Published
1 month agoon
By
Akkare Newsವಿಟ್ಲ, ಕಂಬಳಬೆಟ್ಟು, ಮೇಗಿನಪೇಟೆ, ಚಂದಳಿಕೆ ಸುತ್ತಮುತ್ತಲಿನಲ್ಲಿ ಭಾರೀ ಪ್ರಮಾಣದಲ್ಲಿ ಶಬ್ದ ಕೇಳಿದೆ. ಇದನ್ನು ಗಮನಿಸಿದ ಹಲವು ಮಂದಿ ಭೂಕಂಪನ ಸಂಭವಿಸಿರಬಹುದೆಂದು ಊಹಿಸಿದ್ದರು. ಬಳಿಕ ವಿಚಾರಿಸಿದಾಗ ಮಾಡತ್ತಡ್ಕದಲ್ಲಿರುವ ಕಲ್ಲಿನ ಕೋರೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕೋರೆ ಮಾಲೀಕ ಕೋರೆ ಸಮೀಪದ ಗುಡ್ಡದಲ್ಲಿ ಭಾರೀ ಪ್ರಮಾಣದ ಸ್ಪೋಟಕಗಳನ್ನು ಶೇಖರಿಸಿಟ್ಟಿದ್ದ. ಬೀಸಿಲಿನ ತಾಪಕ್ಕೆ ಅದು ಸ್ಫೋಟಗೊಂಡಿದೆ. ಇದರಿಂದ ಎರಡು ಮನೆಯ ಗೋಡೆ ಬಿರುಕುಗೊಂಡಿದೆ. ಕಿಟಕಿಯ ಗಾಜು ಪುಡಿಯಾಗಿದೆ. ಇದೀಗ ಮಾಡತಡ್ಕ ಭಾಗಕ್ಕೆ ಜನರು ತೆರಳುತ್ತಿದ್ದು, ಕೋರೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇದರಿಂದ ಪ್ರಾಣ ಹಾನಿ ಇನ್ನಿತರ ಅನಾಹುತಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ