಪಿಎಲ್‌ ಸಂಸ್ಥೆಯ ಎಚ್‌ಎಸ್‌ಇ ವಿಭಾಗದಲ್ಲಿ ಜನರಲ್‌ ಮ್ಯಾನೇಜರ್‌ ಆಗಿದ್ದಾರೆ.

 

ತನುಷ್ಕಾ ಅವರು ಸುರತ್ಕಲ್‌ ಡಿಪಿಎಸ್‌ ಎಂಆರ್‌ಪಿಎಲ್‌ ಶಾಲೆ ಯಲ್ಲಿ ಎಸೆಸೆಲ್ಸಿ, ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ವಿಜ್ಞಾನ ಶಿಕ್ಷಣದ ಬಳಿಕ ಮಣಿಪಾಲ ಎಂಐಟಿಯಲ್ಲಿ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿ ನಿಯ ರಿಂಗ್‌ನಲ್ಲಿ 2022ರಲ್ಲಿ ಬಿ.ಟೆಕ್‌. ಪದವಿ ಗಳಿಸಿದ್ದಾರೆ.
“ಚಿಕ್ಕಂದಿನಿಂದಲೂ ಸೇನೆಗೆ ಸೇರ ಬೇಕೆಂಬ ಹಂಬಲ ಇತ್ತು. ಆದರೆ ವಾಯುಪಡೆಗೆ ಸೇರುತ್ತೇನೆ, ಅದರಲ್ಲೂ ಸಮರ ವಿಮಾನದ ಪೈಲಟ್‌ ಆಗು ತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ’ ಎನ್ನುತ್ತಾರೆ ತನುಷ್ಕಾ.

 

ತನುಷ್ಕಾ ಸಿಂಗ್‌ ಅವರು ಶಾರ್ಟ್‌ ಸರ್ವಿಸ್‌ ಕಮಿಷನ್‌ ಮೂಲಕ ಭಾರತೀಯ ಸೇನೆಯನ್ನು ಸೇರಲು ಬಯ ಸಿದ್ದರು. ಆದರೆ ಅಲ್ಲಿ ಮಹಿಳೆಯರಿಗೆ ಹುದ್ದೆಯ ಅವಕಾಶ ಕಡಿಮೆ ಇತ್ತು, ಹಾಗಾಗಿ ವಾಯುಪಡೆ ಯನ್ನು ಆಯ್ಕೆ ಮಾಡಿಕೊಂಡರು. ಆಯ್ಕೆಯ ಬಳಿಕ ಒಂದೂವರೆ ವರ್ಷ ಕಾಲ ವಾಯುಪಡೆಯ ಕೆಡೆಟ್‌ ಆಗಿ ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ವಾಯುಪಡೆ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಅಲ್ಲಿ ಕಮಿಷನ್‌x ಅಧಿಕಾರಿಯಾಗಿ ಭಡ್ತಿ ಪಡೆದು ಒಂದು ವರ್ಷ ಕಾಲ ಯುದ್ಧ ವಿಮಾನಗಳ ಪೈಲಟ್‌ ಆಗಿ ತರಬೇತಿ ಪಡೆದಿದ್ದಾರೆ. ಈ ವೇಳೆ ಅವರು ಹಾಕ್‌ ಎಂಕೆ 132 ವಿಮಾನವನ್ನು ಚಲಾಯಿಸಿದ್ದಾರೆ.

ಸದ್ಯ ರಜೆಯಲ್ಲಿ ಊರಿಗೆ ಬಂದಿ ರುವ ತನುಷ್ಕಾ ಶೀಘ್ರವೇ ವಿರಾಮ ಪೂರೈಸಿ ಭಾರತೀಯ ವಾಯು ಪಡೆಯ ಜಾಗ್ವಾರ್‌ ಸ್ಕ್ವಾಡ್ರನ್‌ ಸೇರಿಕೊಳ್ಳಲಿದ್ದಾರೆ. “ಇದು ವರೆಗೆ ಕೆಲವಾರು ಪೈಲಟ್‌ ಮಹಿಳೆ ಯರು ಅನುಭವಕ್ಕಾಗಿ ಜಾಗ್ವಾರ್‌ ಯುದ್ಧ ವಿಮಾನ ವನ್ನು ಚಲಾಯಿಸಿದ್ದಾರೆ; ಆದರೆ ಶಾಶ್ವತ ನೆಲೆ ಯಲ್ಲಿ ಜಾಗ್ವಾರ್‌ ಸ್ಕ್ವಾಡ್ರನ್‌ಗೆ ಸೇರ್ಪಡೆ ಯಾಗಿರು ವುದು ಇದೇ ಮೊದಲು’ ಎಂದಿದ್ದಾರೆ ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು.

 

ಇದೇ ನಿಜವಾದ ಬದುಕು
ಮೊದಲ ಬಾರಿ ತರಬೇತಿ ವಿಮಾನವನ್ನೇರಿ ಕಸರತ್ತು ನಡೆಸಿದಾಗ ಯಾವುದೇ ಭಯವಾಗಲಿಲ್ಲ, ಸಂಭ್ರಮವಾಯಿತು, ಅಷ್ಟೇ ಅಲ್ಲ ಇದೇ ನಾನು ಬಯಸಿದ ನಿಜವಾದ ಬದುಕು ಎನ್ನಿಸಿತು ಎನ್ನುತ್ತಾರೆ ತನುಷ್ಕಾ.ಸೇನೆ ಸೇರುವುದಕ್ಕೆ ಅಪಾರ ಆತ್ಮವಿಶ್ವಾಸ ಬೇಕು, ಪ್ರಾಮಾಣಿಕತೆ ಬೇಕು, ನಾಯಕತ್ವದ ಗುಣಲಕ್ಷಣ ಗಳಿರಬೇಕು, ಅಷ್ಟಿದ್ದ ಯಾರೇ ಆದರೂ ಸೈನ್ಯಕ್ಕೆ ಸೇರುವ ಯತ್ನ ಮಾಡಬಹುದು ಎಂದು ಅವರು ಯುವಜನರಿಗೆ ಕಿವಿಮಾತು ಹೇಳಿದ್ದಾರೆ.
ನಾನು ಮಂಗಳೂರಿನವಳು ಎನ್ನುವುದೇ ಹೆಮ್ಮೆ, ನನ್ನ ಮೂಲ ಊರು ಲಕ್ನೋ ಆದರೂ ಮಂಗಳೂರಿ ನಲ್ಲಿ ನೆಲೆಸಿದ್ದೇನೆ, ಕನ್ನಡ ಮಾತನಾಡು ತ್ತೇನೆ, ತುಳು ಕಲಿಯಲು ಸಾಧ್ಯವಾಗಲಿಲ್ಲ.
-ತನುಷ್ಕಾ ಸಿಂಗ್‌, ಫೈಟರ್‌ ಪೈಲಟ್‌

 

 

Continue Reading
Click to comment

Leave a Reply

Your email address will not be published. Required fields are marked *

Advertisement