Published
4 weeks agoon
By
Akkare Newsನಾವು ನಡೆಯುವ ದಾರಿ ಎಷ್ಟೇ ಕಷ್ಟವಾಗಿದ್ದರೂ ನಾವು ತಲುಪುವ ಸ್ಥಳ ಸುಂದರವಾಗಿರಬೇಕು. ಆಸಕ್ತಿ ಇರುವ ವಿಷಯದಲ್ಲಿ ಹೆಚ್ಚು ಗುರಿ ಇಡಬೇಕು ಹಾಗೂ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಯಾರಿ ನಡೆಸಿ ಯಶಸ್ಸು ಕಂಡುಕೊಳ್ಳಬೇಕು ಎಂದು ಉಪ್ಪಿನಂಗಡಿ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಸೀಮಾ ಕುಲಾಲ್ ಹೇಳಿದರು.
ಇವರು ಇತ್ತೀಚೆಗೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದ ನಾಲ್ಕನೇ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ಆಧುನಿಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ” ಎಂಬ ವಿಷಯದ ಕುರಿತು ಮಾತನಾಡಿದರು. ಮೊದಲು ವಿವಿಧ ಭಾಷಾ ಸಂವಹನ ಕೌಶಲ್ಯ ಕಲಿತು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಆರಿಸಿ ಅದನ್ನು ಅಧ್ಯಯನ ಮಾಡಿ ವೆಬ್ಸೈಟ್ ಗಳಲ್ಲಿ ಅದರ ಮಾಹಿತಿಗಳನ್ನು ಪಡೆದು ಪರೀಕ್ಷೆಗಳನ್ನು ಬರೆದು ಗುರಿಯನ್ನು ಸಾಧಿಸಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ್ ಎಸ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ವಯಂಸೇವಕಿಯರಾದ ಸಂಗೀತಾ, ಪ್ರಿಯಲತಾ ಪ್ರಾರ್ಥನೆ ಹಾಡಿದರು. ರಕ್ಷಾ ಸ್ವಾಗತಿಸಿದರು, ವಿಂದ್ಯಾ ವ್ಯಕ್ತಿ ಪರಿಚಯ ಮಾಡಿದರು, ದಿಶಾ ಎಂ.ಎಸ್ ವಂದಿಸಿದರು ಹಾಗೂ ತ್ರಿಶಾ ಕಾರ್ಯಕ್ರಮ ನಿರ್ವಹಿಸಿದರು.