Published
1 month agoon
By
Akkare Newsಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರಾದ ಪ್ರದೀಪ್ ಬಿ.ಯು ಇವರು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ ನಾರಾವಿ, ಗದಗ ಇಲ್ಲಿ ಆಯೋಜನೆಗೊಂಡ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದುಕೊಂಡ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುತ್ತಾರೆ. ಪ್ರಸ್ತುತ ಪ್ರಥಮ ಬಿಕಾಂ ವಿದ್ಯಾರ್ಥಿಯಾದ ಇವರು ಶ್ರೀ ಬಾಲಕೃಷ್ಣ ಎಸ್ ಹಾಗೂ ಶ್ರೀಮತಿ ಮೀನಾಕ್ಷಿ ದಂಪತಿಗಳ ಮಗನಾಗಿ ಪುತ್ತೂರು ತಾಲೂಕಿನ ಬಾಜತ್ತುರಿನಲ್ಲಿ ವಾಸಿಸುತ್ತಿದ್ದಾರೆ.
ಇವರು ಪದವಿ ಪೂರ್ವ ಶಿಕ್ಷಣದಿಂದಲೇ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಈಗಾಗಲೇ ಎರಡು ವಾರ್ಷಿಕ ವಿಶೇಷ ಶಿಬಿರಗಳಲ್ಲಿ ಭಾಗವಹಿಸಿರುವ ಇವರು ಇತ್ತೀಚೆಗೆ ಸಂಪನ್ನಗೊಂಡ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಎಂಟು ಸ್ವಯಂಸೇವಕರ ತಂಡವನ್ನು ಪ್ರತಿನಿಧಿಸಿ ಯಶಸ್ವಿಯಾಗಿ ಭಾಗವಹಿಸಿರುತ್ತಾರೆ. ಇವರಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ ಎಸ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಹರಿಪ್ರಸಾದ್ ಎಸ್, ಶ್ರೀ ಕೇಶವ ಕುಮಾರ ಬಿ, ಉಪನ್ಯಾಸಕ ವೃಂದ, ಉಪನ್ಯಾಸಕೇತರ ವೃಂದ ಮತ್ತು ವಿಧ್ಯಾರ್ಥಿಗಳ ಅಭಿನಂದನೆ ಸಲ್ಲಿಸಿದರು.
ಶಿವಕುಮಾರ್ ಗಂಗಾ ಸ್ನಾನ ಮಾಡಿದ್ದಾರೆ. ಅವರ ಜೊತೆ ನಾವು ಪಾಲ್ಗೊಂಡಿದ್ದೆವು. ಆ ದೇವರ ಆಶೀರ್ವಾದ ಅವರಿಗೆ ಸಿಗಲಿ, ರಾಜ ಪ್ರತ್ಯಕ್ಷ್ಯ ದೇವರಾಗಲಿ ಎಂದು ಹಾರೈಸಿದ್ದಾರೆ.