Published
4 weeks agoon
By
Akkare Newsದುಬಾೖ: ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ – ಕಿವೀಸ್ ನಡುವೆ ಹೈವೋಲ್ಟೇಜ್ ಫೈನಲ್ ಕ್ರಿಕೆಟ್ ಕದನ ನಡೆಯಲಿದೆ. ದುಬಾೖ ಮೈದಾನದಲ್ಲಿ ಸಾವಿರಾರು ಮಂದಿ ಕ್ರೀಡಾ ಪ್ರೇಮಿಗಳ ಎದುರು ಎರಡು ಬಲಿಷ್ಠ ತಂಡಗಳು ಸೆಣೆಸಾಟ ನಡೆಸಲಿವೆ.
ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಗಾಯಾಳು ಮ್ಯಾಟ್ ಹೆನ್ರಿ ಬದಲಿಗೆ ನಥನ್ ಸ್ಮಿತ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಭಾರತದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.
ಭಾರತ ಈ ಪಂದ್ಯಾವಳಿಯ ಅಜೇಯ ತಂಡ. ದುಬಾೖ ಅಂಗಳದಲ್ಲಿ ಈವರೆಗೆ ಏಕದಿನದಲ್ಲಿ ಸೋಲನ್ನೇ ಕಂಡಿಲ್ಲ. ಕಳೆದ ಸಲದ ರನ್ನರ್ ಅಪ್ ಕೂಡ ಹೌದು. 2013ರಲ್ಲಿ ಧೋನಿ ಸಾರಥ್ಯದಲ್ಲಿ ಗೆದ್ದ ಬಳಿಕ ಭಾರತ ಚಾಂಪಿಯನ್ಸ್ ಟ್ರೋಫಿ ಮೇಲೆ ಹಕ್ಕು ಸಾಧಿಸಿಲ್ಲ. ಈ ಬಾರಿ ರೋಹಿತ್ & ಟೀಮ್ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಸರ್ವ ಸಿದ್ಧತೆ ನಡೆಸಿಕೊಂಡು ಕಣಕ್ಕೆ ಇಳಿದಿದೆ.
ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಭಾರತವೇ ಫೇವರಿಟ್: ಇಂಡೋ – ಕಿವೀಸ್ ನಡುವಿನ ಫೈನಲ್ ಹೋರಾಟ – ಪ್ರತಿ ಹೋರಾಟದ ಪಂದ್ಯವಾಗಿ ಸಾಗುವ ನಿರೀಕ್ಷೆಯಿದೆ. ತಂಡಗಳ ವಿಚಾರಕ್ಕೆ ಬಂದರೆ ಆರಂಭದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ಕಮಾಲ್ ಮಾಡಬೇಕಿದೆ.
ಇನ್ನುಳಿದಂತೆ ಶುಭಮನ್ ಗಿಲ್ ಮತ್ತೆ ಬ್ಯಾಟಿಂಗ್ ಲಯ ಕಂಡುಕೊಳ್ಳಬೇಕಿದೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಬ್ಯಾಟ್ ಬೀಸುತ್ತಿರುವುದು ತಂಡಕ್ಕೆ ಪ್ಲಸ್ ಆಗಿದೆ.
ಬೌಲಿಂಗ್ ವಿಭಾಗದಲ್ಲಿ ಭಾರತದ ಪ್ರಮುಖ ಅಸ್ತ್ರವೇ ಸ್ಪಿನ್ನ್ ಆಗಿದೆ. ವರುಣ್ ಚಕ್ರವರ್ತಿ ಸ್ಪಿನ್ ಮರ್ಮವನ್ನು ಅರಿತುಕೊಂಡು ಕಿವೀಸ್ ಬ್ಯಾಟರ್‌ಗಳ ಸಂಘಟಿತ ಹೋರಾಟ ನಡೆಸುವುದು ಅಷ್ಟು ಸುಲಭವಲ್ಲ. ವರುಣ್ ಜತೆ ಅಕ್ಷರ್ ಪಟೇಲ್, ರವೀಂದ್ರ ಜಡೇಜ, ಕುಲದೀಪ್ ಯಾದವ್ ಸಾಥ್ ನೀಡಿದರೆ ಫೈನಲ್‌ನಲ್ಲಿ ಭಾರತ ಮಿಂಚುವ ಸಾಧ್ಯತೆ ಹೆಚ್ಚಿದೆ.
ಅಪಾಯಕಾರಿ ಕಿವೀಸ್ ಮಿಡಲ್ ಆರ್ಡರ್..
ಕಿವೀಸ್ ಬ್ಯಾಟಿಂಗ್ ವಿಚಾರಕ್ಕೆ ಬಂದರೆ ವಿಲ್ ಯಂಗ್ ಫಾರ್ಮ್ ನಲ್ಲಿದ್ದಾರೆ. ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ ಕ್ರಿಸ್ ನಲ್ಲಿ ಹೆಚ್ಚು ಹೊತ್ತು ನಿಂತರೆ ದೊಡ್ಡ ಮೊತ್ತವನ್ನು ಪೇರಿಸುವುದು ಪಕ್ಕಾ. ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಂ, ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್‌ನಲ್ಲಿ ಸಾಥ್ ನೀಡಿದರೆ ಏನಾಗುತ್ತದೆ ಎನ್ನುವುದು ಈಗಾಗಲೇ ಹಿಂದಿನ ಪಂದ್ಯಗಳಲ್ಲಿ ಸಾಬೀತಾಗಿದೆ.
ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ ಸ್ಪಿನ್ನಿಂಗ್ ವಿಭಾಗದಲ್ಲಿದ್ರೆ, ಗ್ಲೆನ್ ಫಿಲಿಪ್ಸ್ ಪಾರ್ಟ್ ಟೈಮ್ ಆಗಿ ಬೌಲಿಂಗ್ ಮಾಡಲಿದ್ದಾರೆ. ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ವಿಲ್ ಓ’ರೂರ್ಕ್ ವೇಗಿಗಳಾಗಿ ಕಣಕ್ಕೆ ಇಳಿಯಲಿದ್ದಾರೆ.
ತಂಡಗಳು:
ಭಾರತ: ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ನ್ಯೂಜಿಲ್ಯಾಂಡ್: ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಂ, ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ನಥನ್ ಸ್ಮಿತ್, ವಿಲ್ ಓ’ರೂರ್ಕ್.