Published
1 month agoon
By
Akkare Newsಬಡಗನ್ನೂರು : ಶ್ರೀ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರವನ್ನು ಪ್ರವಾಸೋದ್ಯಮಕ್ಕೆ ಸೇರಿಸಿ ಅಭಿವೃದ್ಧಿಪಡಿಸುವ ಬಗ್ಗೆ ವಿಧಾನ ಸಭೆಯಲ್ಲಿ ಧ್ವನಿಯೆತ್ತಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಗೆಜ್ಜೆಗಿರಿ ಕ್ಷೇತ್ರಾಢಳಿತ ಸಮಿತಿಯಿಂದ ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ್. ಕೆ. ಬಿ ನೇತೃತ್ವದಲ್ಲಿ ಬೆಂಗಳೂರಲ್ಲಿ ಕೃತಜ್ಞತೆ ಸಲ್ಲಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರಾಢಳಿತ ಸಮಿತಿ ಜೊತೆ ಕಾರ್ಯದರ್ಶಿ ಜಯ ವಿಕ್ರಮ್ ಕಲ್ಲಾಪು, ಪ್ರಮುಖರಾದ ಜಯಪ್ರಕಾಶ್ ಬದಿನಾರು, ವಿಶಾಲಾಕ್ಷಿ ಬನ್ನೂರು, ಚಂದ್ರಕಲಾ ಮುಕ್ವೆ, ಹೊನ್ನಪ್ಪ ಪೂಜಾರಿ ಕೈಂದಾಡಿ, ವಿಶ್ವಜಿತ್ ಅಮ್ಮುಂಜೆ, ವಿನಯ ಸುವರ್ಣ, ಅಡ್ವಕೇಟ್ ಉಲ್ಲಾಸ್ ಪುಣಚ, ಅಶೋಕ್ ಪೂಜಾರಿ ಒಳಮೊಗ್ರು, ಜಯಂತ ಕೆಂಗುಡೇಲು ಹಾಗೂ ಮುಖಂಡರಾದ ಹೇಮನಾಥ ಶೆಟ್ಟಿ, ಮುರಳೀಧರ ರೈ, ಈಶ್ವರ ಭಟ್ ಪಂಜಿಗುಡ್ಡೆ, ಉಮಾನಾಥ ಶೆಟ್ಟಿ, ಸಂತೋಷ್ ಚಿಲ್ಕೆತ್ತಾರು,ರಮಾನಾಥ ವಿಟ್ಲ, ಮತ್ತಿತರರು ಉಪಸ್ಥಿತರಿದ್ದರು.