Published
4 weeks agoon
By
Akkare Newsಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದ ಸಿಲಿಕಾನ್ ಸಿಟಿ ಮಂದಿಗೆ ವರುಣ ಬಂದು ತಂಪೆರೆದಿದ್ದಾನೆ. ಇಂದು ನಗರದ ಹಲವೆಡೆ ದಿಢೀರ್ ಮಳೆಯಾಗಿದ್ದು, ಜನ ಝಳ ಝಳ ಬಿಸಿಲಿನಿಂದ ಚುಮು ಚುಮು ಚಳಿಯ ಆನಂದವನ್ನು ಅನುಭವಿಸುತ್ತಿದ್ದಾರೆ.
ನಗರದಲ್ಲಿ ಕೆ.ಆರ್.ಮಾರ್ಕೆಟ್, ಕತ್ರಿಗುಪ್ಪೆ, ಜನತಾ ಬಜಾರ್, ಕಾರ್ಪೋರೇಷನ್, ರಿಚ್ಮಂಡ್ ಸರ್ಕಲ್, ಮೆಜೆಸ್ಟಿಕ್ ಸೇರಿ ಹಲವು ಕಡೆ ಮಳೆಯಾಗಿದೆ.