Connect with us

ಇತ್ತೀಚಿನ ಸುದ್ದಿಗಳು

ಲಿಟ್ಲ್ ಫ್ಲವರ್ ಶಾಲೆಯಲ್ಲಿ ಮೇಳೈಸಿದ ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ವಾರ್ಷಿಕ ಮೇಳ

Published

on

ಶತಮಾನದ ಹೊಸ್ತಿಲಲ್ಲಿರುವ ಲಿಟ್ಲ್ ಫ್ಲವರ್ ಹಿ ಪ್ರಾ ಶಾಲೆ ದರ್ಬೆ ಪುತ್ತೂರು ಇಲ್ಲಿ ಶಾಲಾ ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ವಾರ್ಷಿಕ ಮೇಳವು ಎರಡು ದಿನ ಅದ್ದೂರಿಯಾಗಿ ನೆರವೇರಿತು.
ಮೊದಲ ದಿನ 9.00 ಗಂಟೆಗೆ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ. ಎಸ್ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೇರವೇರಿತು. ಶಾಲಾ ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ದಳದಿಂದ 350 ಮಕ್ಕಳು ಭಾಗವಹಿಸಿದರು. ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀ ಕಿಶೋರ್ ಕುಮಾರ್ ಬೊಟ್ಯಾಡಿ. ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿ “ ವಿದ್ಯಾರ್ಥಿಗಳಲ್ಲಿ ಎಳವೆಯಲ್ಲಿಯೇ ಶಿಸ್ತು , ಸಂಯಮ , ಸಹಕಾರದ ಜೀವನ, ಸಹೋದರತೆಯ ಭಾವನೆ ಹೀಗೆ ಭಾರತೀಯತೆಯ ಜಾಗೃತಿಗೆ ಇದು ಉತ್ತಮ ವೇದಿಕೆ ಎಂದರು”.
ವೇದಿಕೆಯಲ್ಲಿ ಪುತ್ತೂರು ನಗರ ಸಭೆಯ ಉಪಾಧ್ಯಕ್ಷರಾದ ಬಾಲಚಂದ್ರ ಕೆಮ್ಮಿಂಜೆ, ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಶ್ರೀ ಚಕ್ರಪಾಣಿ , ಎಲ್. ಟಿ. ಪದವೀಧರೆ ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಸುನಿತಾ , ಕೋಸ್ಟಲ್ ಹೋಮ್ ಮಾಲಕರಾದ ಶ್ರೀ ಸಂದೇಶ್ ರೈ ಸಂಪ್ಯ, ರಂಗ ನಿರ್ದೆಶಕ ಉದಯ ಸಾರಂಗ್ , ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಭಟ್ , ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಯಸ್, ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ವಿಲ್ಮಾ ಫೆರ್ನಾಂಡಿಸ್ , ಮೇಳದ ನಾಯಕ ಸ್ಕೌಟರ್ ಬಾಲಕೃಷ್ಣ ಪೊರ್ದಾಲ್ ಉಪಸ್ಥಿತರಿದ್ದರು.

ಬಳಿಕ ಉದಯ ಸಾರಂಗ್ ಖ್ಯಾತ ರಂಗ ನಿರ್ದೆಶಕರು , ಶಿಕ್ಷಕರು, ಸತ್ಯ ನಾರಾಯಣ ಪ್ರೌಡ ಶಾಲೆ ಪೆರ್ಲ ರವರಿಂದ ಅಭಿನಯ ಗೀತೆ , ಥಿಯೆಟರ್ ಗೇಮ್ಸ್ ಹಾಗೂ ಮನೋರಂಜನಾತ್ಮಕ ಆಟಗಳು ನೇರವೇರಿತು. ಮಧ್ಯಾಹ್ನದ ಬಳಿಕ ಸ್ಕೌಟ್ ವಿದ್ಯಾರ್ಥಿಗಳಿಂದ ಗೂಡು ದೀಪ ರಚನೆ, ಗೈಡ್ಸ್ ವಿದ್ಯಾರ್ಥಿಗಳಿಂದ ನಕ್ಷತ್ರ ರಚನೆ ,ಕಬ್ ವಿದ್ಯಾರ್ಥಿಗಳಿಂದ ರಾಷ್ಟ್ರಧ್ವಜ ರಚನೆ, ಬುಲ್ ಬುಲ್ ವಿದ್ಯಾರ್ಥಿಗಳಿಂದ ಎಲೆಗಳಿಂದ ಆಕೃತಿ ತಯಾರಿ ನಡೆಯಿತು.ನಂತರ ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳಿಂದ ಬೆಂಕಿ ಬಳಸದ ಅಡುಗೆ ತಯಾರಿ ನಡೆಯಿತು. ಸಂಜೆ 350 ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಯನ್ನು ಶ್ರೀ ರಾಮಚಂದ್ರ ಭಟ್ ಉಪಾಧ್ಯಕ್ಷರು ರಕ್ಷಕ ಶಿಕ್ಷಕ ಸಂಘ ಉದ್ಘಾಟಿಸಿದರು. ದರ್ಬೆ ವೃತ್ತದ ಮೂಲಕ ಚೆಂಡೆ, ವಾದ್ಯ, ಘೋಷಗಳೊಂದಿಗೆ ಆಕರ್ಷಕವಾಗಿ ನೆರವೇರಿತು. ತದನಂತರ ಶಾಲಾ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ಮಕ್ಕಳಿಂದ ರಸಮಂಜರಿ ಕಾರ್ಯಕ್ರಮ ನೆರವೇರಿತು

ಸಂಜೆ ಶಿಬಿರಾಗ್ನಿ ಕಾರ್ಯಕ್ರಮ ನೆರವೇರಿತು. ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ. ಎಸ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಅಭೂತಪೂರ್ವ ಸಂಘಟನೆಗೆ ಅಭಿನಂದನೆ ಸಲ್ಲಿಸಿದರು.ಭವ್ಯ ಶಿಬಿರಾಗ್ನಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ಪುರಂದರ ಹೆಗ್ಡೆ ಮಾನ್ಯ ತಹಶಿಲ್ದಾರರು ಪುತ್ತೂರು ತಾಲೂಕು ” ಇದು ಒಂದು ಅದ್ಬುತ ಕಾರ್ಯಕ್ರಮ, ವಿದ್ಯಾರ್ಥಿಗಳ ಶಿಸ್ತು ಕಾರ್ಯಕ್ರಮದ ಅದ್ಬುತ ಸಂಘಟನೆ, ಸೇರಿದ ಜನಸ್ತೋಮ ಸಂಸ್ಥೆಯ ಉನ್ನತಿಯನ್ನು ಪ್ರತಿಬಿಂಬಿಸುತ್ತದೆ” ಎಂದರು.ವೇದಿಕೆಯಲ್ಲಿ ಪುತ್ತೂರು ನಗರಸಭೆಯ ಕಮಿಷನರ್ ಮಧು ಎಸ್ ಮನೋಹರ್ , ಸ್ಕೌಟ್, ಗೈಡ್ , ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಹಿರಿಯ ವಿದ್ಯಾರ್ಥಿ ಖ್ಯಾತ ವೈದ್ಯರಾದ ಸೀತಾರಾಮ ಭಟ್ ಕಲ್ಲಮ, ಸ್ಕೌಟ್, ಗೈಡ್, ರಾಜ್ಯ ಸಂಘಟನಾ ಆಯುಕ್ತರಾದ ಭರತ್ ರಾಜ್, ಗೈಡರ್ ಪಾಪೆಮಜಲು ಶಾಲೆಯ ಶಿಕ್ಷಕಿ ಮೇಬಲ್ ಡಿಸೋಜ , ನಿವೃತ್ತ ಶಿಕ್ಷಕರಾದ ಶ್ರೀನಿವಾಸ್ ಬಿ, ಹಿಮಾಲಯ ವುಡ್ ಬ್ಯಾಚ್ ಪದವೀಧರೆ ಬೆಥನಿ ಪ್ರೌಢ ಶಾಲೆಯ ಶಿಕ್ಷಕಿ ಶ್ರೀಮತಿ ಮೈತ್ರಿ, ನಿವೃತ್ತ ಗೈಡ್ ಶಿಕ್ಷಕಿ ಶ್ರೀಮತಿ ಡೋರತಿ ಮೇರಿ ಡಿಸೋಜ , ಹಿರಿಯ ವಿದ್ಯಾರ್ಥಿ ದಂತ ವೈದ್ಯರಾದ ಡಾ. ಶ್ರೀ ಪ್ರಕಾಶ್ , ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಭಟ್ . ರಾಷ್ಟ್ರಮಟ್ಟದ ಪ್ರತಿಭೆ ಹಿರಿಯ ವಿದ್ಯಾರ್ಥಿನಿ ಪ್ರಾರ್ಥನಾ ಬಿ , ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಯಸ್, ಬೆಥನಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಸೆಲಿನ್ ಪೇತ್ರ , ಬ್ಯಾಂಕ್ ಆಫ್ ಬರೋಡಾದ ಪ್ರಭಂಧಕಿ ಶ್ರೀಮತಿ ಮಮತಾ ಶ್ರೀವಾಸ್ತವ್ , ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ವಿಲ್ಮಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಮಧ್ಯಪ್ರದೇಶದ ಬೋಪಾಲ್ ನಲ್ಲಿ ನಡೆದ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಕುಮಾರಿ ಪ್ರಾರ್ಥನಾ ಬಿ ರವರಿಗೆ ಸನ್ಮಾನಿಸಲಾಯಿತು. ಹಿಮಾಲಯ ವುಡ್ ಬ್ಯಾಚ್ ಪದವೀಧರೆ ಬೆಥನಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಮೈತ್ರಿರವರನ್ನು ಗೌರವಿಸಲಾಯಿತು. ಶಿಕ್ಷಕರಾದ ಬಾಲಕೃಷ್ಣ ಪೊರ್ದಾಲ್ ಸ್ವಾಗತಿಸಿ,ವಂದಿಸಿ,ಕಾರ್ಯಕ್ರಮ ನಿರೂಪಿಸಿದರು

 

ಬಳಿಕ ಶಾಲಾ ಗೈಡ್ಸ್ ವಿದ್ಯಾರ್ಥಿನಿಯರಿಂದ ಅತ್ಯಾ ಆಕರ್ಷಕ ಬೇಡರ ನೃತ್ಯ ನಡೆಯಿತು. ಜೂಲೊಗಳ ಆಗಮನಕ್ಕೆ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತು.ಶಿಬಿರಾಗ್ನಿ ಕಾರ್ಯಕ್ರಮದ ಉದ್ಗಾಟನೆಯನ್ನು ಶ್ರೀ ಪುರಂದರ ಹೆಗ್ಡೆ ಮಾನ್ಯ ತಹಶಿಲ್ದಾರರು ನೆರವೇರಿಸಿದರು. ನಂತರ 350 ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕ ಶಿಕ್ಷಕಿಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೆರವೇರಿತು.ಬಳಿಕ 1500 ಜನರಿಗೆ ಊಟದ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ, 2000ಕ್ಕಿಂತ ಅಧಿಕ ಮಂದಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸರ್ವರು ಗ್ಯಾಲರಿ ಯಲ್ಲಿ ಕುಳಿತು ಚಪ್ಪಾಳೆಯ ಸದ್ದಿನೊಂದಿಗೆ ಮಕ್ಕಳನ್ನು ಹುರಿದುಂಬಿಸಿದ್ದು ಮಕ್ಕಳ ಹುರುಪನ್ನು ಹಿಮ್ಮಡಿ ಗೊಳಿಸಿತು. ಸಂಜೆಯ ಶಿಬಿರಾಗ್ನಿ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆ ಗೊಂಡಿದ್ದು ವಿಶೇಷವಾಗಿತ್ತು.

 

ಎರಡನೆ ದಿನ ಬೆಳಿಗ್ಗೆ ಬಿ.ಪಿ.ಸಿಕ್ಸ್ ವ್ಯಾಯಾಮ ನಡೆದು,ಸರ್ವ ದರ್ಮ ಪ್ರಾರ್ಥನೆ ನೆರವೇರಿಸಲಾಯಿತು, ಬಳಿಕ ಉಪಹಾರ ನಡೆದು ವರ್ಣಕುಟೀರಾ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಪ್ರವೀಣ್ ವರ್ಣಕುಟೀರ ರವರಿಂದ ಕ್ರಾಪ್ಟ್ ತಯಾರಿ ತರಬೇತಿ ನಡೆಯಿತು,.ಬಳಿಕ ಸಾಹಸಮಯ ಆಟಗಳನ್ನು ಆಟವಾಡಿ ವಿದ್ಯಾರ್ಥಿಗಳು ಹರ್ಷಗೊಂಡರು.
ಕಿಮ್ ಗೇಮ್ಸ್ ಶಿಬಿರಾರ್ಥಿಗಳಿಗೆ ಹೊಸ ಅನುಭವವನ್ನು ನೀಡಿತು.

 

ಕಾರ್ಯಕ್ರಮದ ಕಡೇಯದಾಗಿ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ. ಎಸ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನೆರವೇರಿತು. ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳು ಎರಡು ದಿನದ ಶಿಬಿರದ ಅನುಭವವನ್ನು ಹಂಚಿಕೊಂಡರು. ಎರಡು ದಿನದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸ್ವಯಂ ಸೇವಕರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಭಟ್ , ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಯಸ್, ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ವಿಲ್ಮಾ ಫೆರ್ನಾಂಡಿಸ್ , ಮೇಳದ ನಾಯಕ ಸ್ಕೌಟರ್ ಬಾಲಕೃಷ್ಣ ಪೊರ್ದಾಲ್ , ಗೈಡರ್ ಗಳಾದ ನಳಿನಾಕ್ಷಿ ,ಭವ್ಯ ಯೋಗಿಶ್, ರೇಷ್ಮಾ,ದಿವ್ಯ ಕುಮಾರಿ, ಹರಿಣಾಕ್ಷಿ, ಜೋಸ್ಲಿನ್ ಪಾಯ್ಸ್ ಹಾಗೂ ಜಯಲಕ್ಷ್ಮಿ ಉಪಸ್ಥಿತರಿದ್ದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement