Published
4 weeks agoon
By
Akkare Newsವಿಟ್ಲ : ಇತ್ತೀಚೆಗೆ ಭಾರಿ ಸದ್ದು ಮಾಡಿದ ಮಾಡತ್ತಡ್ಕ ಕಲ್ಲಿನ ಕೋರೆ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಯವರು ಭೇಟಿ ನೀಡಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿ ನಂತರ ಹಾನಿಗೊಂಡ ಮನೆಗಳಿಗೆ ಭೇಟಿ ನೀಡಿದ್ದಾರೆ.ಬಳಿಕ ಮಾತನಾಡಿದ ಅವರು ‘ಈ ಘಟನೆಯಲ್ಲಿ ಆಸುಪಾಸಿನ ಹಲವು ಮನೆಗಳಿಗೆ ಹಾನಿಯಾಗಿದೆ. ಎಲ್ಲಾ ಮನೆಗಳಿಗೆ ಎಷ್ಟೆಷ್ಟು ಹಾನಿಯಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಕೋರೆ ಮಾಲೀಕರು ಕಾನೂನಾತ್ಮಕವಾಗಿ ಮಾಡಿದರೆ ಅದಕ್ಕೆ ಯಾವುದೇ ಅಭ್ಯಂತರ ಇಲ್ಲ, ಆದರೆ ಈ ರೀತಿಯ ಬೇಜವಾಬ್ದಾರಿ ಕೆಲಸವನ್ನು ಮಾಡಿದರೆ ಅದಕ್ಕೆ ಬೇಕಾದಂತಹ ಎಲ್ಲಾ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಮಾಡಿದ್ದೇವೆ. ಈ ಘಟನೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಒದಗಿಸುವ ಬಗ್ಗೆ ಹಾಗೂ ಈ ಪ್ರದೇಶದ ಜನರ ಸಮಸ್ಯೆಗಳ ಬಗ್ಗೆ ಕಂದಾಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ. ಇನ್ನೂ ಕ್ವಾರಿ ಮಾಲೀಕರು ಈ ಬಗ್ಗೆ ಪರಿಹಾರ ಕ್ರಮ ಮತ್ತು ಸೂಕ್ತ ಗಮನ ಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಜನರಿಗೆ ಇದರಿಂದ ತೊಂದರೆ ಉಂಟಾದರೆ ಕ್ವಾರಿ ಬಂದ್ ಮಾಡಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಅಳಿಕೆ, ,ಸುಮಿತ್ ಶೆಟ್ಟಿ, ಸುಶಾಂತ್ ಶೆಟ್ಟಿ, ರಾಮಣ್ಣ ಪಿಲಿಂಜ, ಎಲ್ಯಣ್ಣ ಪೂಜಾರಿ , ಸಾಮಾಜಿಕ ಹೋರಾಟಗಾರ ಜನಾರ್ದನ ಪೂಜಾರಿ ಉಪಸ್ಥಿತರಿದ್ದರು.