Published
1 month agoon
By
Akkare Newsಪುತ್ತೂರು :ದೇಯಿ ಬೈದ್ಯೆತಿ, ಕೋಟಿ ಚೆನ್ನಯ ಮೂಲಸ್ಥಾನವಾದ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಕ್ಷೇತ್ರದಲ್ಲಿ ಮಂಗಳವಾರ ರಾತ್ರಿ ದೇಯಿ ಬೈದ್ಯೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ, ಬೈದರ್ಕಳ ನೇಮೋತ್ಸವ ನಡೆಯಿತು. ಬುಧವಾರ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಲ್ಲಿಕಾ ಪಕ್ಕಳ, ಹೇಮನಾಥ ಶೆಟ್ಟಿ ಕಾವು, ಅನಿತಾ ಹೇಮನಾಥ ಶೆಟ್ಟಿ ಕಾವು, ಸೂರ್ಯಕಾಂತ್ ಜೆ. ಸುವರ್ಣ, ಬೂಡಿಯಾರ್ ರಾಧಾಕೃಷ್ಣ ರೈ, ಆರ್.ಸಿ.ನಾರಾಯಣ, ಹರೀಶ್ ಬಿಜತ್ರೆ, ವಿನೋದ್ ಆಳ್ವ ಮೂಡಾಯೂರು, ಮನೋಜ್ ರೈ ಪೇರಾಲು, ತ್ರಿವೇಣಿ ಪಲ್ಲತ್ತಾರು, ಸಂತೋಷ್ ಮಣಿಯಾಣಿ ಕುತ್ಯಾಡಿ, ನಿತೀಶ್‌ಕುಮಾರ್ ಶಾಂತಿವನ, ಸೀತಾರಾಮ ಶೆಟ್ಟಿ ಕೆದಂಬಾಡಿಗುತ್ತು, ಅಜಿತ್ ಹೊಸಮನೆ ಮತ್ತಿತರರು ಕ್ಷೇತ್ರಕ್ಕೆ ಭೇಟಿ ನೀಡಿದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ರಾಜಾರಾಮ್ ಕೆ.ಬಿ, ಪೀತಾಂಬರ ಹೇರಾಜೆ, ಜಯಂತ ನಡುಬೈಲು, ರಾಜಶೇಖರ ಕೋಟ್ಯಾನ್, ಶ್ರೀಧರ ಪೂಜಾರಿ, ಮೋಹನದಾಸ್ ಬಂಗೇರ, ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್ ಗುರುಪುರ, ಜಯವಿಕ್ರಮ್ ಕಲ್ಲಾಪು, ಸಂಜೀವ ಪೂಜಾರಿ ಕೂಚಿಗುಡ್ಡೆ, ಚಂದ್ರಹಾಸ ಅಮೀನ್, ರಾಜೇಂದ್ರ ಚಿಲಿಂಬಿ, ಅಜಿತ್ ಪಾಲೇರಿ, ಸುಧಾಕರ ಪೂಜಾರಿ, ಶಶಿಧರ ಕಿನ್ನಿಮಜಲು,ಗೀತಾ ಪ್ರಕಾಶ್, ನಾರಾಯಣ ಮಚ್ಚಿನ, ಸಂತೋಷ್ ಪಡುಮಲೆ, ಜಯರಾಜ್ ಶೆಟ್ಟಿ ಅಣಿಲೆ ಮತ್ತಿತರರು ಭಾಗವಹಿಸಿದ್ದರು.
ಬುಧವಾರ ಬೆಳಿಗ್ಗೆ ಗಣಹೋಮ, ಕ್ಷೇತ್ರದ ಸಾನ್ನಿಧ್ಯ ಶುದ್ದಿ, ಕಲಶಾಭಿಷೇಕ ನಡೆದ ಬಳಿಕ ಧ್ವಜಾರೋಹಣ ನಡೆಯಿತು. ಗುರುಪೂಜೆಯ ಬಳಿಕ ಪ್ರಸಾದ ವಿತರಣೆಯೊಂದಿಗೆ 5 ದಿನಗಳ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
5ಪಿಟಿಆರ್2 : ಪುತ್ತೂರು ತಾಲ್ಲೂಕಿನ ಗೆಜ್ಜೆಗಿರಿ ಕ್ಷೇತ್ರದಲ್ಲಿ ಮಂಗಳವಾರ ರಾತ್ರಿ ನಡೆದ ದೇಯಿ ಬೈದ್ಯೆತಿ ನೇಮೋತ್ಸವ-ಮಾತೆ ಮಕ್ಕಳ ಪುನೀತ ಸಮಾಗಮದ ನೋಟ. ಪುತ್ತೂರು ತಾಲ್ಲೂಕಿನ ಗೆಜ್ಜೆಗಿರಿ ಕ್ಷೇತ್ರದಲ್ಲಿ ಮಂಗಳವಾರ ರಾತ್ರಿ ನಡೆದ ನೇಮೋತ್ಸವದಲ್ಲಿ ದೇಯಿ ಬೈದ್ಯೆತಿ `ಅಮ್ಮನ ಮಡಿಲ ಪ್ರಸಾದ ಮುಂದುವರಿಸಲು ಅಭಯ
ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.2ರಂದು ಕ್ಷೇತ್ರದ ಮಹಾಮಾತೆ ದೇಯಿ ಬೈದ್ಯೆತಿ ಅಮ್ಮನವರ ಸಂಕಲ್ಪದಂತೆ ನಡೆದ `ಅಮ್ಮನ ಮಡಿಲ ಪ್ರಸಾದ’ ಕಾರ್ಯಕ್ರಮ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಗೆಜ್ಜೆಗಿರಿಯಲ್ಲಿ ಇದೇ ಮೊದಲ ಬಾರಿಗೆ ನಡೆದ ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಮಂಗಳವಾರ ರಾತ್ರಿ ನಡೆದ ದೇಯಿ ಬೈದ್ಯೆತಿ ನೇಮೋತ್ಸವದಲ್ಲಿ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವಂತೆ ಕ್ಷೇತ್ರಾಡಳಿತ ಸಮಿತಿಯ ಪದಾಧಿಕಾರಿಗಳಿಗೆ ಅಭಯದ ನುಡಿ ನೀಡಿ ದೇಯಿ ಬೈದ್ಯೆತಿಯೇ ಸ್ವತಃ ಮಾತೆಯರಿಗೆ ಪ್ರಸಾದ ನೀಡಿದ ಅಪೂರ್ವ ಸನ್ನಿವೇಶ ನಡೆಯಿತು.