Published
4 weeks agoon
By
Akkare Newsಬಿಜೆಪಿ ಪರ ಕೆಲಸ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಪರ ಕೆಲಸ ಮಾಡುತ್ತಿರುವ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಪಕ್ಷದಿಂದ ಹೊರಗಿಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಲ್ಲಿರುವ ಎರಡು ಗುಂಪುಗಳನ್ನು ಬೇರ್ಪಡಿಸುವುದು ಪಕ್ಷದ ಮೊದಲ ಕೆಲಸ ಎಂದಿದ್ದಾರೆ..
ಕಾಂಗ್ರೆಸ್ ನ ಸಿದ್ದಾಂತವನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡು, ಸದಾ ಸಾರ್ವಜನಿಕರೊಂದಿಗೆ ನಿಲ್ಲುವವರು ಒಂದು ಗುಂಪಿನಲ್ಲಿದ್ದಾರೆ. ಸಾರ್ವಜನಿಕರಿಂದ ಸಂಪರ್ಕ ಕಡಿದುಕೊಂಡ ಮತ್ತೊಂದು ಗುಂಪು ಬಿಜೆಪಿ ಜೊತೆಗಿದ್ದಾರೆ ಎಂದು ಹೇಳಿದರು. ಕಠಿಣ ಕ್ರಮ ಕೈಗೊಂಡರೂ ಸಹ ಅಂತಹ ನಾಯಕರನ್ನು ಪಕ್ಷದಿಂದ ಹೊರಗಿಡುವುದು ಮತ್ತು ಗುಂಪುಗಳನ್ನು ಬೇರ್ಪಡಿಸುವುದು ಪಕ್ಷದ ಮೊದಲ ಕೆಲಸವಾಗಬೇಕು. ಈ ಗುಂಪುಗಳು ಬೇರೆ ಬೇರೆಯಾಗುವವರೆಗೂ ಜನರು ಪಕ್ಷವನ್ನು ನಂಬುವುದಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.
ಗುಜರಾತ್ ಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ಅಲ್ಲಿನ ಪಕ್ಷದ ರಾಜ್ಯ ಘಟಕದಲ್ಲಿ ಪ್ರಮುಖ ಬದಲಾವಣೆ ತರುವ ಸುಳಿವು ನೀಡಿದ್ದಾರೆ. ಇದು ದೇಶದೆಲ್ಲಡೆ ಜಾರಿಯಾಗಬೇಕು. ಅಂತಹ ನಾಯಕರನ್ನು ಪಕ್ಷದಿಂದಲೇ ಹೊರಗಿಟ್ಟರೆ ಕಾಂಗ್ರೆಸಿನಲ್ಲಿ ಬದಲಾವಣೆ ಖಂಡಿತಾ ಸಾದ್ಯ. ಈ ಕೆಲಸ ದಕ್ಷಿಣಕನ್ನಡ ಜಿಲ್ಲೆಯಿಂದಲೇ ಪ್ರಾರಂಭವಾಗಬೇಕು. ಹೀಗೆ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಂಗೆಸ್ ಗೆ ಖಂಡಿತಾ ಭವಿಷ್ಯವಿದೆ.