Connect with us

ಇತರ

ದಿಗಂತ್ ನಾಪತ್ತೆ ಪ್ರಕರಣ ಚುರುಕುಗೊಂಡ ಕಾರ್ಯಾಚರಣೆ

Published

on

ಬಂಟ್ವಾಳ: ನಿಗೂಢ ರೀತಿಯಲ್ಲಿ ನಾಪತ್ತೆಯಾದ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಇಂದು (ಮಾ.8 ಶನಿವಾರ) ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ‌ಎನ್.ನೇತೃತ್ವದ  ಜಿಲ್ಲಾ ಪೊಲೀಸ್ ತಂಡ ನಾಪತ್ತೆ ಘಟನೆ ನಡೆದ ಸ್ಥಳದ ಸುತ್ತಲಿನ ಸ್ಥಳಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಕೂಂಬಿಂಗ್ ಕಾರ್ಯ ಆರಂಭವಾಗಿದೆ.


ಫೆ. 25 ರಂದು ಸಂಜೆ ಫರಂಗಿಪೇಟೆ ರೈಲ್ವೆ ಹಳಿಯಲ್ಲಿ ರಕ್ತದ ಕಲೆಯ ಚಪ್ಪಲಿ ಹಾಗೂ ಮೊಬೈಲ್ ಫೋನ್ ಸ್ಥಳದಲ್ಲಿ ಪತ್ತೆಯಾಗಿದ್ದು, ಅಪ್ರಾಪ್ತ ಬಾಲಕ ದಿಗಂತ್ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ.

ಅ ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಕಳೆದ 12 ದಿನಗಳಿಂದ ದಿಗಂತ್ ನ ಪತ್ತೆಗಾಗಿ ಪೊಲೀಸರ ತಂಡ ವಿವಿಧ ರೀತಿಯ ಕಾರ್ಯಚರಣೆಗಳನ್ನು ನಡೆಸಿತ್ತು. ಆದರೆ ಹರಸಾಹಸ ಪಟ್ಟರೂ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ ಈ ಪ್ರಕರಣ ಇನ್ನೂ ಕೂಡ ಪತ್ತೆ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಹಾಗಾಗಿ ವಿವಿಧ ಆಯಾಮಗಳಲ್ಲಿ 40ಕ್ಕೂ ಅಧಿಕ ಪೊಲೀಸರ ತಂಡ ಕೆಲಸ ಮಾಡಿದೆಯಾದರೂ ದಿಗಂತ್ ಪತ್ತೆಯಾಗದ ಹಿನ್ನೆಲೆ ಇಂದು ಎಸ್.ಪಿ. ಹುಡುಕಾಟದ ಕಾರ್ಯ ಆರಂಭಿಸಿದೆ.

 

 

ವಿಶೇಷ ತಂಡ ಕಾರ್ಯಚರಣೆ

ಬಂಟ್ವಾಳ ಸಬ್ ಡಿವಿಜನ್ ನ ಸುಮಾರು 9 ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಗಳು ಎಸ್.ಐ.ಗಳು ಹಾಗೂ ಸುಮಾರು 100ಕ್ಕೂ ಅಧಿಕ ಪೊಲೀಸರ ತಂಡ ಬೆಳಿಗ್ಗೆನಿಂದಲೇ ಕೂಂಬಿಂಗ್ ಕಾರ್ಯದಲ್ಲಿ ತೊಡಗಿಕೊಂಡಿದೆ.

ಡಿ‌ಎಆರ್ ತಂಡದ 30 ಪೊಲೀಸರು, ರೈಲ್ವೆ ಪೊಲೀಸ್, ಅಗ್ನಿಶಾಮಕ ದಳ,  ಎಫ್.ಎಸ್.ಎಲ್. ತಂಡ, ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮರಾಗಳನ್ನು ದಿಗಂತ್ ನಾಪತ್ತೆಯಾಗಿದ್ದ ಘಟನಾ ಸ್ಥಳದ ಸುತ್ತಮುತ್ತಲಿನ ಸುಮಾರು 5 ಕಿ.ಮೀ.ನ ಭಾಗದಲ್ಲಿ ಹುಡುಕಾಟ ಮಾಡಲು ಯೋಜನೆ ತಯಾರಿಸಿ ಕಾರ್ಯ ಆರಂಭಿಸಿದೆ. ನೇತ್ರಾವತಿ ನದಿ ಭಾಗದ ಸುತ್ತಲಿನ ಭಾಗದಲ್ಲಿ ದೋಣಿ ಬಳಸಿಕೊಂಡು ‌ನದಿಯಲ್ಲಿ ಕೂಡ ಹುಡುಕಲಾಗುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಅಡಿಶನಲ್ ಎಸ್.ಪಿ.ರಾಜೇಂದ್ರ, ಡಿ.ವೈ.ಎಸ್.ಪಿ. ವಿಜಯಪ್ರಸಾದ್, ಇನ್ಸ್ ಪೆಕ್ಟರ್ ಗಳಾದ ಶಿವಕುಮಾರ್, ಅನಂತಪದ್ಮನಾಭ, ನಾಗಾರಾಜ್ ಎಚ್, ಎಸ್‌ಐ.ಗಳಾದ ನಂದಕುಮಾರ್, ಪ್ರಸನ್ನ, ಅವಿನಾಶ್, ಹರೀಶ್, ಉದಯರವಿ, ರಾಮಕೃಷ್ಣ, ಕಿಶೋರ್, ಸಮರ್ಥ್, ಅರ್ಜುನ್, ಮುರಳೀಧರ, ಆನಂದ ಮತ್ತು ಕೌಶಿಕ್ ಸಹಿತ ಅನೇಕ ಎಸ್. ಐ.ಗಳು 10 ತಂಡ ಕಾರ್ಯ ಮಾಡುತ್ತಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement