Published
4 weeks agoon
By
Akkare Newsದುಬಾೖ: ರವಿವಾರ ಭಾರತ- ನ್ಯೂಜಿಲ್ಯಾಂಡ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ನ್ಯೂಜಿಲ್ಯಾಂಡ್ ಸೇರಿದಂತೆ ಇದುವರೆ ಗಿನ ಅಷ್ಟೂ ಪಂದ್ಯಗಳನ್ನು ಭಾರತ ಆರಾಮವಾಗಿಯೇ ಗೆದ್ದಿದ್ದರೂ, ಅಂತಿಮ ಪಂದ್ಯ ಸುಲಭವಾಗಿರುತ್ತದೆ ಎನ್ನಲು ಸಾಧ್ಯವಿಲ್ಲ. ಇದಕ್ಕೆ 3 ಪ್ರಮುಖ ಕಾರಣಗಳಿವೆ.
ಕಿವೀಸ್ ತಂಡದಲ್ಲಿ ಭಾರತದಷ್ಟೇ ನಿಪುಣ ಸ್ಪಿನ್ನರ್‌ಗಳಿದ್ದಾರೆ. ಮಿಚೆಲ್ ಸ್ಯಾಂಟ್ನರ್, ಮೈಕೆಲ್ ಬ್ರೇಸ್‌ವೆಲ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್ ಅಪಾಯಕಾರಿಗಳು. ಆ ತಂಡದ ಮೂವರು ವೇಗಿಗಳು ಎಂತಹ ನಿರ್ಜೀವ ಪಿಚ್‌ನಲ್ಲೂ ಚೆಂಡನ್ನು ಉತ್ತಮವಾಗಿ ಸ್ವಿಂಗ್ ಮಾಡಬಲ್ಲರು. ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ ಎತ್ತರವೇ ಇದಕ್ಕೆ ಕಾರಣ.
ಭಾರತ ಹೇಗೆ ಅತ್ಯುತ್ತಮ ಬ್ಯಾಟರ್‌ಗಳಿಂದ ತುಂಬಿ ತುಳುಕುತ್ತಿದೆಯೋ, ಕಿವೀಸ್ ತಂಡದಲ್ಲೂ ವಿಲಿಯಮ್ಸನ್, ವಿಲ್ ಯಂಗ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಡೆರಿಲ್ ಮಿಚೆಲ್‌ರಂತಹ ದೊಡ್ಡ ಇನ್ನಿಂಗ್ಸ್ ಕಟ್ಟಬಲ್ಲ ತಾರೆಯರಿದ್ದಾರೆ. ಹೀಗಾಗಿ ಇದು ಪಂದ್ಯವನ್ನು ರೋಮಾಂಚಕಗೊಳಿಸುವುದು ಖಚಿತ.
ರೈಫೆಲ್, ಇಲ್ಲಿಂಗ್‌ವರ್ತ್ ಅಂಪಾಯರ್
ದುಬಾೖ: ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ರವಿವಾರ ನಡೆಯಲಿರುವ ಚಾಂಪಿ ಯನ್ಸ್ ಟ್ರೋಫಿ ಕ್ರಿಕೆಟ್ ಕೂಟದ ಫೈನಲ್ ಹೋರಾಟಕ್ಕೆ ಮ್ಯಾಚ್ ರೆಫರಿ ಮತ್ತು ಅಂಪಾಯರ್‌ಗಳ ನೇಮಕ ಮಾಡಲಾಗಿದೆ.
ಆಸ್ಟ್ರೇಲಿಯದ ಪಾಲ್ ರೈಫೆಲ್ ಮತ್ತು ಇಂಗ್ಲೆಂಡಿನ ರಿಚರ್ಡ್ ಇಲ್ಲಿಂಗ್‌ವರ್ತ್ ಮೈದಾನದ ಅಂಪಾಯರ್ ಮತ್ತು ಶ್ರಿಲಂಕಾದ ರಂಜನ್ ಮದುಗಲ್ಲೆ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಆಗಿರುವ 58ರ ಹರೆಯದ ರೈಫಲ್ ಅವರು ಲಾಹೋರ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ- ನ್ಯೂಜಿಲ್ಯಾಂಡ್ ನಡುವಣ ಸೆಮಿಫೈನಲ್ ಹೋರಾಟದ ವೇಳೆ ಮೈದಾನದಲ್ಲಿ ಅಂಪಾಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 61ರ ಹರೆಯದ ಇಲ್ಲಿಂಗ್‌ವರ್ತ್ ಅವರು ಭಾರತ ಮತ್ತು ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ನಲ್ಲಿ ಅಂಪಾಯರ್ ಆಗಿ ಸೇವೆ ಸಲ್ಲಿಸಿದ್ದರು.