Published
4 weeks agoon
By
Akkare Newsಪುತ್ತೂರು: ಯುವ ಜನರು ಕಾಲೇಜು ಹಂತದಲ್ಲೇ ಸರಕಾರಿ ಮತ್ತು ಖಾಸಗಿ ಉದ್ಯೋಗಕ್ಕೆ ತಯಾರಿ ನಡೆಸಿ,ಇದಕ್ಕೆ ಸರಿಯಾಗಿ ಉದ್ಯೋಗಾಧಾರಿತ ಕೌಶಲ್ಯ ಬೆಳೆಸಿಕೊಳ್ಳಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ತರಬೇತುದಾರರಾದ ಶ್ರೀಕಾಂತ್ ಪೂಜಾರಿ ಬಿರಾವು ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ,ಐಕ್ಯೂಎಸಿ ಘಟಕ ,ಉದ್ಯೋಗ ಭರವಸಾ ಕೋಶ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಇದರ ಸಹಯೋಗದೊಂದಿಗೆ ನಡೆದ ಉದ್ಯೋಗಾಧಾರಿತ ಕೌಶಲ್ಯ ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಉದ್ಯೋಗ ಪಡೆದುಕೊಳ್ಳುವುದು ಒಂದು ಕೌಶಲ್ಯ, ಕಾಲೇಜು ಹಂತದಲ್ಲೇ ಸರಕಾರಿ ಉದ್ಯೋಗಕ್ಕೆ ತಯಾರಿ ನಡೆಸಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೇರ್ಗಡೆ ಹೊಂದಿ ಉನ್ನತ ಹುದ್ದೆ ಪಡೆಯುವಂತಾಗಬೇಕು ಮತ್ತು ಹಲವಾರು ಕಂಪೆನಿಗಳ ಉದ್ಯೋಗ ಪಡೆಯಲು ಸಂದರ್ಶನ ಕೌಶಲ್ಯ ರೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ ರವಿರಾಜ್ ಎಸ್ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳಲ್ಲಿ ಉತ್ತಮ ಕೌಶಲ್ಯ ಇರುತ್ತದೆ ಉದ್ಯೋಗಕ್ಕೆ ತಮ್ಮಲ್ಲಿರುವ ಕೌಶಲ್ಯವನ್ನು ಹೊರಹಾಕಿದಾಗ ಸುಲಭವಾಗಿ ಉದ್ಯೋಗ ಪಡೆಯಬಹುದು ಕಾಲೇಜು ಶಿಕ್ಷಣದ ಸಮಯದಲ್ಲಿ ಒಂದಿಷ್ಟು ಸಮಯವನ್ನು ತಮ್ಮ ಉದ್ಯೋಗದ ಸಿದ್ದತೆಗೆ ಮೀಸಲಿಡಿ ಎಂದರು.ಕಾರ್ಯಕ್ರಮದಲ್ಲಿ ಉದ್ಯೋಗ ಭರವಸಾ ಕೋಶದ ಸಂಯೋಜಕರಾದ ಪ್ರೋ. ತೇಜಸ್ವಿ ,ಯುವ ಸಮಾಲೋಚಕರಾದ ಶರಣ್ಯ ಮತ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಉಪಸ್ಥಿತರಿದ್ದರು.