Published
1 month agoon
By
Akkare News
1,000 ಟನ್‌ಗಿಂತಲೂ ಅಧಿಕ ಸೋನಾ ಮಸೂರಿ ಅಕ್ಕಿ, 500 ಟನ್ ಅಚ್ಚು ಬೆಲ್ಲ, 10 ಲಕ್ಷಕ್ಕೂ ಅಧಿಕ ತೆಂಗಿನಕಾಯಿ, 50 ಟನ್‌ನಷ್ಟು ಸಕ್ಕರೆ, 6 ಟನ್‌ಗೂ ಅಧಿಕ ವಿವಿಧ ಬೇಳೆ ಕಾಳುಗಳು, 5 ಸಾವಿರ ಲೀಟರ್‌ನಷ್ಟು ತುಪ್ಪ, 5 ಸಾವಿರ ಲೀಟರ್‌ನಷ್ಟು ಎಳ್ಳೆಣ್ಣೆ, ತೆಂಗಿನೆಣ್ಣೆ, ರಿಫೈನ್x ಎಣ್ಣೆ, 10 ಸಾವಿರಕ್ಕೂ ಅಧಿಕ ಸೀಯಾಳ, 2 ಸಾವಿರ ಟನ್‌ಗೂ ಅಧಿಕ ವಿವಿಧ ತರಕಾರಿಗಳು (ಸೌತೆ, ಬೂದು ಕುಂಬಳ, ಸಿಹಿ ಕುಂಬಳ, ಮಟ್ಟುಗುಳ್ಳ, ಹಲಸಿನಕಾಯಿ, ಸುವರ್ಣ ಗೆಡ್ಡೆ), ನೂರಾರು ಗೊನೆ ಬಾಳೆ ಹಣ್ಣು, ತೆಂಗಿನ ಎಲೆ, ಅವಲಕ್ಕಿ, ಹರಳು ಸಹಿತ ಇತ್ಯಾದಿ ಸಾಮಗ್ರಿಗಳು ಬಂದು ಸೇರಿವೆ.
ತುಂಬಿ ತುಳುಕಿದ ಅನಂತ ಉಗ್ರಾಣ: ಹಸುರುವಾಣಿ ಸಂಗ್ರಹಕ್ಕೆ ಪಡುಗ್ರಾಮದ ಧೂಮಾವತಿ ದೈವಸ್ಥಾನದ ಬಳಿಯಲ್ಲಿ ಅನಂತ ಉಗ್ರಾಣ ನಿರ್ಮಿಸಲಾಗಿದೆ. ಇದೀಗ ಅನಂತ ಉಗ್ರಾಣ ತುಂಬಿ, ಧೂಮಾವತಿ ದೈವಸ್ಥಾನದ ಬಳಿಯ ಮತ್ತೂಂದು ಉಗ್ರಾಣವೂ ತುಂಬಿದೆ. ಈಗ ಪಾಕಶಾಲೆ ಬಳಿಯ ಉಗ್ರಾಣ, ಜನಾರ್ದನ ದೇವಸ್ಥಾನದ ಸಭಾಂಗಣದಲ್ಲೂ ಹೊರೆಕಾಣಿಕೆ ಸಂಗ್ರಹಿಸಲಾಗಿದೆ. ಹೊರೆ ಕಾಣಿಕ ತಂದವರಿಗೆ ನೀಡಲು ಸಿದ್ಧಪಡಿಸಿದ್ದ 9 ಸಾವಿರದಷ್ಟು ಸರ್ಟಿಫಿಕೆಟ್‌ಗಳೂ ಖಾಲಿಯಾಗಿದೆ. ದೇವಸ್ಥಾನ ಅಭಿವೃದ್ಧಿ ಸಮಿತಿ, ವ್ಯವಸ್ಥಾಪನ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಮಾರ್ಗದರ್ಶನದೊಂದಿಗೆ ಹೊರೆ ಕಾಣಿಕೆ ಸಮರ್ಪಣ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಹೊರೆಕಾಣಿಕೆಯನ್ನು ವ್ಯವಸ್ಥಿತವಾಗಿ ಜೋಡಿಸಿಡುವಲ್ಲಿ ಸ್ವರ್ಣ ಗದ್ದುಗೆ ಸಮರ್ಪಣ ಸಮಿತಿ ಕಾರ್ಯಾಧ್ಯಕ್ಷ ಹರಿಯಪ್ಪ ಕೋಟ್ಯಾನ್ ಅವರ ನೇತೃತ್ವದಲ್ಲಿ ಮಲ್ಪೆ ಕನ್ನಿ ಮೀನುಗಾರರ ಸಂಘ, ಬೇಸಗೆ ನಾಡದೋಣಿ ಮೀನುಗಾರರ ಸಂಘಗಳು ಸುಮಾರು 400 ಮಂದಿ ಸದಸ್ಯರು ಶ್ರಮ ವಹಿಸಿದ್ದಾರೆ. ಮುಂಬಯಿ ಸಮಿತಿ ಕಾರ್ಯಾಧ್ಯಕ್ಷ ರವಿ ಸುಂದರ್ ಶೆಟ್ಟಿ ಮತ್ತು ಊಟೋಪಚಾರ ಸಮಿತಿ ಅಧ್ಯಕ್ಷ ಉದಯ್ ಸುಂದರ್ ಶೆಟ್ಟಿ ನೇತೃತ್ವದ ಮುಂಬಯಿ ಸಮಿತಿ ಮತ್ತು ಆರ್ಥಿಕ ಸಮಿತಿ ಪದಾಧಿಕಾರಿಗಳು ಕೈಜೋಡಿಸಿದ್ದಾರೆ.
ಹೊರಜಿಲ್ಲೆ, ರಾಜ್ಯಗಳ ಕೊಡುಗೆ
– ಸ್ವಸ್ತಿಕ್ ಬ್ರ್ಯಾಂಡ್ ಅಕ್ಕಿ ಮಾಲಕರಿಂದ 15 ಟನ್ ಅಕ್ಕಿ, ಮೂಡುಬೆಳ್ಳೆ ಮೂಡುಮನೆಯಿಂದ 10 ಟನ್ ಅಕ್ಕಿ
– ಸುಗ್ಗಿ ಸುಧಾಕರ ಶೆಟ್ಟಿ ನೇತೃತ್ವದಲ್ಲಿ 10 ಟನ್ ಬೆಲ್ಲ, ಸುಧೀರ್ ಶೆಟ್ಟಿ ಸಾಗರ ನೇತೃತ್ವದಲ್ಲಿ 10 ಟನ್ ತರಕಾರಿ.
– ಮಾಜಿ ಸಚಿವ ಮುರುಗೇಶ್ ನಿರಾಣಿ: 10 ಟನ್ ಸಕ್ಕರೆ, ಕೆಎಂಎಫ್ ಮಂಗಳೂರಿನಿಂದ 1 ಲೋಡ್ ತುಪ್ಪ, ಮಜ್ಜಿಗೆ.
– ಪೂನಾ ಬಂಟರ ಸಂಘದಿಂದ ಇನ್ನಾಕುರ್ಕಿಲ್‌ಬೆಟ್ಟು ಸಂತೋಷ್ ಶೆಟ್ಟಿ ಮತ್ತು ವೈ. ಚಂದ್ರಹಾಸ ಶೆಟ್ಟಿ ನೇತೃತ್ವದಲ್ಲಿ 9,99,999 ರೂ. ಮೊತ್ತದ ಸಾಮಗ್ರಿ
– ಹರೀಶ್ ಪಿ. ಶೆಟ್ಟಿ ಗುರ್ಮೆ ವತಿಯಿಂದ 5 ಲಕ್ಷ ರೂ. ಮೊತ್ತದ ಸಾಮಗ್ರಿಗಳು
– ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ 76 ಬಗೆಯ ಸಾಮಗ್ರಿ
– ಮಂಗಳೂರು ಶರವು ದೇವಸ್ಥಾನದಿಂದ 1,000 ಬಟ್ಟಲು, 1,000 ಲೋಟ
ಕೃತಜ್ಞತೆ ಸಮರ್ಪಣೆ
ನಭೂತೋ ನ ಭವಿಷ್ಯತಿ ಎಂಬಂತೆ ಬೃಹತ್ ಸಂಖ್ಯೆಯಲ್ಲಿ ಹಸುರುವಾಣಿ ಸಂಗ್ರಹಿಸಿ, ಅದನ್ನು ಮೆರವಣಿಗೆಯಲ್ಲಿ ಬಂದು ದೇವಸ್ಥಾನಕ್ಕೆ ಸಮರ್ಪಿಸಿದ ಸಹಸ್ರಾರು ಭಕ್ತರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಹಕಾರಿ, ರಾಜಕೀಯ ಧುರೀಣರೆಲ್ಲರಿಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಹೊರೆ ಕಾಣಿಕೆ ಸಮರ್ಪಣಾ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಪು: ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮೋತ್ಸವಕ್ಕೆ ಮಂಗಳವಾರ ದೇವತಾ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು. ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಗೌರವಾಧ್ಯಕ್ಷ ರವಿಸುಂದರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ನೇತೃತ್ವದಲ್ಲಿ ಋತ್ವಿಜರನ್ನು ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು.
ಬಳಿಕ ಕೊರಂಗ್ರಪಾಡಿ ವೇ| ಮೂ| ಕೆ. ಜಿ. ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ, ಕ್ಷೇತ್ರದ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ.ಪಿ. ಕುಮಾರ ಗುರು ತಂತ್ರಿಗಳ ನೇತೃತ್ವದಲ್ಲಿ, ಪ್ರಧಾನ ಅರ್ಚಕ ವೇ| ಮೂ| ಕಲ್ಯ ಶ್ರೀನಿವಾಸ ತಂತ್ರಿಗಳ ಸಹಯೋಗದೊಂದಿಗೆ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.