Connect with us

ಸ್ಥಳೀಯ

ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಬ್ರಹ್ಮರಥೋತ್ಸವದ ಪ್ರಥಮ ಸೇವೆ ರಶೀದಿಗೆ ಚಾಲನೆ

Published

on

 

ಪುತ್ತೂರು: ಎ.10 ರಿಂದ ಎ.20ರ ತನಕ ವಿಜೃಂಭಣೆಯಿಂದ ನಡೆಯುವ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಗೆ ಸಂಬಂಧಿಸಿ ಆಮಂತ್ರಣ ಪತ್ರವನ್ನು ಮಾ.12ರಂದು ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಬಿಡುಗಡೆಗೊಳಿಸಲಾಯಿತು.

ವರ್ಷಾವಧಿ ಜಾತ್ರೆಗೆ ಸಂಬಂಧಿಸಿ ಎ.1ರಂದು ನಡೆಯುವ ಗೊನೆ ಮುಹೂರ್ತದಿಂದ ಹಿಡಿದು ಜಾತ್ರೆ ಸಂಪನ್ನಗೊಳ್ಳುವಲ್ಲಿ ಶ್ರೀ ದೇವರು ಯಶಸ್ವಿಯಾಗಿ ನಡೆಸಿಕೊಡುವಂತೆ ಮತ್ತು ಜಾತ್ರೆಯ ಸಂದರ್ಭ ಅನ್ನದಾನ ಅಕ್ಷಯವಾಗಿ ಬೆಳಗುವಂತೆ ಹಾಗು ಅಭಿವೃದ್ಧಿ ಕಾರ್ಯಗಳಿಗೆ ಶ್ರೀ ದೇವರ ಪೂರ್ಣಾನುಗ್ರಹ ಸಿಗುವಂತೆ ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಜಾತ್ರೆಯ ಆಮಂತ್ರಣ ಪತ್ರವನ್ನು ಶ್ರೀ ದೇವರ ಗರ್ಭಗುಡಿಯಲ್ಲಿಟ್ಟು ಪ್ರಾರ್ಥಿಸಿ ದೇವಳದ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸಿದರು

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ, ಈಶ್ವರ ಬೇಡೆಕರ್, ದೇವಳದ ಪ್ರಧಾನ ಅರ್ಚಕರೂ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ ಮೂ ವಸಂತ ಕೆದಿಲಾಯ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್‌, ಕಚೇರಿ ವ್ಯವಸ್ಥಾಪಕ ಹರೀಶ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

ಬ್ರಹ್ಮರಥೋತ್ಸವದ ಪ್ರಥಮ ಸೇವಾ ರಶೀದಿಗೆ ಚಾಲನೆ:

ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವರಿಗೆ ವಿವಿಧ ಪ್ರಮುಖ ಸೇವೆಗಳನ್ನು ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಎ.17ರಂದು ಬ್ರಹ್ಮರಥೋತ್ಸವ ಸೇವೆಗೆ ರೂ. 25ಸಾವಿರ, ಎ.16ಕ್ಕೆ ಸಣ್ಣರಥೋತ್ಸವ ಸೇವೆಗೆ ರೂ. 15ಸಾವಿರ, ಎ.16ಕ್ಕೆ ವಿಶೇಷ ಪಾಲಕಿ ಸೇವೆಗೆ ರೂ. 15ಸಾವಿರ, ಗರ್ಭಗುಡಿ ಪುಷ್ಪಾಲಂಕಾರ ಸೇವೆಗೆ ರೂ.10ಸಾವಿರ, ಗುಡಿಗಳಿಗೆ ಪುಷ್ಪಾಲಂಕಾರ ಸೇವೆಗೆ ರೂ.5ಸಾವಿರ, ಲಡ್ಡು ಪ್ರಸಾದ ರೂ. 50 ಮತ್ತು ಅನ್ನದಾನ ಸೇವೆ, ಶಾಶ್ವತ ಸೇವೆಗೆ ಅವಕಾಶ ನೀಡಾಗಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಬ್ರಹ್ಮರಥೋತ್ಸವದ ಸೇವೆಗೆ ಪ್ರಥಮ ರಶೀದಿಯನ್ನು ಪಡೆದು ಚಾಲನೆ ನೀಡಿದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement