Published
1 month agoon
By
Akkare Newsಬೆಳ್ತಂಗಡಿ: ಕುಕ್ಕಿನಡ್ಡ ಮನೆತನದ ಹಿರಿಯರಾದ, ನಿವೃತ್ತ ಡಿಎಫ್ ಒ, ಬೆಳ್ತಂಗಡಿ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ (87) ಅವರು ವಯೋ ಸಹಜ ಅನಾರೋಗ್ಯದಿಂದ ಮಂಗಳೂರಿನ ಬಲ್ಮಠ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ (ಮಾ.6ರಂದು) ಬೆಳಗ್ಗೆ ವಿಧಿವಶರಾದರು.
ಮಾಣಿಂಜ ಅವರು ಮಾಜಿ ಶಾಸಕ ದಿ.ಕೆ.ವಸಂತ ಬಂಗೇರ ಅವರ ನಿಕಟವರ್ತಿಯಾಗಿದ್ದು, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಬೆಳವಣಿಗೆಯಲ್ಲಿ ಇವರಿಬ್ಬರ ಪಾತ್ರ ಪ್ರಮುಖವಾಗಿತ್ತು. ಜತೆಗೆ ಆರ್ಥಿಕವಾಗಿ ಬಲಿಷ್ಠ ಸಹಕಾರ ಸಂಘವಾಗಿಸುವ ಜತೆಗೆ ಜಿಲ್ಲೆ ಹೊರೆ ಜಿಲ್ಲೆಗಳಲ್ಲೂ ಶಾಖೆಗಳನ್ನು ತೆರೆಯುವ ಮೂಲಕ ಬಿಲ್ಲವ ಸಮುದಾಯದಲ್ಲಿ ಮೇರು ನಾಯಕರಾಗಿ ಬೆಳೆದಿದ್ದರು.
ಪದ್ಮನಾಭ ಮಾಣಿಂಜ ರವರ ಪಾರ್ಥೀವ ಶರೀರ ಅಂತಿಮ ದರ್ಶನ 12 ಗಂಟೆಯ ತನಕ ಬಲ್ಮಠದ ಪದ್ಮ ನಿವಾಸದಲ್ಲಿ ನಡೆಯಲಿದ್ದು, ತದನಂತರ ಪುಂಜಾಲಕಟ್ಟೆ ಮಾಣಿಂಜದ ಸ್ವಗೃಹದಲ್ಲಿ 4 ಗಂಟೆಯ ತನಕ ಅಂತಿಮ ದರ್ಶನ ನಡೆದು ಅಂತಿಮ ವಿಧಿ ವಿಧಾನಗಳು ನೆರವೇರಲಿದೆ.