Published
1 month agoon
By
Akkare Newsಸುಳ್ಯ: ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಎದುರು ಬ್ಯಾಂಕ್ ಆಫ್ ಬರೋಡಾದ ಪಕ್ಕದಲ್ಲಿರುವ ನಂದಿನಿ ಸ್ಟಾಲ್ ಗೆ ಕಂಟೇನರ್ ಗುದ್ದಿ ಕಟ್ಟಡದ ಒಂದು ಭಾಗ ಸಂಪೂರ್ಣ ಹಾನಿಗೊಂಡ ಘಟನೆ ಇಂದು ಮುಂಜಾನೆ 5.30ಕ್ಕೆ ನಡೆದಿದೆ.
ಸುಳ್ಯ ಬಸ್ ನಿಲ್ದಾಣದಲ್ಲಿ ಪ್ರತಿದಿನ ನಿತ್ಯ ಬೆಳಿಗ್ಗೆ ಹತ್ತಾರು ಕಾರ್ಮಿಕರು ಹಾಗೂ ಬೇರೆ ಬೇರೆ ಊರಿಗೆ ತೆರಳಬೇಕಾದ ಪ್ರಯಾಣಿಕರು ಸೇರುವ ಸ್ಥಳವಾಗಿದೆ. ಅಪಘಾತ ನಡೆದ ಸಂದರ್ಭದಲ್ಲಿ ಜನಸಂಖ್ಯೆ ವಿರಳವಾಗಿತ್ತು. ಆದ್ದರಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿದೆ.
ಪಕ್ಕದ ನಂದಿನಿ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದ ರಿಂಗಪ್ಪ ಎಂಬುವರು ಕಂಟೈನರ್ ರಸ್ತೆಯಿಂದ ಪುಟ್ ಪಾತ್ ಗೆ ಹತ್ತುವ ದೃಶ್ಯವನ್ನು ನೋಡುತ್ತ ಬಸ್ ನಿಲ್ದಾಣದ ಕಡೆಗೆ ಓಡಿ ಜೀವವನ್ನು ಉಳಿಸಿಕೊಂಡಿದ್ದಾರೆ. ಕಂಟೈನರ್ ಅಡಿಯಲ್ಲಿ ಸ್ಕೂಟಿಯೊಂದು ಸಿಲುಕಿರುವುದಾಗಿ ತಿಳಿದುಬಂದಿದೆ.